Udupi: ಉಡುಪಿಯ ಕಾರ್ಕಳದಲ್ಲಿ 14ನೇ ಶತಮಾನದ ನಾಗಭೈರವನ ಅಪರೂಪದ ಶಿಲ್ಪ ಪತ್ತೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೈರ್ಲ, ನಂದಳಿಕೆ ಎಂಬಲ್ಲಿ 14 ಅಥವಾ 15ನೇ ಶತಮಾನಕ್ಕೆ ಸೇರಿದ 'ನಾಗಭೈರವನ' ಶಿಲ್ಪವೊಂದು ಪತ್ತೆಯಾಗಿದೆ.

Udupi: ಉಡುಪಿಯ ಕಾರ್ಕಳದಲ್ಲಿ 14ನೇ ಶತಮಾನದ ನಾಗಭೈರವನ ಅಪರೂಪದ ಶಿಲ್ಪ ಪತ್ತೆ
ನಾಗಭೈರವ ಶಿಲ್ಪ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 13, 2022 | 12:48 PM

ಉಡುಪಿ: ಉಡುಪಿ (Udupi) ಜಿಲ್ಲೆಯ ಕಾರ್ಕಳ ತಾಲೂಕಿನ ಕೈರ್ಲ, ನಂದಳಿಕೆ ಎಂಬಲ್ಲಿ 14 ಅಥವಾ 15ನೇ ಶತಮಾನಕ್ಕೆ ಸೇರಿದ ನಾಗಭೈರವನ (Nagabhairava sculpture) ಅಪರೂಪದ ಶಿಲ್ಪವೊಂದು ಪತ್ತೆಯಾಗಿದೆ. ಕಾರ್ಕಳ (Karkala) ತಾಲೂಕಿನ ಕೈಯಾರ್ಲದ ಮಹಾಕಾಳಿ ದೇವಾಲಯದ ಬಳಿ ಇರುವ ನಾಗಬನದಲ್ಲಿ ಪುರಾತನ ನಾಗಭೈರವ ಶಿಲ್ಪ ಪತ್ತೆಯಾಗಿದೆ. ಶಿರ್ವದಲ್ಲಿರುವ ಎಂಎಸ್‌ಆರ್‌ಎಸ್ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಟಿ. ಮುರುಗೇಶಿ ನೇತೃತ್ವದ ತಂಡ ಪುರಾತತ್ತ್ವ ಶಾಸ್ತ್ರದ ಪರಿಶೋಧನೆಯಲ್ಲಿದ್ದ ವೇಳೆ ಈ ಶಿಲ್ಪ ಪತ್ತೆಯಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೈರ್ಲ, ನಂದಳಿಕೆ ಎಂಬಲ್ಲಿ 14 ಅಥವಾ 15ನೇ ಶತಮಾನಕ್ಕೆ ಸೇರಿದ ‘ನಾಗಭೈರವನ’ ಶಿಲ್ಪವೊಂದು ಪತ್ತೆಯಾಗಿದೆ. ಆಯತಾಕಾರದ ಬಳಪದ ಶಿಲೆಯ ಕೆಳಭಾಗದಲ್ಲಿ ಕಾಲುಮಂಡಲದ 4 ಪತ್ರ ಗಂಟುಗಳನ್ನು ಒಳಗೊಂಡ 1 ನಾಗರಾಜನ ಶಿಲ್ಪವನ್ನು ರಚಿಸಲಾಗಿದೆ. ನಾಗನ ಹೆಡೆಯ ಮೇಲೆ ಚತುರ್ಭಾಹು ನಾಗಭೈರವ ನಿಂತಂತೆ ಶಿಲ್ಪವನ್ನು ಕೆತ್ತಲಾಗಿದೆ. ಹಾಗೇ, ಹಿಂದಿನ 2 ಕೈಗಳಲ್ಲೂ 2 ಹೆಡೆ ಬಿಚ್ಚಿದ ನಾಗಗಳನ್ನು ಹಿಡಿದಂತೆ ಇದನ್ನು ರಚಿಸಲಾಗಿದೆ. ಮುಂದಿನ ಕೈಗಳಲ್ಲಿ ನಾಗ ದಂಡ ಮತ್ತು ರುಂಡವಿದೆ.

ಇದನ್ನೂ ಓದಿ: ಉಡುಪಿ ಕೃಷ್ಣಮಠ ಭೇಟಿಗೂ ಮುನ್ನ ಮಾಂಸಾಹಾರ ಸೇವಿಸಿದ್ರಾ ಗೋವಾ ಸಿಎಂ?

ಈ ನಾಗಭೈರವನ ತಲೆಯ ಮೇಲೆ 5 ಹೆಡೆಯ ಸರ್ಪ ಛತ್ರಿ ತೋರಿಸಲಾಗಿದೆ. ಇದು ಶುದ್ಧ ಜನಪದ ಶೈಲಿಯಲ್ಲಿರುವ ಸುಮಾರು 14-15ನೇ ಶತಮಾನದ ಜೈನ ನಾಗಶಿಲ್ಪವಾಗಿದೆ. ಇದು ಉಡುಪಿ ಜಿಲ್ಲೆಯ ನಂದಿಕೂರು ಬಳಿಯ ನಿನ್ನಿಕಲ್‌ನಲ್ಲಿ ಕಂಡುಬರುವ ಭೈರವ ಶಿಲ್ಪದೊಂದಿಗೆ ನಿಕಟ ಹೋಲಿಕೆಯನ್ನು ಹೊಂದಿದೆ. ಇದು ಕುತ್ಯಾರ್ ಬಲ್ಲಾಳ ರಾಜರ ರಾಜಧಾನಿಯಾಗಿತ್ತು ಮತ್ತು ಶಿಲ್ಪವು 14 ಅಥವಾ 15 ನೇ ಶತಮಾನದ್ದು ಎನ್ನಲಾಗಿದೆ. ಭೈರವ ಆರಾಧನೆಯು ಜೈನ ದೇವತೆ ಪದ್ಮಾವತಿಯೊಂದಿಗೆ ನಿಕಟ ಸಂಬಂಧ ಹೊಂದಿತ್ತು. ಅವಳು ಸರ್ಪ ದೇವತೆಯೂ ಆಗಿದ್ದಳು ಎನ್ನಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಬಂಡವಾಳ ಗೊತ್ತಾಯ್ತು, ಪುಂಗಬೇಡ’; ಭವ್ಯಾ ಬಗ್ಗೆ ತ್ರಿವಿಕ್ರಂ ಖಾರದ ಮಾತು
‘ಬಂಡವಾಳ ಗೊತ್ತಾಯ್ತು, ಪುಂಗಬೇಡ’; ಭವ್ಯಾ ಬಗ್ಗೆ ತ್ರಿವಿಕ್ರಂ ಖಾರದ ಮಾತು
ಮಕರ ಸಂಕ್ರಾಂತಿ ಮತ್ತು ಮಕರ ಜ್ಯೋತಿ ಮಹತ್ವ ತಿಳಿಯಿರಿ
ಮಕರ ಸಂಕ್ರಾಂತಿ ಮತ್ತು ಮಕರ ಜ್ಯೋತಿ ಮಹತ್ವ ತಿಳಿಯಿರಿ
ಸೂರ್ಯನ ಪಥ ಬದಲಾಗುವ ಸಂಕ್ರಾಂತಿ ದಿನದ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಸೂರ್ಯನ ಪಥ ಬದಲಾಗುವ ಸಂಕ್ರಾಂತಿ ದಿನದ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಹಸು ಕೆಚ್ಚಲು ಕೊಯ್ದ ಪ್ರಕರಣ: ಜಮೀರ್ ಅಹ್ಮದ್ ಹೇಳಿಕೆಗೆ ಚೈತ್ರಾ ತಿರುಗೇಟು
ಹಸು ಕೆಚ್ಚಲು ಕೊಯ್ದ ಪ್ರಕರಣ: ಜಮೀರ್ ಅಹ್ಮದ್ ಹೇಳಿಕೆಗೆ ಚೈತ್ರಾ ತಿರುಗೇಟು
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ