Hampi Festival: ಪ್ರವಾಸಿಗರ ಅನುಕೂಲಕ್ಕಾಗಿ ಇನ್ನು ಮುಂದೆ ಮೈಸೂರು ದಸರಾ ನಂತರ ನಡೆಯಲಿದೆ ಹಂಪಿ ಉತ್ಸವ
ಉತ್ಸವಗಳು ನಿನ್ನೆ ಮೊನ್ನೆ ಪ್ರಾರಂಭವಾಗಿದ್ದಲ್ಲ, ರಾಜ ಮಹಾರಾಜರ ಕಾಲದಲ್ಲಿ ಉತ್ಸವ ಜಾತ್ರೆ ಇರುತ್ತಿದ್ದವು. ವಿಜಯನಗರ ಜಿಲ್ಲೆಯಾದ ಬಳಿಕ ಶಕ್ತಿವಂತರಾದ್ದೇವೆ. ನಾವು ಬರುತ್ತೇವೆ, ಹೋಗುತ್ತೇವೆ. ಆದರೆ ಉತ್ಸವಗಳು ಶಾಶ್ವತವಾಗಿರಬೇಕು ಎಂದು ಸಚಿವ ಆನಂದ್ ಸಿಂಗ್ ಹೇಳಿದರು.
ವಿಜಯನಗರ: ಪ್ರವಾಸಿಗರ ಅನುಕೂಲಕ್ಕಾಗಿ ಇನ್ನು ಮುಂದೆ ಹಂಪಿ ಉತ್ಸವವನ್ನು (Hampi Festival) ಮೈಸೂರು ದಸರಾ ನಂತರ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಆನಂದ್ ಸಿಂಗ್ (Anand Singh) ಹೇಳಿದ್ದಾರೆ. ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆದ ಹಂಪಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನವರಾತ್ರಿ ನಂತರ ನವೆಂಬರ್ 3, 4 ಹಾಗೂ 5ರಂದು ಹಂಪಿ ಉತ್ಸವ ನಡೆಸಲು ಚಿಂತಿಸಿದ್ದೇವೆ. ಮೈಸೂರು ದಸರಾ ಮುಗಿಸಿಕೊಂಡು ಬರುವ ಪ್ರವಾಸಿಗರಿಗೆ ಇದು ಅನುಕೂಲವಾಗಲಿದೆ. ಮುಂದೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಹಂಪಿ ಉತ್ಸವ ಉದ್ಘಾಟನೆ ಮಾಡುತ್ತಾರೆ. ಅದ್ಧೂರಿಯಾಗಿ ಮುಂದಿ ವರ್ಷ ನಾವಏ ಉತ್ಸವ ಮಾಡುತ್ತೇವೆ ಎಂದು ಪರೋಕ್ಷವಾಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.
ಉತ್ಸವಗಳು ನಿನ್ನೆ ಮೊನ್ನೆ ಪ್ರಾರಂಭವಾಗಿದ್ದಲ್ಲ. ರಾಜ ಮಹಾರಾಜರ ಕಾಲದಲ್ಲಿ ಉತ್ಸವ ಜಾತ್ರೆ ಇರುತ್ತಿದ್ದವು. ವಿಜಯನಗರ ಜಿಲ್ಲೆಯಾದ ಬಳಿಕ ಶಕ್ತಿವಂತರಾದ್ದೇವೆ. ನಾವು ಬರುತ್ತೇವೆ, ಹೋಗುತ್ತೇವೆ. ಆದರೆ ಉತ್ಸವಗಳು ಶಾಶ್ವತವಾಗಿರಬೇಕು. ದಾಖಲೆ ಮಾಡುವ ಕಟ್ಟಡ ಕಟ್ಟುವ ದೇಶಗಳಿವೆ. ಆದರೆ ವಿಜಯನಗರ ಸಾಮ್ರಾಜ್ಯದ ಶೈಲಿಯ ಕಟ್ಟಡ ಇಂದಿಗೂ ಮಾದರಿಯಾಗಿವೆ. ಎಂಪಿ ಪ್ರಕಾಶ ಅವರು ಸಣ್ಣ ಪ್ರಮಾಣದಲ್ಲಿ ಉತ್ಸವ ಪ್ರಾರಂಭ ಮಾಡಿದ್ದರು. ಇಲ್ಲಿಂದಲೇ ರಾಜ್ಯದ ಹಲವು ಕಡೆ ಉತ್ಸವ ಪ್ರಾರಂಭ ಮಾಡಲಾಯಿತು ಎಂದರು.
ಇದನ್ನೂ ಓದಿ: Hampi Utsav 2023: ಮನ ಸೆಳೆಯುತ್ತಿರುವ ಹಂಪಿ ಉತ್ಸವ: ಜಿಲ್ಲೆಯ ಜೀವ ವೈವಿಧ್ಯತೆ ಅನಾವರಣ
ಕೋವಿಡ್ನಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತವಾಗಿದ್ದ ವಿಶ್ವ ವಿಖ್ಯಾತ ಹಂಪಿ ಉತ್ಸವ ಈ ಭಾರಿ ಅದ್ದೂರಿಯಾಗಿ ವಿಜೃಂಭಣೆಯಿಂದ ನಡೆಯಿತು. ಹಂಪಿಯ ಗಾಯತ್ರಿ ಪೀಠದ ಬಳಿ ನಿರ್ಮಿಸಿರುವ ಅದ್ದೂರಿಯಾದ ವೇದಿಕೆಯಲ್ಲಿ ಉತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಜನವರಿ 27ರಂದು ಚಾಲನೆ ನೀಡಿದ್ದರು.
ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದ ಉತ್ಸವದಲ್ಲಿ ವಿವಿಧ ಕಾರ್ಯಕ್ರಮ ಹಾಗೂ ಪ್ರದರ್ಶನಗಳು ನಡೆದವು. ಉತ್ಸವದಲ್ಲಿ ಓಡಿಸ್ಸಾದ ಕಲಾವಿದರು ಮರಳಿನಲ್ಲಿ ಅಪರೂಪದ ಮರಳು ಕೃತಿಗಳನ್ನ ರಚಿಸಿದ್ದರು. ತೋಟಗಾರಿಕೆ ಇಲಾಖೆಯಿಂದ ಫಲಪುಪ್ಪ ಪ್ರದರ್ಶನ ಆಯೋಜಿಸಿರುವ ಫಲಪುಪ್ಪ ಪ್ರದರ್ಶನದಲ್ಲಿ ಹಂಪಿಯ ವಿವಿದ ಸ್ಮಾರಕಗಳು ಅರಳಿವೆ. ಸಾಲು ಮಂಟಪವನ್ನ ರಚನೆ ಮಾಡಿರುವುದು ಪೇಕ್ಷಕರ ಆಕರ್ಷಣೆಗೆ ಪಾತ್ರವಾಯಿತು. ಉತ್ಸವದಲ್ಲಿ ಮೊದಲ ದಿನ ಅರ್ಜುನ ಜನ್ಯ ಸೇರಿದಂತೆ ವಿವಿಧ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಒಟ್ಟಾರೆಯಾಗಿ ಮೂರು ದಿನಗಳ ಹಂಪಿ ಉತ್ಸವವು ಸಾಂಸ್ಕೃತಿಕ ಪ್ರೀಯರ ರಂಜನೆಗೆ ಕಾರಣವಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:11 pm, Sun, 29 January 23