ಬಳ್ಳಾರಿ: ಪಲ್ಸ್ ವರ್ಡ್ಸ್ ಕಂಪನಿ ವಿರುದ್ಧ ಸಾರ್ವಜನಿಕರಿಗೆ ಕೋಟ್ಯಾಂತರ ರೂ. ವಂಚನೆ; ಮ್ಯಾನೇಜರ್ ಬಂಧನ
ಬಳ್ಳಾರಿಯ ಸುಮಾರು 500 ಕ್ಕೂ ಹೆಚ್ಚು ಮಹಿಳೆಯರು, ಜನರಿಂದ ಕೋಟ್ಯಾಂತರ ಹಣ ಹೂಡಿಕೆ ಮಾಡಲಾಗಿತ್ತು. ಸುಮಾರು ಹತ್ತು ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ಮಾಡಲಾಗಿದೆ. ಫಲ್ಸ್ ವರ್ಡ್ಸ್ ಕಂಪನಿಯ ಮ್ಯಾನೇಜರ್ ಕುಮಾರ್ ಬಂಧನ ಮಾಡಲಾಗಿದೆ. ಮಾಲೀಕ ದೂದ್ದಂ ರವಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಬಳ್ಳಾರಿ: ಇಲ್ಲಿನ ಪಲ್ಸ್ ವರ್ಡ್ಸ್ ಕಂಪನಿ ವಿರುದ್ಧ ಸಾರ್ವಜನಿಕರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮ್ಯಾನೇಜರ್ ರವೀಂದ್ರ ಬಾಬು ಅಲಿಯಾಸ್ ಕುಮಾರ್ ಬಂಧನ ಮಾಡಲಾಗಿದೆ. ಈ ಕಂಪನಿಯಲ್ಲಿ ಮುತ್ತು ಪೋಣಿಸಿಕೊಟ್ರೆ ಲಾಭದ ಆಮಿಷ ತೋರಿಸಿ ವಂಚನೆ ಮಾಡಿದ್ದಾರೆ. ಬಳ್ಳಾರಿಯ ಜನ ಲಾಭ ಸಿಗುತ್ತೆಂದು ಹಣ ಹೂಡಿಕೆ ಮಾಡಿದ್ದಾರೆ. 300ಕ್ಕೂ ಹೆಚ್ಚು ಜನರು ಹಣ ಹೂಡಿಕೆ ಮಾಡಿದ್ದಾರೆ. ನಿನ್ನೆ ರಾತ್ರಿವರೆಗೆ 110 ಜನ ದೂರು ದಾಖಲು ಮಾಡಿದ್ದಾರೆ. 110 ಜನರು 3.11 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಹೇಳಿಕೆ ನೀಡಿದ್ದಾರೆ.
ಫರ್ಲ್ಸ್ ವರ್ಡ್ಸ್ ವಂಚನೆ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ. ಪ್ರಕರಣದ ಬಳಿಕ ಸಾಲು ಸಾಲಾಗಿ ಆಗಮಿಸಿ ಮಹಿಳೆಯರು ದೂರು ದಾಖಲಿಸುತ್ತಿದ್ದಾರೆ. ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಇಂದು ಸಹ ನೂರಾರು ಜನರಿಂದ ದೂರು ದಾಖಲು ಮಾಡಲಾಗಿದೆ. ಠಾಣೆಯ ಮುಂದೆಲ್ಲಾ ದೂರು ದಾಖಲಿಸಲು ಮಹಿಳೆಯರು ಕ್ಯೂ ನಿಂತಿದ್ದಾರೆ. ಮುತ್ತು ಪೋಣಿಸಿಕೊಟ್ರೆ ಲಾಭಾಂಶ ನೀಡುವುದಾಗಿ ಜನರಿಂದ ಹಣ ಹೂಡಿಕೆ ಮಾಡಿಸಲಾಗಿತ್ತು. ಬಳ್ಳಾರಿಯ ಸುಮಾರು 500 ಕ್ಕೂ ಹೆಚ್ಚು ಮಹಿಳೆಯರು, ಜನರಿಂದ ಕೋಟ್ಯಾಂತರ ಹಣ ಹೂಡಿಕೆ ಮಾಡಲಾಗಿತ್ತು. ಸುಮಾರು ಹತ್ತು ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ಮಾಡಲಾಗಿದೆ. ಫಲ್ಸ್ ವರ್ಡ್ಸ್ ಕಂಪನಿಯ ಮ್ಯಾನೇಜರ್ ಕುಮಾರ್ ಬಂಧನ ಮಾಡಲಾಗಿದೆ. ಮಾಲೀಕ ದೂದ್ದಂ ರವಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಹೆರಿಗೆಯಾದ 2 ಗಂಟೆಯಲ್ಲೇ ಶಿಶು ನಾಪತ್ತೆ ಕೇಸ್: ಆಸ್ಪತ್ರೆಯ ಓರ್ವ ಸಿಬ್ಬಂದಿ ಪೊಲೀಸರ ವಶಕ್ಕೆ
ಫೆಬ್ರವರಿ 16 ರಂದು ಹೆರಿಗೆಯಾದ 2 ಗಂಟೆಯಲ್ಲೇ ಶಿಶು ನಾಪತ್ತೆ ಕೇಸ್ ಸಂಬಂಧಿಸಿ ಆಸ್ಪತ್ರೆಯ ಓರ್ವ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿ ವಶಕ್ಕೆ ಪಡೆಯಲಾಗಿದೆ. ದಾವಣಗೆರೆ ನಗರದ ಚಾಮರಾಜಪೇಟೆಯಲ್ಲಿರುವ ಆಸ್ಪತ್ರೆಯ ಉಮಾಸಲ್ಮಾ, ಇಸ್ಮಾಯಿಲ್ ಜಬೀವುಲ್ಲಾ ದಂಪತಿ ಶಿಶು ನಾಪತ್ತೆ ಆಗಿತ್ತು.
ಇತರ ಅಪರಾಧ ಸುದ್ದಿಗಳು
ಬೆಂಗಳೂರು: ಮಾ.19ರಂದು ಮಹದೇವಪುರದಲ್ಲಿ ಡಿಜೆ ಪಾರ್ಟಿ ವೇಳೆ ಮೊಬೈಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಸದ್ದಾಂ (24), ವಸೀಂ (32), ಮೊಹಮ್ಮದ್ ಆದೀಲ್ (33), ಇರ್ಶಾದ್ (29) ಎಂಬವರನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಬೈಕ್ ಕಳ್ಳತನದ ಆರೋಪಿ ಇಮ್ತಿಯಾಜ್ ಎಂಬಾತನನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 4 ಬೈಕ್‌ಗಳು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: Crime News: ಕೌಟುಂಬಿಕ ಕಲಹ ಹಿನ್ನೆಲೆ; ಚಾಕುವಿನಿಂದ ಪತ್ನಿ ಕುತ್ತಿಗೆ ಕೊಯ್ದು ಪತಿ ಆತ್ಮಹತ್ಯೆಗೆ ಯತ್ನ
ಇದನ್ನೂ ಓದಿ: PAN card fraud: ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಬಳಸಿ ಬೇರೆಯವರು ಸಾಲ ತೆಗೆದುಕೊಂಡಿದ್ದಾರಾ? ಇದನ್ನು ತಿಳಿಯುವುದು ಹೀಗೆ