ವಾಟ್ಸಪ್ ಸ್ಟೇಟಸ್​ಗೆ ಅಶ್ಲೀಲ ವಿಡಿಯೋ ಹಾಕಿದಕ್ಕೆ ಯುವಕ ಅರೆಸ್ಟ್, ಪ್ರಾರ್ಥನಾ ಮಂದಿರಕ್ಕೆ ಹಿಂದು ಸಂಘಟನೆ ಮುತ್ತಿಗೆ

| Updated By: ಆಯೇಷಾ ಬಾನು

Updated on: Aug 03, 2021 | 11:24 AM

ಕುರಿಗಾಹಿ ಯುವಕನೋರ್ವ ಹಿಂದೂಗಳ ಭಾವನೆ ಕೆರಳಿಸುವಂತಹ. ಅಶ್ಲೀಲ ವಾಟ್ಸಾಪ್ ಸ್ಟೇಟಸ್ ಇಟ್ಟು ಪೊಲೀಸರ ಅತಿಥಿಯಾಗಿದ್ದಾನೆ‌‌. ಹಿಂದು ಸಂಘಟನೆ ಯುವತಿ ಎಂದು ಬಿಂಬಿಸಿ ಓರ್ವ ಯುವತಿ ಒಬ್ಬಳ ಅಶ್ಲೀಲ ವಿಡಿಯೋ ವಾಟ್ಸಾಪ್ ಸ್ಟೇಟಸ್ ಹಾಕಿ ವಿವಾದಕ್ಕೆ ಗುರಿಯಾಗಿದ್ದಾನೆ‌.

ವಾಟ್ಸಪ್ ಸ್ಟೇಟಸ್​ಗೆ ಅಶ್ಲೀಲ ವಿಡಿಯೋ ಹಾಕಿದಕ್ಕೆ ಯುವಕ ಅರೆಸ್ಟ್, ಪ್ರಾರ್ಥನಾ ಮಂದಿರಕ್ಕೆ ಹಿಂದು ಸಂಘಟನೆ ಮುತ್ತಿಗೆ
ವಾಟ್ಸಪ್ ಸ್ಟೇಟಸ್​ಗೆ ಯುವತಿಯ ಅಶ್ಲೀಲ ವಿಡಿಯೋ ಹಾಕಿಕೊಂಡಿದ್ದ ಯುವಕ ಅರೆಸ್ಟ್
Follow us on

ಬಾಗಲಕೋಟೆ: ಯುವತಿಯೊಬ್ಬಳ ಅಶ್ಲೀಲ ವಿಡಿಯೋ ಹರಿಬಿಟ್ಟ ಆರೋಪ ಹಿನ್ನೆಲೆಯಲ್ಲಿ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಮುಷ್ಠಿಗೇರಿ ಗ್ರಾಮದಲ್ಲಿ ನಡೆದಿದೆ. ಸಲೀಂ ನಧಾಪ್ ಬಂಧಿತ ಯುವಕ.

ಕುರಿಗಾಹಿ ಯುವಕನೋರ್ವ ಹಿಂದೂಗಳ ಭಾವನೆ ಕೆರಳಿಸುವಂತಹ. ಅಶ್ಲೀಲ ವಾಟ್ಸಾಪ್ ಸ್ಟೇಟಸ್ ಇಟ್ಟು ಪೊಲೀಸರ ಅತಿಥಿಯಾಗಿದ್ದಾನೆ‌‌. ಹಿಂದು ಸಂಘಟನೆ ಯುವತಿ ಎಂದು ಬಿಂಬಿಸಿ ಓರ್ವ ಯುವತಿ ಒಬ್ಬಳ ಅಶ್ಲೀಲ ವಿಡಿಯೋ ವಾಟ್ಸಾಪ್ ಸ್ಟೇಟಸ್ ಹಾಕಿ ವಿವಾದಕ್ಕೆ ಗುರಿಯಾಗಿದ್ದಾನೆ‌.ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಮುಷ್ಟಿಗೇರಿ ಗ್ರಾಮದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.

ಮುಷ್ಟಿಗೇರಿ ಗ್ರಾಮದ ಸಲೀಮ್ ನದಾಪ್ ಎಂಬ 18 ವರ್ಷದ ಯುವಕ ಇಂತಹ ಕೃತ್ಯವೆಸಗಿದ್ದಾನೆ.ಸಲೀಮ್ ನದಾಪ್ ಎಂಬ ಈ ಯುವಕ ಓರ್ವ ಕುರಿಗಾಹಿ ಆಗಿದ್ದು, ಪಾರ್ವರ್ಡ್ ಮಾಡಲಾದ ವಿಡಿಯೋ ತನ್ನ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದು,ಗ್ರಾಮದಲ್ಲಿ ಉದ್ವಿಗ್ನ ವಾತಾವರಣಕ್ಕೆ ಕಾರಣನಾಗಿದ್ದಾನೆ.ನಿನ್ನೆ ರಾತ್ರಿಯೇ ಇಂತಹದ್ದೊಂದು ಅಶ್ಲೀಲ ವಿಡಿಯೋ ಸ್ಟೇಟಸ್ ಇಟ್ಟುಕೊಂಡಿದ್ದು ಯಾರೂ ನೋಡಲಾರದಂತಹ ಸ್ಥಿತಿಯ ವಿಡಿಯೊ ಇದಾಗಿದೆ. ಇದರಿಂದ ಕೆರಳಿದ ಹಿಂದು ಸಂಘಟನೆ ಕಾರ್ಯಕರ್ತರು ಗ್ರಾಮದ ಕೆಲ ಹಿಂದು ಸಮುದಾಯದ ಜನರು ಪ್ರಾರ್ಥನಾ ಮಂದಿರಕ್ಕೆ ತೆರಳಿ ಮುತ್ತಿಗೆ ಹಾಕಿ ಪ್ರಾರ್ಥನಾ ಮಂದಿರಕ್ಕೆ ಕೀಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಕೆರೂರು ಠಾಣೆ ಪೊಲೀಸರು ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ತಡೆಯಲು ಪೊಲೀಸ್ ಭದ್ರತೆ ಕಲ್ಪಿಸಿದ್ದಾರೆ.ಯುವಕನನ್ನು ವಶಕ್ಕೆ ಪಡೆದಿದ್ದಾರೆ.ಅಶ್ಲೀಲ ವಿಡಿಯೊದಲ್ಲಿರುವ ಯುವಕ ಯುವತಿ ಯಾರೆಂಬುದು ಮಾತ್ರ ಗೊತ್ತಾಗಿಲ್ಲ.ಇನ್ನು ಈ ಬಗ್ಗೆ ಮುಸ್ಲಿಂ ಸಮುದಾಯದವರು ಹಿಂದು ಸಂಘಟನೆ ಕಾರ್ಯಕರ್ತರಿಂದ ರಕ್ಷಣೆ ಕೋರಿ ಬಾಗಲಕೋಟೆ ಎಸ್​ಪಿಗೆ ದೂರು ಕೊಡಲು ಮುಂದಾಗಿದ್ದಾರೆ.

ಮುಸ್ಲಿಂ ಪ್ರಾರ್ಥನಾ ಮಂದಿರಕ್ಕೆ ಮುತ್ತಿಗೆ ಹಾಕಿದ ಹಿಂದು ಸಂಘಟನೆ ಕಾರ್ಯಕರ್ತರು

ಇದನ್ನೂ ಓದಿ: ಆಫ್ರಿಕಾ ಪ್ರಜೆಗಳಿಂದ ದಾಂಧಲೆ ಪ್ರಕರಣ: ಗಲಭೆಗೆ ಪ್ರಚೋದನೆ ನೀಡಿದ್ದ ಮಹಿಳೆಗಾಗಿ ಹುಡುಕಾಟ

Published On - 11:10 am, Tue, 3 August 21