ಬಳ್ಳಾರಿ ಗಲಭೆ: 20 ಜನರ ಬಂಧನ, ಕಾಂಗ್ರೆಸ್​​ನವರೆಷ್ಟು, ಬಿಜೆಪಿಯವರೆಷ್ಟು? ರೆಡ್ಡಿಗೂ ಸಂಕಷ್ಟ

ಬಳ್ಳಾರಿ ಗಲಭೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಗಲಭೆಯ ವಿಡಿಯೋಗಳನ್ನ ಆಧಾರಿಸಿ ಖಾಕಿ ತನಿಖೆಗಿಳಿದಿದೆ. 20 ವಿಡಿಯೋಗಳನ್ನ ಸಂಗ್ರಹಿಸಿದ್ದ ಪೊಲೀಸರು, ನಿನ್ನೆ 45 ಮಂದಿಯ ವಿಚಾರಣೆ ನಡೆಸಿದ್ದರು. ಘಟನೆಯ ಇಂಚಿಂಚೂ ಮಾಹಿತಿ ಕಲೆಹಾಕಿ ಒಟ್ಟು 20 ಜನರನ್ನು ಬಂಧಿಸಿದ್ದಾರೆ. ಹಾಗಾದ್ರೆ, ಬಂಧಿತರಲ್ಲಿ ಕಾಂಗ್ರೆಸ್​​ನವರೆಷ್ಟು, ಬಿಜೆಪಿಯವರೆಷ್ಟು? ಎನ್ನುವ ಪಟ್ಟಿ ಇಲ್ಲಿದೆ.

ಬಳ್ಳಾರಿ ಗಲಭೆ: 20 ಜನರ ಬಂಧನ, ಕಾಂಗ್ರೆಸ್​​ನವರೆಷ್ಟು, ಬಿಜೆಪಿಯವರೆಷ್ಟು? ರೆಡ್ಡಿಗೂ ಸಂಕಷ್ಟ
Bellary Violence
Edited By:

Updated on: Jan 04, 2026 | 4:30 PM

ಬಳ್ಳಾರಿ, (ಜನವರಿ 04): ಬ್ಯಾನರ್​ ಕಟ್ಟು ಸಂಬಂಧ ಜನವರಿ 1ರಂದು ಬಳ್ಳಾರಿ (Bellary)  ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರ ಸಂಘರ್ಷದಲ್ಲಿ ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದು, ಇದೀಗ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಆರೋಪ ಪ್ರತ್ಯಾರೋಪ ತಾರಕಕ್ಕೇರಿದ್ದು, ಈ ನಡುವೆ ಬ್ರೂಸ್​ಪೇಟೆ ಪೊಲೀಸರು ಒಟ್ಟು 20 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಒಟ್ಟು ಆರು ಎಫ್​​ಐಆರ್ ದಾಖಲಾಗಿದ್ದು,ಒಟ್ಟು 20 ಜನರನ್ನು ಬಂಧಿಸಿದ್ದಾರೆ. 10 ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಿಜೆಪಿ 10 ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇನನ್ಉ

ಬಂಧಿತ ಬಿಜೆಪಿ ಕಾರ್ಯಕರ್ತರು

ಬಿ.ರವಿ, ರವಿಬಾಬು, ಪೋತಪ್ಪ, ಬಜ್ಜಪ್ಪ, ಜಿ.ಶ್ರೀನಿವಾಸ, ಷಡಕ್ಷರಿ, ರಂಗಸ್ವಾಮಿ, ಗುರುಪ್ರಸಾದ್, ಪಿ.ಶ್ರೀನಿವಾಸ ರೆಡ್ಡಿ, ಲಕ್ಷಣ, ತಿಮ್ಮಪ್ಪ ಬಂಧನಕ್ಕೆ ಒಳಗಾದವರ ಬಿಜೆಪಿ ಕಾರ್ಯಕರ್ತರು.

ಬಂಧಿತ ಕೈ ಕಾರ್ಯಕರ್ತರ ಪಟ್ಟಿ

ಕಾರ್ತಿಕ್(25), ಮುಕ್ಕಣ್ಣ(28), ಇನಾಯತುಲ್ಲಾ(24), ರಾಜು(20), ಮುಸ್ತಫಾ(22), ಶ್ರೀಕಾಂತ್(30), ಮೊಹಮ್ಮದ್ ರಸೂಲ್(35), ಬಾಬು(38), ವೆಂಕಟೇಶ್(38), ಮುಬಾಶಿರ್(25) ಬಂಧಿತ ಕಾಂಗ್ರೆಸ್ ಕಾರ್ಯಕರ್ತರು.

ಇದನ್ನೂ ಓದಿ: ಬಳ್ಳಾರಿ ಬ್ಯಾನರ್​​ ಗಲಾಟೆಗೆ ಸ್ಫೋಟಕ ತಿರುವು​​: ರಾಜಶೇಖರ್​​ಗೆ ತಗುಲಿದ್ದ ಬುಲೆಟ್​​ ಸತ್ಯ ರಿವೀಲ್​​

ಮೂವರು ಅಂಗರಕ್ಷಕರು ವಶಕ್ಕೆ

ಗಲಾಟೆಯಲ್ಲಿ ಕೈ ಕಾರ್ಯಕರ್ತ ರಾಜಶೇಖರ್ ಪ್ರಾಣಬಿಟ್ಟಿದ್ದ. ಈತನ ಬೆನ್ನು ಹೊಕ್ಕಿದ್ದ 12 MM ಬುಲೆಟ್ ಯಾರ ಗನ್​ನಿಂದ ಬಂದಿದ್ದು ಎನ್ನುವುದು ನಿಗೂಢವಾಗಿಯೇ ಉಳಿದಿತ್ತು. ಆದ್ರೆ, ಇದೀಗ ರಾಜಶೇಖರನ ಜೀವ ಬಲಿ ಪಡೆದಿದ್ದು ಸತೀಶ್ ರೆಡ್ಡಿಯ ಅಂಗರಕ್ಷಕ ಗುರುಚರಣ್ ಸಿಂಗ್​ನನದ್ದು ಎಂದು ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ಗುರುಚರಣ್ ಸಿಂಗ್​ನನ್ನ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಸತೀಶ್ ರೆಡ್ಡಿಯ ಇನ್ನುಳಿದ ಇಬ್ಬರು ಖಾಸಗಿ ಅಂಗರಕ್ಷಕರು, ಬಲ್ಜಿತ್‌ ಸಿಂಗ್, ಗುರುಚರಣ್​ ಸಿಂಗ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಪಂಜಾಬ್ ಮೂಲದ ಈ ಮೂವರು ಖಾಸಗಿ ಗನ್​ಮ್ಯಾನ್​ಗಳು, ಜನವರಿ 1ನೇ ತಾರೀಕು ಫೈರಿಂಗ್ ನಡೆಸಿದ್ದರು.

ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿಗೂ ಸಂಕಷ್ಟ

ಈ ನಡುವೆ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿಗೂ ಸಂಕಷ್ಟ ಶುರುವಾಗಿದೆ. ಗಲಾಟೆಗೆ ಕುಮ್ಮಕ್ಕು ಕೊಟ್ಟ ಆರೋಪದಲ್ಲಿ ಬಂಧನ ಮಾಡೋ ಸಾಧ್ಯತೆಯಿದೆ. ಪೊಲೀಸರು ಸುಮಟೋ ಕೇಸ್ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದಾರೆ. ಈ ನಡುವೆ ಗಲಭೆಯ ಒಂದೊಂದೇ ದೃಶ್ಯಗಳು ಹೊರಬೀಳ್ತಿವೆ. ಸದ್ಯ ಟಿವಿ9ಗೆ ಸಿಕ್ಕ ವಿಡಿಯೋವೊಂದು, ಜನಾರ್ದನ ರೆಡ್ಡಿ ಮನೆ ಮೇಲೆ ದಾಳಿಗೆ ಮೊದಲೇ ಪ್ಲ್ಯಾನ್ ಆಗಿತ್ತಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದೆ. ಯಾಕಂದ್ರೆ, ಈ ವಿಡಿಯೋದಲ್ಲಿ ಪುಂಡರ ಗುಂಪೊಂದು ಆಟೋದಲ್ಲಿ ಬಾಟಲ್ ಹಾಗೂ ಪೆಟ್ರೋಲ್ ಬಾಂಬ್ ತುಂಬಿಸಿಕೊಂಡು ಬಂದಿತ್ತು.

ಜನವರಿ 1ರಂದು ನಡೆದ ಗಲಾಟೆ ವೇಳೆ ಕಲ್ಲು ತೂರಾಟ, ಬಡಿಗೆ ಬಡಿದಾಟದ ನಡುವೆ ಗುಂಡಿನ ಸುರಿಮಳೆಗೈಯಲಾಗಿತ್ತು. ಭರತ್ ಆಪ್ತ ಸತೀಶ್ ರೆಡ್ಡಿಯ ಖಾಸಗಿ ಅಂಗರಕ್ಷಕರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಪೊಲೀಸರು ಕೂಡ ಪರಿಸ್ಥಿತಿ ತಿಳಿಗೊಳಿಸಲು ಫೈರಿಂಗ್ ಮಾಡಿದ್ದರು. ಆದ್ರೆ ಇದೇ ಗಲಾಟೆಯಲ್ಲಿ ಕೈ ಕಾರ್ಯಕರ್ತ ರಾಜಶೇಖರ್ ಪ್ರಾಣಬಿಟ್ಟಿದ್ದ. ಈತನ ಬೆನ್ನು ಹೊಕ್ಕಿದ್ದ 12 MM ಬುಲೆಟ್ ಯಾರ ಗನ್​ನಿಂದ ಬಂದಿದ್ದು ಎನ್ನುವುದು ನಿಗೂಢವಾಗಿಯೇ ಉಳಿದಿತ್ತು. ಆದ್ರೆ, ಇದೀಗ ರಾಜಶೇಖರನ ಜೀವ ಬಲಿ ಪಡೆದಿದ್ದು ಸತೀಶ್ ರೆಡ್ಡಿಯ ಅಂಗರಕ್ಷಕ ಗುರುಚರಣ್ ಸಿಂಗ್​ನನದ್ದು ಎಂದು ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ಗುರುಚರಣ್ ಸಿಂಗ್​ನನ್ನ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಸತೀಶ್ ರೆಡ್ಡಿಯ ಇನ್ನುಳಿದ ಇಬ್ಬರು ಖಾಸಗಿ ಅಂಗರಕ್ಷಕರು, ಬಲ್ಜಿತ್‌ ಸಿಂಗ್, ಗುರುಚರಣ್​ ಸಿಂಗ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಪಂಜಾಬ್ ಮೂಲದ ಈ ಮೂವರು ಖಾಸಗಿ ಗನ್​ಮ್ಯಾನ್​ಗಳು, ಜನವರಿ 1ನೇ ತಾರೀಕು ಫೈರಿಂಗ್ ನಡೆಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:56 pm, Sun, 4 January 26