ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ: 1 ಎಕರೆ 25 ಗುಂಟೆ ಒತ್ತುವರಿ ಜಾಗ ತೆರವು

Edited By:

Updated on: Nov 09, 2026 | 11:34 AM

ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮಾಲೀಕತ್ವದ ಜಿ ಸ್ಕ್ವೇರ್ ನಿರ್ಮಾಣ ಸಂಸ್ಥೆ ಒತ್ತುವರಿ ಮಾಡಿಕೊಂಡಿದ್ದ 1 ಎಕರೆ 25 ಗುಂಟೆ ಸೇರಿದಂತೆ ಒಟ್ಟು 4 ಎಕರೆ ಸರ್ಕಾರಿ ಜಾಗವನ್ನು ಬಳ್ಳಾರಿ ಜಿಲ್ಲಾಡಳಿತ ತೆರವುಗೊಳಿಸಿದೆ. ಇನ್ನು ತೆರವು ಕಾರ್ಯಚರಣೆ ಮುಗಿದ ಬೆನ್ನಲ್ಲೇ, ಕಾಂಪೌಡ್ ವಾಲ್​​ಗಳಿಗೆ ಹಾಕಿದ ಕಬ್ಬಿಣದ ಗ್ರಿಲ್​​ನ ಜನ ಹೊತ್ತೊಯ್ದಿದ್ದಾರೆ.

ಬಳ್ಳಾರಿ, ನವೆಂಬರ್​​ 09: ಶಾಸಕ ಜನಾರ್ದನ ರೆಡ್ಡಿ ಮಾಲೀಕತ್ವದ ಜಿ ಸ್ಕ್ವೇರ್​​​​ ನಿರ್ಮಾಣ ಸಂಸ್ಥೆ ಒತ್ತುವರಿ ಮಾಡಿಕೊಂಡಿದ್ದ 1 ಎಕರೆ 25 ಗುಂಟೆ ಜಾಗವನ್ನು ಬಳ್ಳಾರಿ ಜಿಲ್ಲಾಡಳಿತದಿಂದ ತೆರವುಗೊಳಿಸಲಾಗಿದೆ. ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಕಾಂಪೌಂಡ್​​​ ನಿರ್ಮಿಸಲಾಗಿತ್ತು. ಇತರರಿಂದ ಒತ್ತುವರಿ ಸೇರಿ ಒಟ್ಟು 4 ಎಕರೆ ಜಾಗ ತೆರವು ಮಾಡಲಾಗಿದ್ದು, ನಾಲ್ಕೂ ಎಕರೆ ಜಾಗದಲ್ಲೂ ಸುಸಜ್ಜಿತ ಕಾಂಪೌಂಡ್ ನಿರ್ಮಿಸಲಾಗಿತ್ತು. ಬಳ್ಳಾರಿ ಎಡಿಸಿ ಜಬೇರ್​ ಅಹ್ಮದ್​ ಮತ್ತು ಎಸಿ ರಾಜೇಶ್​ ನೇತೃತ್ವದಲ್ಲಿ ತೆರವು ಕಾರ್ಯ ನಡೆದಿದೆ. ಇನ್ನು ತೆರವು ಕಾರ್ಯಚರಣೆ ಮುಗಿದ ಬೆನ್ನಲ್ಲೇ, ಕಾಂಪೌಡ್ ವಾಲ್​​ಗಳಿಗೆ ಹಾಕಿದ ಕಬ್ಬಿಣದ ಗ್ರಿಲ್​​ನ ಜನ ಹೊತ್ತೊಯ್ದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ವಿನಾಯಕ ಬಡಿಗೇರ್​