ಅನಾಥ ಗೋವುಗಳಿಗೆ ಆಪ್ತರಕ್ಷಕರಾದ ಕುಟುಂಬ; ತಂದೆಯ ಕೊನೆಯ ಆಸೆ ಈಡೇರಿಸಲು ಗೋವುಗಳ ಆರೈಕೆ

ಬಾಗಮಾರ ಅವರು ಸಾಕುತ್ತಿರುವ ಹಸುಗಳ ಹಾಲು ಹಿಂಡುವುದಿಲ್ಲ. ಎಲ್ಲಾ ಹಾಲನ್ನು ಕರುಗಳಿಗೆ ಕುಡಿಸಲಾಗುತ್ತದೆ. ಕೆಲ ರೈತರು ವಯಸ್ಸಾದ ನಂತರ ಗೋವುಗಳನ್ನು ಮಾರಾಟ ಮಾಡುತ್ತಾರೆ. ಇಂತಹ ಹಸುಗಳನ್ನು ಜಾನುವಾರು ಸಂತೆ ಮಾರುಕಟ್ಟೆಯಲ್ಲಿ ಖರೀದಿಸಿ ತಂದು ಈ ಗೋಶಾಲೆಯಲ್ಲಿ ಪಾಲನೆ ಪೋಷಣೆ ಮಾಡುತ್ತಿರುವುದು ಬಾಗಮಾರ ಕುಟುಂಬದ ವಿಶೇಷ.

ಅನಾಥ ಗೋವುಗಳಿಗೆ ಆಪ್ತರಕ್ಷಕರಾದ ಕುಟುಂಬ; ತಂದೆಯ ಕೊನೆಯ ಆಸೆ ಈಡೇರಿಸಲು ಗೋವುಗಳ ಆರೈಕೆ
ಭಗವಾನ ಮಹಾವೀರ ಜೈನ್ ಗೋಶಾಲೆ
Edited By:

Updated on: Apr 09, 2021 | 9:32 AM

ಗದಗ: ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ‌ಗೆ ತಂದಿದೆಯಾದರೂ ಅದು ಯಾವ ಮಟ್ಟಿಗೆ ಪಾಲನೆ ಆಗುತ್ತಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಗದಗ ಜಿಲ್ಲೆಯ ಕುಟುಂಬ ಮಾತ್ರ ಸದ್ದಿಲ್ಲದೇ ಕಸಾಯಿಖಾನೆ ಪಾಲಾಗುವ ಗೋವುಗಳ ರಕ್ಷಣೆ ಮಾಡಿ ಸಾಕಿ ಸಲಹುತ್ತಿದೆ. ಈ ಕುಟುಂಬದ ಸದಸ್ಯರು ಯಾವುದೇ ಫಲಾಪೇಕ್ಷೆ ಇಲ್ಲದೇ ನೂರಾರು ಗೋವುಗಳನ್ನು ಸಾಕುವ ಮೂಲಕ ಸದ್ದಿಲ್ಲದೇ ಗೋ ಸೇವೆಯ ಮೌನ ಕ್ರಾಂತಿ ಮಾಡುತ್ತಿದ್ದಾರೆ.

ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿನ ಬಾಗಮಾರ ಎನ್ನುವವರು ಈ ಭಗವಾನ ಮಹಾವೀರ ಜೈನ್ ಗೋಶಾಲೆಯನ್ನು ನಡೆಸುತ್ತಿದ್ದಾರೆ. ಕುಟುಂಬದ ಮಗುವಿನಂತೆ ಗೋವುಗಳನ್ನು ನೋಡಿಕೊಳ್ಳುತ್ತಿದ್ದು, ಪ್ರತಿ ವರ್ಷ 10 ರಿಂದ12 ಲಕ್ಷ ರೂಪಾಯಿ ಗೋವುಗಳ ಪಾಲನೆಗೆ ಖರ್ಚು ಮಾಡುತ್ತಿದ್ದಾರೆ. ಮೂಲತಃ ಬಟ್ಟೆ ವ್ಯಾಪಾರಿಯಾದ ಬಾಗಮಾರ ಕುಟುಂಬ ಹಲವು ವರ್ಷಗಳಿಂದ ಗೋವುಗಳ ರಕ್ಷಣೆ ಮಾಡುತ್ತಿದೆ. ವಿಶೇಷ ಎಂದರೆ ಕಸಾಯಿಖಾನೆಗೆ ಹೋಗುವ ಹಸುಗಳ ರಕ್ಷಣೆ ಮಾಡುವುದೇ ಈ ಕುಟುಂಬದ ಗುರಿ.

ಬಾಗಮಾರ ಅವರು ಸಾಕುತ್ತಿರುವ ಹಸುಗಳ ಹಾಲು ಹಿಂಡುವುದಿಲ್ಲ. ಎಲ್ಲಾ ಹಾಲನ್ನು ಕರುಗಳಿಗೆ ಕುಡಿಸಲಾಗುತ್ತದೆ. ಕೆಲ ರೈತರು ವಯಸ್ಸಾದ ನಂತರ ಗೋವುಗಳನ್ನು ಮಾರಾಟ ಮಾಡುತ್ತಾರೆ. ಇಂತಹ ಹಸುಗಳನ್ನು ಜಾನುವಾರು ಸಂತೆ ಮಾರುಕಟ್ಟೆಯಲ್ಲಿ ಖರೀದಿಸಿ ತಂದು ಈ ಗೋಶಾಲೆಯಲ್ಲಿ ಪಾಲನೆ ಪೋಷಣೆ ಮಾಡುತ್ತಿರುವುದು ಬಾಗಮಾರ ಕುಟುಂಬದ ವಿಶೇಷ. ಈ ಗೋ ಶಾಲೆಯಲ್ಲಿ 150 ಕ್ಕೂ ಹೆಚ್ಚು ಜಾನುವಾರುಗಳು ಇದ್ದು, ಬಾಗಮಾರ ಕುಟುಂಬದವರು ಈ ಗೋವುಗಳನ್ನು ಆರೈಕೆ ಮಾಡುತ್ತಿದ್ದಾರೆ.

cow shed

ಅನಾಥ ಗೋವುಗಳ ರಕ್ಷಣೆಗೆ ಮುಂದಾದ ಕುಟುಂಬ

ರಿಕಬ್ ಚಂದ್ ಬಾಗಮಾರ ಪ್ರತಿ ನಿತ್ಯ ಬೆಳಗ್ಗೆ 6 ಗಂಟೆಗೆ ಗೋಶಾಲೆಗೆ ಭೇಟಿ ನೀಡುತ್ತಾರೆ. ಗೋಶಾಲೆಯಲ್ಲಿ ನಿಂತು ಎಲ್ಲ ಜಾನುವಾರಗಳಿಗೆ ಜೈನ್ ಮಂತ್ರ ಪಠಣೆ ಮಾಡುತ್ತಾರೆ. ಈ ಮಂತ್ರದ ಉದ್ದೇಶ ಎಲ್ಲಾ ಗೋವುಗಳಿಗೆ ಮಂಗಳವಾಗಲಿ ಎನ್ನುವುದಾಗಿದ್ದು, ಸುಖ, ಶಾಂತಿ ನೀಡಲಿ ಎನ್ನುವ ಅರ್ಥ ಮಂತ್ರಕ್ಕಿದೆ. ಹೀಗಾಗಿ ನಿತ್ಯ ಮಂತ್ರ ಪಠಣ ಆದ ಮೇಲೆ ಮೇವು, ನೀರು ನೀಡಲಾಗುತ್ತದೆ. ಎರಡು ಎಕರೆ ಪ್ರದೇಶದಲ್ಲಿ ತಗಡು ಚಾವಣಿ ಹಾಕಿದ್ದು, ಮೂರು ಶೆಡ್ಡಿನಲ್ಲಿ ಹಸುಗಳನ್ನು ಸುವ್ಯವಸ್ಥಿತವಾಗಿ ನಿರ್ವಹಣೆ ಮಾಡಲಾಗುತ್ತಿದೆ.

cow shed

ಗೋವುಗಳ ರಕ್ಷಣೆಗೆ ಮುಂದಾದ ರಿಕಬ್ ಚಂದ್ ಬಾಗಮಾರ

ಹಸುಗಳು ವಾಸಿಸುವ ಸ್ಥಳವನ್ನು ಸ್ವಚ್ಛ ಮತ್ತು ಸುವ್ಯವಸ್ಥಿತವಾಗಿಡಲು ಗೋಪಾಲಕರನ್ನು ನೇಮಿಸಲಾಗಿದೆ. ಹಸುಗಳಿಗೆ ನಿತ್ಯ ಸ್ನಾನ ಮಾಡಿಸಲಾಗುತ್ತಿದೆ. ಅವುಗಳಿಗೆ ಮುಕ್ತವಾಗಿ ಅಡ್ಡಾಡಲು ಮತ್ತು ಶರೀರಕ್ಕೆ ವ್ಯಾಯಾಮ ಸಿಗುವಂತೆ ಪ್ರತಿದಿನ ಅವುಗಳನ್ನು ತಿರುಗಾಡಲು ಬಿಡಲಾಗುತ್ತದೆ. ಈ ಗೋಶಾಲೆಯನ್ನು 1997ರಲ್ಲಿ ಸ್ಥಾಪಿಸಲಾಗಿದೆ. 100 ಗೋಶಾಲೆ ಮಾಡಬೇಕು ಎನ್ನುವುದು ನಮ್ಮ ಆಸೆ. ಆ ನಿಟ್ಟಿನಲ್ಲಿ ಸತತ ಪ್ರಯತ್ನದಲ್ಲಿದ್ದೇವೆ. ನಮ್ಮ ತಂದೆಯ ಕೊನೆ ಆಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಈ ಗೋಶಾಲೆ ನಿರ್ಮಾಣ ಮಾಡಿದ್ದೇವೆ ಎಂದು ಗೋಶಾಲೆ ಮಾಲೀಕ ಶೀತಲ್ ಬಾಗಮಾರ್ ಹೇಳಿದ್ದಾರೆ.

ಗೋವುಗಳನ್ನು ಪ್ರೀತಿಸುವವರು ಅವುಗಳ ರಕ್ಷಣೆ ಮಾಡುವವರು ಇಂದಿನ ಕಾಲದಲ್ಲಿ ಸಿಗುವುದು ವಿರಳ ಅಂತಹದರಲ್ಲಿ ಆದಾಯ ರಹಿತವಾದರೂ ಗೋವುಗಳ ರಕ್ಷಣೆ ಮಾಡುವಲ್ಲಿ ಮುಂದಾಗಿರುವ ಬಾಗಮಾರ್ ನಿಜಕ್ಕೂ ಇತರರಿಗೆ ಸ್ಪೂರ್ತಿ.

YouTube video player

ಇದನ್ನೂ ಓದಿ: 

ಜಿಲ್ಲೆಯ ಕಾವಿಧಾರಿಯೊಬ್ಬರು ದೇಶಿ ಗೋವುಗಳನ್ನ ಸಾಕಿ, ಅವುಗಳ ಮಹತ್ವವನ್ನ ತಿಳಿಸಿ ಕೊಡುತ್ತಿದ್ದಾರೆ

ಮಂತ್ರಾಲಯದ ಗೋಶಾಲೆಯಲ್ಲಿ ಕಾಲ ಕಳೆದ ಡಿ ಬಾಸ್​ ದರ್ಶನ್​! ವಿಡಿಯೋ ವೈರಲ್​

(Baghmara family in gajendragad town of gadag is sheltering cattle of cow)

 

Follow Us