ಮಳೆ ಹಾನಿ ಸಂಬಂಧ ಸಿಎಂ ಬೊಮ್ಮಾಯಿ ವಿಡಿಯೋ ಸಂವಾದ: ವಸ್ತುಸ್ಥಿತಿ ಆಧರಿಸಿ, ಪರಿಹಾರ ಒದಗಿಸಲು ಡಿಸಿಗಳಿಗೆ ಸೂಚನೆ
ಅಕ್ಟೋಬರ್ ತಿಂಗಳಿನ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ನಡೆಸಿ, ಈ ತಿಂಗಳೊಳಗೆ ಪರಿಹಾರ ನೀಡಲು ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ.
ಬಳ್ಳಾರಿ: ಮಳೆ ಹಾನಿ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಹೊಸಪೇಟೆಯಲ್ಲಿ ಡಿಸಿಗಳ ಜೊತೆ ವಿಡಿಯೋ ಸಂವಾದ ನಡೆಸಿದ್ದಾರೆ. 13 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಿಎಂ ಸಮಾಲೋಚನೆ ಮಾಡಿದ್ದಾರೆ. ಮಳೆ ಹಾನಿ ಪ್ರದೇಶಗಳಿಗೆ ತೆರಳಿ ಪರಿಹಾರ ಕಾರ್ಯ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.
ಪರಿಹಾರ ವಿತರಣೆಯಲ್ಲಿ ಯಾವುದೇ ಲೋಪ ಆಗಬಾರದು. ಮನೆ ಹಾನಿ ಕುರಿತ ದಾಖಲಾತಿಯಲ್ಲಿ ಲೋಪ ಸಲ್ಲದು. ಜಿಲ್ಲಾಧಿಕಾರಿಗಳು ಖುದ್ದು ಮೇಲ್ವಿಚಾರಣೆ ವಹಿಸಬೇಕು. ವಸ್ತುಸ್ಥಿತಿ ಆಧರಿಸಿ, ಪರಿಹಾರ ಒದಗಿಸಬೇಕು. ಕರ್ತವ್ಯ ಲೋಪ ಎಸಗಿದ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಡಿಸಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: Udupi: ಉಡುಪಿಯ ಕಾರ್ಕಳದಲ್ಲಿ 14ನೇ ಶತಮಾನದ ನಾಗಭೈರವನ ಅಪರೂಪದ ಶಿಲ್ಪ ಪತ್ತೆ
ಅಕ್ಟೋಬರ್ ತಿಂಗಳಿನ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ನಡೆಸಿ, ಈ ತಿಂಗಳೊಳಗೆ ಪರಿಹಾರ ನೀಡಲು ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ. ಸೇತುವೆಗಳ ನಿರ್ಮಾಣ, ದುರಸ್ತಿ, ಮರು ನಿರ್ಮಾಣ ಕಾರ್ಯ, ಹಾನಿಗೊಳಗಾದ ವಿದ್ಯುತ್ ಕಂಬಗಳ ದುರಸ್ತಿಗೆ ಸೂಚಿಸಲಾಗಿದೆ. ಟ್ರಾನ್ಸ್ಫಾರ್ಮರ್ ಹಾಳಾಗಿದ್ದರೆ 24 ಗಂಟೆಯೊಳಗೆ ವಿತರಣೆ ಮಾಡುವಂತೆ ತಿಳಿಸಿದ್ದಾರೆ.
ನ್ಯಾಯಾಲಯದ ಆದೇಶ ಪ್ರತಿ ನೋಡಿ ಮಾತಾಡುವೆ
ಹಿಜಾಬ್ ಬಗ್ಗೆ ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು ಸಂಬಂಧ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಇದು ನ್ಯಾಯಾಂಗ ವಿಚಾರವಾಗಿರೋದ್ರಿಂದ ನಾನು ಇನ್ನೂ ಆದೇಶ ಪ್ರತಿ ನೋಡಿಲ್ಲ. ಆದೇಶ ಪ್ರತಿ ನೋಡಿಕೊಂಡು ರಿಯಾಕ್ಷನ್ ಕೊಡುವೆ. ಇದು ದೇಶದ ವಿಚಾರವಾಗಿದೆ. ವಿದ್ಯಾರ್ಥಿಗಳ ಬೇಡಿಕೆ, ನಮ್ಮ ವಿಚಾರಗಳು ಸೇರಿದಂತೆ ಹತ್ತು ಹಲವು ವಿಚಾರಗಳಿವೆ. ಲಿಖಿತವಾಗಿ ಜಡ್ಜ್ ಗಳು ಕೊಟ್ಟಿದ್ದನ್ನು ನೋಡಿ ರಿಯಾಕ್ಷನ್ ಕೊಡುವೆ. ಇಬ್ಬರು ಜಡ್ಜ್ ಗಳ ಕಾಪಿ ನನ್ನ ಕೈಗೆ ಬಂದಿಲ್ಲಾ ಎಂದರು. ಹಾಗೂ ಇದೇ ವೇಳೆ ಹಾವೇರಿಯಲ್ಲಿ RSS ನವರ ಮೇಲೆ ಹಲ್ಲೆ ಮಾಡಿದ್ದು, ಶಾಂತಿ ಸುವ್ಯವಸ್ಥೆ ಕದಡೋ ಕೆಲಸ ಮಾಡಿದ್ದ ಬಗ್ಗೆ ಮಾತನಾಡಿದ ಸಿಎಂ, ಈಗಾಗಲೇ ಅರೆಸ್ಟ್ ಮಾಡಿದ್ದಾರೆ. ಅವರನ್ನ ಬಗ್ಗುಬಡಿಯೋ ಕೆಲಸ ಮಾಡಿದ್ದೇವೆ. ಈಗಾಗಲೇ ದುಷ್ಕಮಿಗಳನ್ನ ಬಂಧಿಸಲಾಗಿದೆ. ಶಾಂತಿ ಕದಡುವ ಯತ್ನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.