AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಗೆದ್ದು ಬೀಗಿದ ಇ.ತುಕಾರಾಂ ಆಸ್ತಿ ವಿವರ ಹೀಗಿದೆ

ಗಣಿನಾಡು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ ಸೋಲಾಗಿದೆ. ಕಾಂಗ್ರೆಸ್​ ಅಭ್ಯರ್ಥಿ ಇ.ತುಕಾರಾಂ ಅವರು 98 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆದ್ದು ಬೀಗಿದ್ದಾರೆ. ಇ.ತುಕಾರಾಂ ಅವರ ಆಸ್ತಿ ವಿವರ ಹೀಗಿದೆ.

ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಗೆದ್ದು ಬೀಗಿದ ಇ.ತುಕಾರಾಂ ಆಸ್ತಿ ವಿವರ ಹೀಗಿದೆ
ಇ.ತುಕಾರಾಂ
ಆಯೇಷಾ ಬಾನು
|

Updated on: Jun 06, 2024 | 1:09 PM

Share

ಬಳ್ಳಾರಿ, ಜೂನ್.06: ಬಳ್ಳಾರಿ ಲೋಕಸಭಾ ಚುನಾವಣೆ 2024ರಲ್ಲಿ (Lok Sabha Election) ಮಾಜಿ ಸಚಿವ ಶ್ರೀರಾಮುಲು (B Sriramulu) ಅವರ ವಿರುದ್ಧ ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್​ನ ಇ ತುಕಾರಾಂ (E Tukaram) ಗೆದ್ದು ಬೀಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲೂ ಸೋಲು ಕಂಡಿದ್ದ ಶ್ರೀರಾಮುಲು ಅವರ ರಾಜಕೀಯ ಭವಿಷ್ಯ ಅಂತ್ಯವಾಗುತ್ತಾ ಎಂಬ ಮಾತುಗಳು ಕೇಳಿಬರುತ್ತಿವೆ. ಒಟ್ಟು 8 ಕ್ಷೇತ್ರದಿಂದ ಕಾಂಗ್ರೆಸ್​ಗೆ 7,30,845 ಮತಗಳು ಸಿಕ್ಕಿದ್ದು ಬಿಜೆಪಿಗೆ 6,31,858 ಮತಗಳು ಸಿಕ್ಕಿವೆ. ಈ ಮೂಲಕ ಕಾಂಗ್ರೆಸ್​ನ ಇ ತುಕಾರಾಂ ಅವರು 98,992 ಮತಗಳ ಲೀಡ್‌ನಲ್ಲಿ ಜಯ ಸಾಧಿಸಿದ್ದಾರೆ.

ಇ ತುಕಾರಂ ಮೂಲತಃ ಬಳ್ಳಾರಿಯವರು. ಇವರು ಬಳ್ಳಾರಿಯ ಸಂಡೂರು ಕ್ಷೇತ್ರದ ಶಾಸಕರಾಗಿದ್ದರು. ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ವಸ್ತುವಾರಿ ಸಚಿವರೂ ಆಗಿದ್ದರು. ಇದುವರೆಗೂ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ನಡೆದ ಒಟ್ಟು 19 ಚುನಾವಣೆಗಳಲ್ಲಿ 15 ಬಾರಿ ಕಾಂಗ್ರೆಸ್‌ ಗೆದಿದ್ದರೆ, 4 ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಇದೀಗ ಮತ್ತೆ ಕಾಂಗ್ರೆಸ್‌ ಗೆಲುವು ಸಾಧಿಸಿದೆ.

ಇದನ್ನೂ ಓದಿ: Ballari Lok Sabha Election Result 2024: ಬಳ್ಳಾರಿಯಲ್ಲಿ ಶ್ರೀರಾಮುಲುಗೆ ಸೋಲು, ಇ ತುಕಾರಾಂಗೆ ಗೆಲುವು

ಇ ತುಕಾರಾಂ ಆಸ್ತಿ ವಿವರ ಹೀಗಿದೆ

ಚುನಾವಣೆ ವೇಳೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ ಇ. ತುಕಾರಾಂ ಅವರು ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಸೇರಿ 1,54,11,137 ರೂ ಹೊಂದಿದ್ದಾರೆ. ಇವರ ಪತ್ನಿ ಅನ್ನಪೂರ್ಣ ಅವರ ಹೆಸರಲ್ಲಿ ಸುಮಾರು 36,85,837 ರೂ. ಇದೆ. ಹಾಗೂ ಮಗಳು ವಂದನಾ ಹೆಸರಲ್ಲಿ 7,21,931 ರೂ., ಮತ್ತೋರ್ವ ಮಗಳು ಚೈತನ್ಯಾ ಹೆಸರಲ್ಲಿ 3,54,790 ರೂ. ಹಣ ಇಟ್ಟಿದ್ದಾರೆ. ಪುತ್ರ ರಘುನಂದನ್ ಹೆಸರಲ್ಲಿ 22,05,174 ರೂ. ಹಾಗೂ 8.21 ಎಕರೆ ಕೃಷಿ ಭೂಮಿ ಇದೆ. ಇನ್ನು ರಘುನಂದನ್ ಹೊರತುಪಡಿಸಿ ಕುಟುಂಬದ ಯಾರ ಹೆಸರಲ್ಲಿಯೂ ಕೃಷಿ ಭೂಮಿ ಇಲ್ಲ.

ತುಕಾರಾಂ ಅವರ ಸ್ಥಿರಾಸ್ತಿ ಮೌಲ್ಯ 47,66,960 ರೂ., ಪತ್ನಿ ಹೆಸರಲ್ಲಿರುವ ಸ್ಥಿರಾಸ್ತಿ ಮೌಲ್ಯ 63,21,380 ರೂ. ಮಗ ರಘುನಂದನ್ ಹೆಸರಲ್ಲಿರುವ ಸ್ಥಿರಾಸ್ತಿ ಮೌಲ್ಯ 18,00,000 ರೂ. ಇದೆ. ಇ.ತುಕಾರಾಂ ಅವರು 30,00,000 ರೂ.ಗಳನ್ನು ಸ್ನೇಹಿತರು ಹಾಗು ಬಂಧುಗಳಿಂದ ಸಾಲ ಪಡೆದಿದ್ದಾರೆ. ಇವರ ಪತ್ನಿ ತುಕಾರಾಂ ಹಾಗು ತಾಯಿಯಿಂದ ಪಡೆದ ಸಾಲ 93,25,000 ರೂ. ಇದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ