AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಷ ಹಂತಕರ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ; ಭಯ ಸೃಷ್ಟಿಸಲು ಹಿಂದೂ ಕಾರ್ಯಕರ್ತನ ಹತ್ಯೆ, ಮಾಹಿತಿ ಬಹಿರಂಗ

ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್​ಐಎ ವಿಶೇಷ ಕೋರ್ಟ್​​ಗೆ ಅಧಿಕಾರಿಗಳು​ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಹಿಂದೂ ನಾಯಕರಲ್ಲಿ ಭಯದ ವಾತಾವರಣ ಉಂಟುಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಹತ್ಯೆ ಮಾಡುವ ಮುಖ್ಯ ಉದ್ದೇಶವನ್ನು ಆರೋಪಿಗಳು ಹೊಂದಿದ್ದರು ಎಂಬ ವಿಚಾರ ತಿಳಿದುಬಂದಿದೆ.

ಹರ್ಷ ಹಂತಕರ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ; ಭಯ ಸೃಷ್ಟಿಸಲು ಹಿಂದೂ ಕಾರ್ಯಕರ್ತನ ಹತ್ಯೆ, ಮಾಹಿತಿ ಬಹಿರಂಗ
ಕೊಲೆಯಾದ ಬಜರಂಗದಳ ಕಾರ್ಯಕರ್ತ ಹರ್ಷ
TV9 Web
| Updated By: Rakesh Nayak Manchi|

Updated on: Sep 06, 2022 | 2:32 PM

Share

ಶಿವಮೊಗ್ಗ: ಜಿಲ್ಲೆಯಲ್ಲಿ ನಡೆದಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್​ಐಎ ವಿಶೇಷ ಕೋರ್ಟ್​​ಗೆ ಅಧಿಕಾರಿಗಳು​ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಹತ್ಯೆಗೆ 15 ದಿನದಿಂದಲೂ ಸಂಚು ನಡೆಸಲಾಗಿದ್ದು, ಆರೋಪಿಗಳಿಗೆ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಹತ್ಯೆ ಮಾಡೋದೇ ಮುಖ್ಯ ಉದ್ದೇಶ ಆಗಿತ್ತು ಎಂದು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದಲ್ಲಿ ಹಿಜಾಬ್ ವಿವಾದ ನಡುವೆ ಬಜರಂಗದಳದ ಕಾರ್ಯಕರ್ತ ಹರ್ಷನನ್ನು ಆರೋಪಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ, ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಿತ್ತು. ಅದರಂತೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಸದ್ಯ ಆರೋಪಿಗಳ ವಿರುದ್ಧ 750ಕ್ಕೂ ಹೆಚ್ಚು ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ.

ಹಿಂದೂ ಕಾರ್ಯಕರ್ತರ ಹತ್ಯೆಯೇ ಇವರ ಉದ್ದೇಶ

ಎನ್​ಐಎ ಅಧಿಕಾರಿಗಳು 10 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್​ಶೀಟ್​ನಲ್ಲಿ ಅನೇಕ ಅಂಶಗಳನ್ನು ಉಲ್ಲೇಖಿಸಿದ್ದಾರೆ. ದೋಷಾರೋಪಣೆ ಪಟ್ಟಿಯಲ್ಲಿ ಆರೋಪಿಗಳಿಗೆ ಹಿಂದೂ ಸಂಘಟನೆಯ ಕಾರ್ಯಕರ್ತನ ಹತ್ಯೆ ಮಾಡೋದೇ ಮುಖ್ಯ ಉದ್ದೇಶ ಆಗಿತ್ತು. ಹಿಂದೂ ವ್ಯಕ್ತಿಯೊಬ್ಬನ ಹತ್ಯೆ ಮಾಡಿದರೆ ಭಯದ ವಾತಾವರಣ ನಿರ್ಮಾಣ ಆಗಲಿದೆ ಎಂಬ ಉದ್ದೇಶದಿಂದ 15 ದಿನಗಳಿಂದ ಕಾದು ಹರ್ಷನನ್ನು ಹತ್ಯೆ ಗೈದಿರುವುದನ್ನು ಉಲ್ಲೇಖಿಸಿಲಾಗಿದೆ.

ಹರ್ಷ ಹಿಂದೂ ಸಂಘಟನೆಯಲ್ಲಿ ಸಕ್ರಿಯನಾಗಿದ್ದು, ಹಳೆಯ ದ್ವೇಷ ಇಟ್ಟುಕೊಂಡು ಹತ್ಯೆ ಮಾಡುವುದಕ್ಕೆ ಪ್ರಕರಣದ ಮೊದಲ ಆರೋಪಿ ಆಯ್ಕೆ ಮಾಡಿಕೊಂಡಿದ್ದನು. ಈ ಹತ್ಯೆ ಹಿಂದೆ ಯಾವುದೇ ಸಂಘಟನೆ ಕೈವಾಡ ಇಲ್ಲ. ಹತ್ಯೆಗೆ ಮಾರಕಾಸ್ತ್ರ ಖರೀದಿ ಮಾಡಲು ಹಣದ ಅಗತ್ಯ ಇತ್ತು. ಅದಕ್ಕಾಗಿ ಆರೋಪಿಗಳು ಕುಂಸಿ ಬಳಿ ಒಂದು ಮನೆಯಲ್ಲಿ ಕಳ್ಳತನ ಮಾಡಿದ್ದರು. ಮನೆಯಲ್ಲಿ ಸಿಕ್ಕಿದ್ದ ಹಣದಲ್ಲೇ ಮಚ್ಚು, ಲಾಂಗು ಸೇರಿದಂತೆ ಮಾರಕಾಸ್ತ್ರ ಖರೀದಿ ಮಾಡಿದ್ದರು. ಬಂಧಿತ ಆರೋಪಿಗಳಲ್ಲಿ ರೋಷನ್ ಭದ್ರಾವತಿಯಲ್ಲಿ ಮಾರಕಾಸ್ತ್ರಗಳನ್ನು ಖರೀದಿ ಮಾಡಿದ್ದ. ಬಂಧಿತ ಆರೋಪಿಗಳಲ್ಲಿ ಮೂವರನ್ನು ಹೊರತುಪಡಿಸಿ ಉಳಿದವರೆಲ್ಲ ಹಿಂದೆ ಹಲವಾರು ಕೇಸ್‌ಗಳಲ್ಲಿ ಭಾಗಿಯಾಗಿದ್ದರು. ಬಂಧಿತ 10 ಮಂದಿ ಆರೋಪಿಗಳ ಹೇಳಿಕೆಗಳ ಜೊತೆಗೆ ತಾಂತ್ರಿಕ ಸಾಕ್ಷ್ಯಗಳನ್ನು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

ಹರ್ಷ ಕೊಲೆ ಆರೋಪಿಗಳ ತನಿಖೆಯಿಂದಾಗಿ ಆರೋಪಿಗಳು ರಾಜ್ಯದಲ್ಲಿ ಕೋಮುಸೌಹಾರ್ದತೆ ಕದಡುವುದರ ಜೊತೆಗೆ ಜನರಲ್ಲಿ ಭಜಯದ ವಾತಾವರಣ ಉಂಟುಮಾಡುವ ಹಾಗೂ ಗಲಾಟೆ ಎಬ್ಬಿಸುವ ಉದ್ದೇಶವನ್ನು ಹೊಂದಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಇದು ಕದಂಬರ ಬಗೆಗಿನ ಕಥೆ ಅಲ್ಲ’; ಸ್ಟೋರಿ ಬಗ್ಗೆ ರಿಷಬ್ ಸ್ಪಷ್ಟನೆ
‘ಇದು ಕದಂಬರ ಬಗೆಗಿನ ಕಥೆ ಅಲ್ಲ’; ಸ್ಟೋರಿ ಬಗ್ಗೆ ರಿಷಬ್ ಸ್ಪಷ್ಟನೆ
ರಾಜಸ್ಥಾನದಲ್ಲಿ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿ ಪೆಟ್ರೋಲ್ ಬಂಕ್ ಲೂಟಿ
ರಾಜಸ್ಥಾನದಲ್ಲಿ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿ ಪೆಟ್ರೋಲ್ ಬಂಕ್ ಲೂಟಿ
ವಿದ್ಯುತ್ ಕಂಬ ಏರಿ ತಂತಿ ಹಿಡಿದು ನೇತಾಡಿದ ಮಕ್ಕಳು
ವಿದ್ಯುತ್ ಕಂಬ ಏರಿ ತಂತಿ ಹಿಡಿದು ನೇತಾಡಿದ ಮಕ್ಕಳು
ದಸರಾ ದೀಪಾಲಂಕಾರ: ಲೈಟಿಂಗ್ಸ್​ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ
ದಸರಾ ದೀಪಾಲಂಕಾರ: ಲೈಟಿಂಗ್ಸ್​ನಿಂದ ಝಗಮಗಿಸುತ್ತಿರುವ ಮೈಸೂರು ರಸ್ತೆಗಳ ನೋಡಿ
ಇಂದೋರ್​​ನಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿತ, ಇಬ್ಬರು ಸಾವು
ಇಂದೋರ್​​ನಲ್ಲಿ ಭಾರಿ ಮಳೆಗೆ ಕಟ್ಟಡ ಕುಸಿತ, ಇಬ್ಬರು ಸಾವು
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ 2ನೇ ದಿನ: ಬ್ರಹ್ಮಚಾರಿಣಿ ಪೂಜೆಯ ಮಹತ್ವ, ಫಲಗಳೇನು? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್