ಅಮೆಜಾನ್ ಕಚೇರಿಗೆ ನುಗ್ಗಿ ಹಲ್ಲೆ: ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ಆಪ್ತರ ಬಂಧನ
ಕೂಡ್ಲಿಗಿ ಬಿಜೆಪಿ ಶಾಸಕ ಎನ್. ವೈ ಗೋಪಾಲಕೃಷ್ಣ ಆಪ್ತರಾದ ನಾಗರಾಜಗೌಡ, ಮಲ್ಲಿಕಾರ್ಜುನ ಗೌಡ ಹಾಗೂ ರಾಕೇಶ ಎನ್ನುವವರಿಂದ ಹಲ್ಲೆ ಮಾಡಿದ್ದು, ಸದ್ಯ ಆಪ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ: ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಶಾಸಕರ ಆಪ್ತರಿಂದ ಅಮೇಜಾನ್ (Amazon) ಕಚೇರಿಯ ಸಿಬ್ಬಂದಿಗಳ ಮೇಲೆ ಹಲ್ಲೆ (assaulting), ಗೂಂಡಾಗಿರಿ ಮಾಡಿರುವಂತಹ ಘಟನೆ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಸಂಡೂರು ರಸ್ತೆಯಲ್ಲಿರುವ ಕಚೇರಿಯಲ್ಲಿ ನಡೆದಿದೆ. ಕೂಡ್ಲಿಗಿ ಬಿಜೆಪಿ ಶಾಸಕ ಎನ್. ವೈ ಗೋಪಾಲಕೃಷ್ಣ ಆಪ್ತರಾದ ನಾಗರಾಜಗೌಡ, ಮಲ್ಲಿಕಾರ್ಜುನ ಗೌಡ ಹಾಗೂ ರಾಕೇಶ ಎನ್ನುವವರಿಂದ ಹಲ್ಲೆ ಮಾಡಿದ್ದು, ಸದ್ಯ ಆಪ್ತರನ್ನು ಪೊಲೀಸರು ಬಂಧಿಸಿದ್ದಾರೆ. ಅಮೇಜಾನ್ ಸಾಮ್ರಾಗಿಗಳನ್ನ ಇಳಿಸಲು ಲಾರಿ ನಿಲ್ಲಿಸಿದ್ದು, ಶಾಸಕರ ಆಪ್ತರ ಕಾರು ಹೋಗುವ ವೇಳೆ ಅಡ್ಡ ನಿಂತಿದ್ದ ಲಾರಿ ತೆರವು ಮಾಡುವ ವಿಚಾರದಲ್ಲಿ ಗಲಾಟೆಯಾಗಿದೆ ಎನ್ನಲಾಗುತ್ತಿದೆ. ಅಮೇಜಾನ್ ಕಚೇರಿಯ ಸೂಪರವೈಜರ್ ಎನ್. ನಾಗರಾಜ ಹಾಗೂ ರಾಕೇಶ ಮೇಲೆ ಹಲ್ಲೆ ಮಾಡಲಾಗಿದೆ. ಅಮೆಜಾನ್ ಕಚೇರಿಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಲ್ಲೆ ಮಾಡಿದ ನಾಗರಾಜಗೌಡರಿಂದಲೂ ಪ್ರತಿದೂರು ನೀಡಲಾಗಿದೆ. ಹಾಗಾಗಿ ಹಲ್ಲೆಗೊಳಗಾದ ಎನ್ ನಾಗರಾಜ ಹಾಗೂ ರಾಕೇಶ ಸಹ ಅರೆಸ್ಟ್ ಮಾಡಲಾಗಿದೆ. ಇನ್ನು ಬಂಧನ ಖಂಡಿಸಿ ಸಂಬಂಧಿಕರು ಪ್ರತಿಭಟನೆ ಮಾಡಿದ್ದು, ಶಾಸಕರ ಆಪ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿಯಲಾಯಿತು. ಘಟನೆ ಸಂಭವಿಸಿದಂತೆ ಒಟ್ಟು 9 ಜನರ ಬಂಧನವಾಗಿದ್ದು, ಬಂಧಿತ ಆರೋಪಿಗಳು ನ್ಯಾಯಾಂಗ ವಶದಲ್ಲಿದ್ದಾರೆ.
ಕಾಂಗ್ರೆಸ್ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಕಾರಿನ ಮೇಲೆ ಕಲ್ಲು ತೂರಾಟ!
ರಾಮನಗರ: ರಾಮನಗರದಲ್ಲಿ ರಾಜಕೀಯ ಪಕ್ಷಗಳ ನಡುವೆ ಕಿತ್ತಾಟ ಜೋರಾಗುತ್ತಿದ್ದು, ಈ ಹಿಂದೆ ಕಾಮಗಾರಿ ಶಂಕುಸ್ಥಾಪನೆ ವಿಚಾರವಾಗಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೆಶ್ವರ ಕಾರಿನ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು ಎಸೆದಿದ್ದರು. ಈಗ ಮತ್ತೆ ಮಾಗಡಿ ತಾಲೂಕಿನ ಕಾಮಸಾಗರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆ ವಿಚಾರವಾಗಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಕಾರಿನ ಮೇಲೆ ಕಲ್ಲು ತೂರಿದ್ದಾರೆ. ಹೌದು ಇಂದು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಾಮಸಾಗರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆಗೆ ಮಾಜಿ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಆಗಮಿಸಿದ್ದರು. ಇದಕ್ಕೆ ಜೆಡಿಎಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು. ಇನ್ನೂ ಕಾರ್ಯಕ್ರಮದ ಬ್ಯಾನರ್ನಲ್ಲಿ ಶಾಸಕ ಮಂಜುನಾಥ್ ಹೆಸರು ಕೊನೆಯಲ್ಲಿ ಹಾಕಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಗಲಾಟೆ ಮಾಡಿದ್ದಾರೆ.
ಇದರ ಮಧ್ಯಯೇ ಬಾಲಕೃಷ್ಣ ಕಟ್ಟಡವನ್ನು ಉದ್ಘಾಟಿಸಿ ಕಾರಿನಲ್ಲಿ ವಾಪಸ್ ಆಗುತ್ತಿರುವಾಗ ಕಾರಿನ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕುದೂರು ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:00 pm, Wed, 2 November 22