ಬಳ್ಳಾರಿ: ನಮ್ಮ ಕೆಆರ್ಪಿಪಿ (KRPP) ಪಕ್ಷದವರು ಸರ್ಕಾರಿ ಕಚೇರಿಗಳಿಗೆ ಬಂದರೇ ಕೆಲಸ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಇದು ಸರಿಯಲ್ಲ. ಬಳ್ಳಾರಿ (Ballari) ಅಭಿವೃದ್ಧಿ ಮಾಡಿಮಾಡಿಲ್ಲ ಅಂದರೇ ಕೆಆರ್ಪಿಪಿ ಪಕ್ಷದ ವತಿಯಿಂದ ಹೋರಾಟ ಮಾಡುತ್ತವೆ. ಕೆಆರ್ಪಿಪಿ ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ತೊಂದರೆ ಕೊಟ್ಟರೇ ಸುಮ್ಮನೆ ಇರುವ ಮಾತಿಲ್ಲ. ಕಾರ್ಯಕರ್ತರಿಗೆ ಬೆದರಿಕೆ ಹಾಕಿದರೇ ವಿಧಾನಸೌಧದ ಒಳಗೆ ಹೊರಗೆ ಹೋರಾಟ ಮಾಡುತ್ತೇನೆ. ಎಂದು ಪರೋಕ್ಷವಾಗಿ ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ಮತ್ತು ಉಸ್ತುವಾರಿ ಸಚಿವರಿಗೆ,ಕೆಆರ್ಪಿಪಿ ಶಾಸಕ ಜನಾರ್ದನ ರೆಡ್ಡಿ (Janardhan Reddy) ಎಚ್ಚರಿಕೆ ನೀಡಿದ್ದಾರೆ.
ವರಮಹಾಲಕ್ಷ್ಮೀ ಹಬ್ಬದ ಹಿನ್ನಲೆಯಲ್ಲಿ ಇಂದು (ಆ.25) ಬಳ್ಳಾರಿಯಲ್ಲಿ ಕೆಆರ್ಪಿಪಿ ಪಕ್ಷದ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಜನಾರ್ದನ ರೆಡ್ಡಿ ವರ್ಚ್ಯುಯಲ್ ಮೂಲಕ ಭಾಗವಹಿಸಿ ಮಾತನಾಡಿದ ಅವರು ರಾಜಕೀಯ ಕುತಂತ್ರದಿಂದ ಬಳ್ಳಾರಿಯಿಂದ ಹೊರಗೆ ಕಳುಹಿಸಲಾಯ್ತು. ಯಾರನ್ನು ನಾನು ಬೆಳೆಸಿದ್ದೇನೆ ಅವರು ನನಗೆ ಮೋಸ ಮಾಡಿದರು. ಹೀಗಾಗಿ ಅವರನ್ನು ಕಳೆದ ಚುನಾವಣೆಯಲ್ಲಿ ಜನರು ಸೋಲಿಸಿದರು ಎಂದು ಪರೋಕ್ಷವಾಗಿ ಶ್ರೀರಾಮುಲು, ಸೋಮಶೇಖರ್ ರೆಡ್ಡಿ ವಿರುದ್ಧ ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಅಂಜನಾದ್ರಿ ಹೆಸರಿನಲ್ಲಿ ರಾಜಕೀಯ: ಬಿಜೆಪಿ ವಿರುದ್ಧ ಶಾಸಕ ಜನಾರ್ದನ ರೆಡ್ಡಿ ಅಸಮಾಧಾನ
ನನ್ನ ಪತ್ನಿ ಲಕ್ಷ್ಮೀ ಅರುಣಾ ಸೋಲಿಸಲು ಹೋಗಿ ಮನೆಯಲ್ಲಿ ಕುಳಿತಿದ್ದಾರೆ. ಲಕ್ಷ್ಮೀ ಅರುಣಾ ಮತ್ತು ಜನಾರ್ದನ ರೆಡ್ಡಿ ನಿಮ್ಮ ಜೊತೆಗೆ ಇರುತ್ತಾರೆ. ನಮ್ಮವರೇ ವಿರೋಧಿಗಳ ಜೊತೆಗೆ ಸೇರಿ ನಮ್ಮನ್ನು ಸೋಲಿಸಿದರು ಎಂದು ಅಸಮಾಧಾನ ಹೊರಹಾಕಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:50 pm, Fri, 25 August 23