ಮೀನುಗಾರರ ಗಾಳಕ್ಕೆ ಬಿದ್ದ 20 ಕೆಜಿ ತೂಕದ ಹದ್ದು ಮೀನು!

ಹದ್ದು ಜಾತಿಯ (Eagle Fish) ಮತ್ತು 20 ಕೆಜಿ ಭಾರದ ಮೀನು ಗಾಳಕ್ಕೆ ಬಿದ್ದಿದೆ. ಗಾಳಕ್ಕೆ ಬಿದ್ದ ಮೀನನ್ನ ಮಾರುಕಟ್ಟೆಗೆ ತರುತ್ತಿದ್ದಂತೆ 300 ರೂಪಾಯಿಗೆ ಕೆಜಿಯಂತೆ ಮಾರಾಟವಾಗಿದೆ.

ಮೀನುಗಾರರ ಗಾಳಕ್ಕೆ ಬಿದ್ದ 20 ಕೆಜಿ ತೂಕದ ಹದ್ದು ಮೀನು!
ಮೀನುಗಾರರ ಗಾಳಕ್ಕೆ ಬಿದ್ದ 20 ಕೆಜಿ ತೂಕದ ಹದ್ದು ಮೀನು!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 23, 2022 | 12:02 PM

ವಿಜಯನಗರ: ಕಂಪ್ಲಿ ತಾಲೂಕಿನ ತುಂಗಭದ್ರಾ ನದಿಯಲ್ಲಿ (Tungabhadra river) ಭಾರಿ ಗಾತ್ರದ ಮೀನೊಂದು ಮೀನುಗಾರರ ಗಾಳದಲ್ಲಿ ಸೆರೆಯಾಗಿದೆ. ಮೀನುಗಾರರ ಗಾಳಕ್ಕೆ ಬಿದ್ದ ಮೀನನ್ನ ಗ್ರಾಹಕರು ಪೈಪೋಟಿಯಲ್ಲಿ ಖರೀದಿ ಮಾಡಿದ ಪರಿಣಾಮ ಮೀನು ಮಾರುಕಟ್ಟೆಗೆ ತರುತ್ತಿದ್ದಂತೆ ಮಾರಾಟವಾಗಿದೆ. ಯುವಕ ಶಂಭು ಎಂಬುವವರು ತುಂಗಭದ್ರಾ ನದಿಯ ಜಾಕ್ ವೆಲ್ ಮೇಲ್ಬಾಗದಲ್ಲಿ ಗಾಳ ಹಾಕಿ ಮೀನು ಸೆರೆ ಹಿಡಿಯುತ್ತಿದ್ದರು. ಈ ವೇಳೆ ಹದ್ದು ಜಾತಿಯ (Eagle Fish) ಮತ್ತು 20 ಕೆಜಿ ಭಾರದ ಮೀನು ಗಾಳಕ್ಕೆ ಬಿದ್ದಿದೆ. ಗಾಳಕ್ಕೆ ಬಿದ್ದ ಮೀನನ್ನ ಮಾರುಕಟ್ಟೆಗೆ ತರುತ್ತಿದ್ದಂತೆ 300 ರೂಪಾಯಿಗೆ ಕೆಜಿಯಂತೆ ಮಾರಾಟವಾಗಿರುವುದು ವಿಶೇಷವಾಗಿದೆ (Vijayanagara).

ಹೊಸಪೇಟೆಯ ಸಕ್ಕರೆ ಕಾರ್ಖಾನೆಯ ಮೊಲಾಸಿಸ್ ತ್ಯಾಜ್ಯ ನದಿಗೆ ಸೇರುವ ಮುನ್ನಾ 50-60 ಕೆಜಿ ತೂಕದ ಮೀನು ಬೇಟೆಯಾಡುತ್ತಿದ್ದೆವು. ನಂತರ ನದಿಗೆ ತ್ಯಾಜ್ಯ ಸೇರಿ ನೀರು ಕಲುಷಿತಗೊಂಡ ನಂತರ 15 ಕೆಜಿ ತೂಕದ ಮೀನುಗಳು ದೊರಕುತ್ತಿದ್ದವು. ಇದೀಗ 20 ಕೆಜಿ ತೂಕದ ಸುಮಾರು ಆರೇಳು ವರ್ಷದ ಮೀನು ಗಾಳಕ್ಕೆ ಬಿದ್ದಿರುವುದು ವಿಶೇಷ ಎಂದು ಕಂಪ್ಲಿಯ ಕೋಟೆ ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಎಸ್‌. ಆರ್. ಚಿನ್ನರಾಜು ತಿಳಿಸಿದ್ದಾರೆ.

ಮಂಡ್ಯ ಸ್ಟಾರ್ ಗ್ರೂಪ್ಸ್ ಮಾಲೀಕರ ಮನೆಯ ಮೇಲೆ IT ದಾಳಿ ಮಂಡ್ಯ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಉದ್ಯಮಿಗಳಿಗೆ ಶಾಕ್ ನೀಡಿದ್ದಾರೆ. ಸ್ಟಾರ್ ಗ್ರೂಪ್ಸ್ ಮಾಲೀಕರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಶೋಧ ಕಾರ್ಯ ನಡೆಸುತಿದ್ದಾರೆ. ಉದ್ಯಮಿ ಅಮಿರುಲ್ ಮುರ್ತುಜಾ, ಅಮ್ಜಾ, ಶಹಬಾಜ್, ಶಿರೋಜ್ ನಿವಾಸ, ಕಚೇರಿಗಳಲ್ಲಿ ಐಟಿಯಿಂದ ಶೋಧ ನಡೆಸುತ್ತಿದ್ದಾರೆ. ಉದ್ಯಮ ನಡೆಸುತ್ತಿರುವ ಸಹೋದರರು ಪೌಲ್ಟ್ರಿ ಫಾರಂ, ಹೋಟೆಲ್, ಪೆಟ್ರೋಲ್ ಬಂಕ್ ಸೇರಿದಂತೆ ಹಲವು ಆಸ್ತಿ ಹೊಂದಿದ್ದಾರೆ. ನಾಗಮಂಗಲ, ಮೈಸೂರು, ಮಂಡ್ಯ, ಬೆಂಗಳೂರಿನ ಹಲವೆಡೆ ಆಸ್ತಿ ಹೊಂದಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಹಿನ್ನೆಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

10ಕ್ಕೂ ಹೆಚ್ಚು ಕಾರುಗಳಲ್ಲಿ ಬಂದ ಅಧಿಕಾರಿಗಳು, 10ಕ್ಕೂ ಹೆಚ್ಚು ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಸದ್ಯ ಆಸ್ತಿ ವಿವರಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಪಕ್ಷಗಳು ರಾಜ್ಯದ ಪ್ರತಿಷ್ಠೆಗೆ ಕೊಳ್ಳಿ ಇಟ್ಟಿವೆ: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಸರಣಿ ಟ್ವೀಟ್

ಇದನ್ನೂ ಓದಿ: CCB Transfers: ಸಿಸಿಬಿ ಅಂಗಳದಲ್ಲಿ ಬೇರು ಬಿಟ್ಟಿದ್ದ ಸಿಬ್ಬಂದಿಗೆ ಸಾಮೂಹಿಕ ಟ್ರಾನ್ಸ್​​ಫರ್​​ ಶಾಕ್!

Published On - 11:00 am, Wed, 23 February 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್