ಹೊಸಪೇಟೆ: ಜನಸಂಪರ್ಕ ಯಾತ್ರೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ

ದೇಶದ ಇತ್ತೀಚನ ಸರ್ವೇ ಪ್ರಕಾರ ಶೇ. 73% ನರೇಂದ್ರ ಮೋದಿ ಪರ ಇದ್ದಾರೆ. ನಾಳೆ ನಡೆಯೋ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಅಡ್ರಸ್ ಇರೋಲ್ಲಾ ರಾಹುಲ್ ಗಾಂಧಿ, ಸಿದ್ದರಾಮಯ್ಯನವರೇ.

ಹೊಸಪೇಟೆ: ಜನಸಂಪರ್ಕ ಯಾತ್ರೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ
ಜನಸಂಪರ್ಕ ಯಾತ್ರೆ
Follow us
TV9 Web
| Updated By: ಆಯೇಷಾ ಬಾನು

Updated on: Oct 12, 2022 | 1:50 PM

ವಿಜಯಪುರ: ರಾಜ್ಯದಲ್ಲೀಗ ಬಿಜೆಪಿ(BJP) ಹಾಗೂ ಕಾಂಗ್ರೆಸ್(Congress) ಯಾತ್ರೆಗಳ ಅಭಿಯಾನ ನಡೆಸುತ್ತಿವೆ. ಒಂದೆಡೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ(Bharat Jodo Yatra) ಕೈಗೊಂಡಿದ್ದು‌‌ ಇನ್ನೊಂದೆಡೆ ಬಿಜೆಪಿ ಜನ ಸಂಪರ್ಕ ಯಾತ್ರೆ(Jana Sampark Yatra) ಕೈಗೊಂಡಿದೆ. ಹೊಸಪೇಟೆ ಹಾಗೂ ಕುಷ್ಟಗಿಯಲ್ಲಿಂದು ಬಿಜೆಪಿ ಅದ್ದೂರಿಯಾಗಿ ಸಮಾವೇಶ ಆಯೋಜಿಸುವ ಮೂಲಕ ಚುನಾವಣೆಗೆ ಭರದ ಸಿದ್ದತೆ ಕೈಗೊಂಡಿದೆ. ಸದ್ಯ ಹೊಸಪೇಟೆಯಲ್ಲಿ ಜನ ಸಂಪರ್ಕ ಯಾತ್ರೆಗೆ ಚಾಲನೆ ಸಿಕ್ಕಿದೆ.

ನಿನ್ನೆಯಷ್ಠೆ ರಾಯಚೂರಿನಲ್ಲಿ ಅದ್ದೂರಿಯಾಗಿ ಜನ ಸಂಪರ್ಕ ಯಾತ್ರೆ ನಡೆಸಿದ ಬಿಜೆಪಿ ನಾಯಕರು ಇಂದು ಸಿಎಂ‌ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ‌ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಜನ ಸಂಪರ್ಕ ಯಾತ್ರೆ ನಡೆಯುತ್ತಿದೆ. ಇಂದು ಹೊಸಪೇಟೆಯ ಪುನೀತ್ ರಾಜ್‍ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ದೂರಿ ಕಾರ್ಯಕ್ರಮದೊಂದಿಗೆ ಜನ ಸಂಪರ್ಕ ಯಾತ್ರೆಗೆ ಚಾಲನೆ ಸಿಕ್ಕಿದೆ. ಮಧ್ಯಾಹ್ನ 3 ಗಂಟೆಯ ನಂತರ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಬಿಜೆಪಿ ಸಮಾವೇಶದ ಮೂಲಕ ಸರ್ಕಾರದ ಯೋಜನೆಗಳನ್ನ ಜನರಿಗೆ ತಲುಪಿಸಲು ಜನ ಸಂಪರ್ಕ ಯಾತ್ರೆ ನಡೆಯಲಿದೆ. ಹೊಸಪೇಟೆಯ ಕ್ರೀಡಾಂಗಣದಲ್ಲಿ ಜನ ಸಂಪರ್ಕ ಯಾತ್ರೆಗೆ ಅದ್ದೂರಿ ಚಾಲನೆ ಸಿಕ್ಕಿದೆ. ಕಾರ್ಯಕ್ರಮದಲ್ಲಿ ಅನೇಕ ಬಿಜೆಪಿ ನಾಯಕರು ಭಾಷಣ ಮಾಡಿದರು.

ಸಮಾವೇಶ ಉದ್ದೇಶಿಸಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭಾಷಣ

ನಾನು ರಾಹುಲ್ ಗಾಂಧಿಗೆ ಬಚ್ಚಾ ಅಂದಿದಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿಯವರನ್ನು ಬಚ್ಚಾ ಅಂತ ನಾನು ಕರೆದಿದ್ದು ಸರಿಯಲ್ಲಾ ಅಂತ ಸಿದ್ದರಾಮಯ್ಯ ಅವರು ಬೇರೆ, ಬೇರೆ ಮಾತುಗಳು ಕೂಡ ಆಡಿದ್ದಾರೆ. ಪ್ರಧಾನಿ ಮೋದಿಯವರ ಬಗ್ಗೆ ರಾಹುಲ್ ಗಾಂಧಿ ಹಗುರವಾಗಿ ಮಾತನಾಡಿದ್ದಕ್ಕೆ ನಾನು, ಬಚ್ಚ ಅನ್ನೋ ಪದ ಬಳಸಿದ್ದೇನೆ. ಅದು ರಾಹುಲ್ ಗಾಂಧಿಯವರೇ, ಹಾಗೆ ಮಾತನಾಡೋ ಹಾಗೆ ಮಾಡಿಕೊಂಡ್ರು. ಪ್ರಧಾನಿ ಮೋದಿ ಬಗ್ಗೆ ಯಾರೇ ಮಾತನಾಡಿದ್ರು, ನೀವು ಪ್ರತಿಭಟಿಸಬೇಕು ಅಂತ ಭಾಷಣದ ಸಮಯದಲ್ಲಿ ಬಿಎಸ್ ಯಡಿಯೂರಪ್ಪ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು. ಇದನ್ನೂ ಓದಿ: ಸರ್ಕಾರಿ ಭೂಮಿ ಡಿನೋಟಿಫಿಕೇಶನ್: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತರಿಗೆ ದೂರು

ದೇಶದ ಇತ್ತೀಚನ ಸರ್ವೇ ಪ್ರಕಾರ ಶೇ. 73% ನರೇಂದ್ರ ಮೋದಿ ಪರ ಇದ್ದಾರೆ. ನಾಳೆ ನಡೆಯೋ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಅಡ್ರಸ್ ಇರೋಲ್ಲಾ ರಾಹುಲ್ ಗಾಂಧಿ, ಸಿದ್ದರಾಮಯ್ಯನವರೇ. ನಮ್ಮ ಸಂಘಟನೆ ಬಲ ಪಡಿಸಬೇಕು. ಬೂತ್ ಮಟ್ಟದ ಕಾರ್ಯಕರ್ತರ ವಿಶ್ವಾಸಕ್ಕೆ ತಗೋಬೇಕು. ಮಹಿಳೆಯರನ್ನು, ಯುವಕರನ್ನ, ಸಂಘಟಿಸಬೇಕು. ದಲಿತ ಕೇರಿಗಳಿಗೆ, ತಾಂಡಾಗಳಿಗೆ ಹೋಗಬೇಕು, ಅವರಿಗೆ ಸ್ಪಂದಿಸಬೇಕು. ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ಮೀಸಲಾತಿ ಹೆಚ್ಚಿಸಿದೋದು ಐತಿಹಾಸಿಕ ನಿರ್ಣಯ. ಎಸ್ಸಿ, ಎಸ್ಟಿ ಜನರು ನಮ್ಮ ಪಕ್ಷದ ಜೊತೆಗೆ ಇರಬೇಕು. ಅಳೆದು ತೂಕ ಮಾಡಿ, ಈ ಮೀಸಲಾತಿ ಕೊಟ್ಟಿದ್ದೇವೆ. ಅಂಬೇಡ್ಕರ್ ಅವರ ಹೆಸರು ಹೇಳೋ ಯೋಗ್ಯತೆ ಕಾಂಗ್ರೆಸ್ ಗೆ ಇಲ್ಲ. ಅಪಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬಿಎಸ್​ವೈ ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪ ಈಗಲೂ ರಾಜ್ಯದ ಜನರ ಮನದಲ್ಲಿದ್ದಾರೆ

ಜನಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದ್ದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ರಾಜಾಹುಲಿ ಗರ್ಜನೆಗೆ ಕಾಂಗ್ರೆಸ್​​ನವರು ತತ್ತರಿಸಿದ್ದಾರೆ. ಯಡಿಯೂರಪ್ಪಗೆ ಅರಳು ಮರಳು ಅಂತಾರೆ ಸಿದ್ದರಾಮಯ್ಯ. ಯಡಿಯೂರಪ್ಪ ಯಾವತ್ತೂ ಜಗ್ಗಲ್ಲ ಕುಗ್ಗಲ್ಲ. ಯಡಿಯೂರಪ್ಪ ಯಾವತ್ತೂ ಅರಳು ಅವರು ಮರಳಲ್ಲ. ಯಡಿಯೂರಪ್ಪ ಈಗಲೂ ರಾಜ್ಯದ ಜನರ ಮನದಲ್ಲಿದ್ದಾರೆ. ಸಿದ್ದರಾಮಯ್ಯರ ಹೇಳಿಕೆ ನೋಡಿದ್ರೆ ಅವರಿಗೆ ಅರಳು ಮರಳು ಆದಂತೆ ಕಾಣುತ್ತಿದೆ. ದೇಶದಲ್ಲಿ ಕೊವಿಡ್​ ವೈರಸ್​ ನಿಯಂತ್ರಣ ಮಾಡಿದ್ದೇವೆ. ಪ್ರಧಾನಿ ಮೋದಿ ಪ್ರವಾಹ ಬಂದ್ರೆ ಸಹಾಯ ಮಾಡುತ್ತಾರೆ. ಉದ್ಯೋಗ ಯೋಜನೆ ಸೇರಿ ಹಲವು ಯೋಜನೆ ಜಾರಿ ಮಾಡಿದ್ದಾರೆ. ಸಿದ್ದರಾಮಣ್ಣ ಮರಳು ನಿಮಗೆ ಎಂದು ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಧರ್ಮ ಒಡೆಯುವ ಪ್ರಯತ್ನ ಮಾಡಿದರು. ನಮಗೆ ದುಡ್ಡು ಹೊಡೆಯುವ ಭಯ ಇಲ್ಲ. ನಮ್ಮ ಸರ್ಕಾರ ಬಂದ ಮೇಲೆ ರೈತರಿಗೆ ಭಯ ಇಲ್ಲ. ಬೆಳೆಹಾನಿಯಾದ ರೈತರ ಖಾತೆಗೆ ಪರಿಹಾರ ಹಾಕಿದ್ದೇವೆ. ನಮ್ಮ ಸರ್ಕಾರದಲ್ಲಿ ಕಾರ್ಯಕರ್ತರಿಗೆ ಭಯ ಇಲ್ಲ. ಎಲ್ಲ ಇಲಾಖೆಯಲ್ಲೂ ಭ್ರಷ್ಟಾಚಾರ ಮಾಡಿದ್ದೀರಿ. ಭ್ರಷ್ಟಾಚಾರ ಆಗಿದ್ರೆ ದೂರು ಕೊಡಿ ಸ್ವಾಮಿ ತನಿಖೆ ಮಾಡಿಸ್ತೇವಿ. ಇಂದು ರಾಜ್ಯದಲ್ಲಿ ಯಾವ ಜನರಿಗೂ ಭಯ ಇಲ್ಲ. ದೀನದಲಿತರಿಗೆ ಸ್ವಯಂಉದ್ಯೋಗ ಯೋಜನೆ ಮಾಡಿದ್ದೇವೆ ಎಂದರು.

ಕಾಂಗ್ರೆಸ್ ವಿರುದ್ಧ ಆಕ್ರೋಶ ಭರಿತವಾದ ಭಾಷಣ ‌ಮಾಡಿದ ರಾಜುಗೌಡ

ಮೀಸಲಾತಿ ವಿಚಾರವಾಗಿ ಸರ್ವಪಕ್ಷ ಸಭೆಯಲ್ಲಿ ಒಳಗೆ ಮಾಡೋಣ ಅಂತಾರೆ ಹೊರಗಡೆ ಬಂದು ಇದು ಹೇಗೆ ಆಗುತ್ತೆ ಎಂದು ಪ್ರಶ್ನೆ ಮಾಡ್ತಾರೆ. ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಕಾಂಗ್ರೆಸ್ ಕೊಡುಗೆ ಏನು? ಕಾಂಗ್ರೆಸ್ ನವರು ಮೀಸಲಾತಿ ಹೆಚ್ಚಳ ಮಾಡಬೇಕಿತ್ತು. ಯಾರಾದರೂ ಬೇಡವೆಂದು ಗನ್ ಹಿಡಿದುಕೊಂಡು ನಿಂತಿದ್ರಾ? ಎಂದು ರಾಜುಗೌಡ ಭಾಷಣದ ವೇಳೆ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಸತೀಶ್ ಜಾರಕಿಹೊಳಿ ಕೂಡ ನಮಗೆ ಟಿಕೆ ಮಾಡಿದ್ರು. ಈಗ ಏನು ಹೇಳ್ತೀರಾ? ಬಿಜೆಪಿ ಕ್ರೆಡಿಟ್ ತೆಗೆದುಕೊಳ್ಳುವ ಕೆಲಸ ಮಾಡೋದಿಲ್ಲ. ರಾಮುಲು ನಾನು ಯಾವತ್ತು ಜಗಳ ಮಾಡಿಲ್ಲ ಮಾಡೋದಿಲ್ಲ. ಜಗಳ ಹಚ್ಚುವ ಕೆಲಸ ಮಾಡಬೇಡಿ. ಕೆಲಸ ಮಾಡೋಕೆ ಆಗಲಿಲ್ಲ ಈಗ ಮಾಡೋದಕ್ಕು ಅಡ್ಡಗಾಲು ಹಾಕ್ತೀರಾ? ಕಾಂಗ್ರೆಸ್ ಜೆಡಿಎಸ್ ಆಟ ಇನ್ಮೂಂದೆ ನಡೆಯೋದಿಲ್ಲ. ದಲಿತರ ಪರವಾಗಿ ಇರುವ ಸರ್ಕಾರವೆಂದರೆ ಅದು ಬಿಜೆಪಿ ಸರ್ಕಾರ ಎಂದರು. ಇದನ್ನೂ ಓದಿ: ಪ್ರತಿ ಚಾರ್ಜ್ ಗೆ 315 ಕಿ.ಮೀ ಮೈಲೇಜ್ ನೀಡುವ ಟಾಟಾ ಟಿಯಾಗೋ ಇವಿ ಕಾರಿಗೆ ಭಾರೀ ಡಿಮ್ಯಾಂಡ್

ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿದ ಸಿಎಂ, ಬಿಎಸ್‌ವೈ

ಜನಸ್ಪಂದನ ಯಾತ್ರೆಗೂ ಮುನ್ನ ಹೊಸಪೇಟೆ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿದರು. ಯಲ್ಲಮ್ಮ ಕೊಲ್ಲಾರಪ್ಪನ ಮನೆಯಲ್ಲಿ ಬ್ರೇಕ್​ಫಾಸ್ಟ್ ಮಾಡಿದರು. ಸಿಎಂಗೆ ಸಚಿವರಾದ ಗೋವಿಂದ ಕಾರಜೋಳ, ಆನಂದ ಸಿಂಗ್, ಶಶಕಲಾ ಜೊಲ್ಲೆ, ಶಾಸಕ ರಾಜುಗೌಡ ಸೇರಿ ಹಲವರು ಸಾಥ್ ನೀಡಿದರು. ಆಗ ಬಿಜೆಪಿ ನಾಯಕರು ದಲಿತ ಕೇರಿಯ ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್