ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದಲ್ಲಿ ಬೆಡ್ ಸಿಗದೇ ಕೋವಿಡ್ ಸೋಂಕಿತ ಬಾರ್ ಮ್ಯಾನೇಜರ್ ನರಳಾಡಿ ಸಾವು…

ತಿಮ್ಮಣ್ಣ ಬಂಡಿವಡ್ಡರಗೆ ಜಿಲ್ಲಾ ಆಸ್ಪತ್ರೆ ಹಾಗೂ ಕುಮಾರೇಶ್ವರ ಆಸ್ಪತ್ರೆ ಎರಡು ಕಡೆಯೂ ಬೆಡ್ ಸಿಕ್ಕಿರಲಿಲ್ಲ. ವಾಪಸ್ಸು ಮುಧೋಳ ತಾಲ್ಲೂಕಾಸ್ಪತ್ರೆಗೆ ಬಂದಿದ್ದರು. ಇಂದು ಬೆಳಿಗ್ಗೆ ಮುಧೋಳ ತಾಲೂಕು‌ ಆಸ್ಪತ್ರೆ ಬಾಗಿಲು ಬಳಿ, ಬೆಡ್ ಸಿಗದೇ ಕೋವಿಡ್ ಸೋಂಕಿತ ನರಳಾಡಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮುಧೋಳ ಡಿಸಿಎಂ ಗೋವಿಂದ ಕಾರಜೋಳ ಪ್ರತಿನಿಧಿಸುವ ಕ್ಷೇತ್ರವಾಗಿದೆ.

ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದಲ್ಲಿ ಬೆಡ್ ಸಿಗದೇ ಕೋವಿಡ್ ಸೋಂಕಿತ ಬಾರ್ ಮ್ಯಾನೇಜರ್ ನರಳಾಡಿ ಸಾವು...
ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದಲ್ಲಿ ಬೆಡ್ ಸಿಗದೇ ಕೋವಿಡ್ ಸೋಂಕಿತ ಬಾರ್ ಮ್ಯಾನೇಜರ್ ನರಳಾಡಿ ಸಾವು...

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಸಿಗದೇ ಸಾಯುತ್ತಿರುವವರ ಸಂಖ್ಯೆ ಹೆಚ್ಚಿದೆ. ಆಕ್ಷಿಜನ್ ಬೆಡ್ ಸಿಗದೆ ಇಂದು ಬೆಳಿಗ್ಗೆ ಮುಧೋಳ ತಾಲೂಕು‌ ಆಸ್ಪತ್ರೆ ಬಾಗಿಲು ಬಳಿ ಸೋಂಕಿತರೊಬ್ಬರು ಸಾವಿಗೀಡಾಗಿದ್ದಾರೆ. ಮುಧೋಳ ಪಟ್ಟಣವು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರವಾಗಿದೆ. ತಿಮ್ಮಣ್ಣ ಬಂಡಿವಡ್ಡರ(34) ಮೃತ ಯುವಕ. ಇವರು ಮಹಾಲಿಂಗಪುರದ ಬಾರ್ ಒಂದರಲ್ಲಿ ಮ್ಯಾನೇಜರ್ ಆಗಿದ್ದರು.

ಮೂಲತಃ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದ ತಿಮ್ಮಣ್ಣ ಬಂಡಿವಡ್ಡರ ಅವರು ಈ ಹಿಂದೆ ಮುಧೋಳ ಕೋವಿಡ್ ಸೆಂಟರ್ ನಲ್ಲಿ ನಾಲ್ಕು ದಿನ ಇದ್ದು ಚಿಕಿತ್ಸೆ ಪಡೆದು ಹೋಗಿದ್ದರು. ಬಳಿಕ ಹೋಮ್ ಐಸೋಲೇಶನಲ್ಲಿ ಇದ್ದರು. ನಿನ್ನೆ ಸಂಜೆ ಆರೋಗ್ಯದಲ್ಲಿ ಏರುಪೇರು ಆಗಿದೆ. ಚಿಕಿತ್ಸೆಗಾಗಿ ಸಂಜೆ 4.30 ಕ್ಕೆ ಮುಧೋಳ ತಾಲೂಕು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆಕ್ಸಜನ್ ಪ್ರಮಾಣ ಕಡಿಮೆ ಇದ್ದಿದ್ದರಿಂದ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದರು.

ಆದರೆ ಜಿಲ್ಲಾ ಆಸ್ಪತ್ರೆ ಹಾಗೂ ಕುಮಾರೇಶ್ವರ ಆಸ್ಪತ್ರೆ ಎರಡು ಕಡೆಯೂ ಬೆಡ್ ಸಿಕ್ಕಿರಲಿಲ್ಲ. ತಿಮ್ಮಣ್ಣ ಬಂಡಿವಡ್ಡರ ವಾಪಸ್ಸು ಮುಧೋಳ ತಾಲ್ಲೂಕಾಸ್ಪತ್ರೆಗೆ ಬಂದಿದ್ದರು. ಇಂದು ಬೆಳಿಗ್ಗೆ ಮುಧೋಳ ತಾಲೂಕು‌ ಆಸ್ಪತ್ರೆ ಬಾಗಿಲು ಬಳಿ, ಬೆಡ್ ಸಿಗದೇ ಕೋವಿಡ್ ಸೋಂಕಿತ ನರಳಾಡಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮುಧೋಳ ಡಿಸಿಎಂ ಗೋವಿಂದ ಕಾರಜೋಳ ಪ್ರತಿನಿಧಿಸುವ ಕ್ಷೇತ್ರವಾಗಿದೆ.

(youth died due to coronavirus in dcm govind karjol assembly constituency mudhol bagalkot)

ನೂರು ವರ್ಷಗಳ ಸಮಸ್ಯೆಗಳನ್ನು ಮೋದಿ ಬಗೆಹರಿಸಿದ್ದಾರೆ, ಬೇರೆ ಯಾವ ಸಮಸ್ಯೆಗಳು ಉಳಿದಿವೆ: ಗೋವಿಂದ ಕಾರಜೋಳ