AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಲ್ಮೀಕಿ ನಿಗಮದ ಹಣದಲ್ಲಿ ಬೆಂಝ್​ ಕಾರು, ಲೋಕಸಭಾ ಚುನಾವಣೆಗೆ 21 ಕೋಟಿ ರೂ.ಬಳಕೆ: ಇಡಿ ತನಿಖೆಯಲ್ಲಿ ಬಹಿರಂಗ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ಕಾಂಗ್ರೆಸ್‌ನ ನಾಲ್ಕು ಶಾಸಕರು ಮತ್ತು ಸಂಸದರ ಮನೆಗಳ ಮೇಲೆ ದಾಳಿ ನಡೆದಿದ್ದು, ನಿಗಮದ 21 ಕೋಟಿ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಲಾಗಿದೆ ಎನ್ನಲಾಗಿದೆ. ಇಡಿ ಅಧಿಕಾರಿಗಳು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ವಾಲ್ಮೀಕಿ ನಿಗಮದ ಹಣದಲ್ಲಿ ಬೆಂಝ್​ ಕಾರು, ಲೋಕಸಭಾ ಚುನಾವಣೆಗೆ 21 ಕೋಟಿ ರೂ.ಬಳಕೆ: ಇಡಿ ತನಿಖೆಯಲ್ಲಿ ಬಹಿರಂಗ
ವಾಲ್ಮೀಕಿ ನಿಗಮ, ಇಡಿ
Follow us
ವಿವೇಕ ಬಿರಾದಾರ
|

Updated on:Jun 11, 2025 | 3:15 PM

ಬಳ್ಳಾರಿ, ಜೂನ್​ 11: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ (Maharshi Valmiki Scheduled Tribes Development Corporation Limited) ಅಕ್ರಮ ಹಣ ವರ್ಗಾವಣೆಗೆ (Illegal Money Transfer) ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ (ED) ಮತ್ತೊಂದು ಸುತ್ತಿನ ದಾಳಿ ಮಾಡಿದೆ. ಇಡಿ ಅಧಿಕಾರಿಗಳು ಈ ಬಾರಿ ಸಂಸದರನ್ನು ಒಳಗೊಂಡಂತೆ ಕಾಂಗ್ರೆಸ್​ನ ಬಳ್ಳಾರಿ ಜಿಲ್ಲೆಯ ನಾಲ್ಕು ಶಾಸಕರ ಮನೆ ಮೇಲೆ ದಾಳಿ ಮಾಡಿದ್ದಾರೆ. ಹಗರಣ ಸಂಬಂಧ ಇಡಿ ಈ ಹಿಂದೆ ಕೂಡ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸಿಕ್ಕ ದಾಖಲೆಗಳ ಆಧಾರದ ಮೇಲೆ ಇಂದು (ಜೂ.11) ಮತ್ತೆ ದಾಳಿ ನಡೆದಿದೆ ಎನ್ನಲಾಗಿದೆ.

ಇಡಿ ಅಧಿಕಾರಿಗಳು ಈ ಹಿಂದೆ ವಶಪಡಿಸಿಕೊಂಡಿದ್ದ ದಾಖಲೆಗಳಲ್ಲಿ ನಿಗಮದ ಹಣ ಅಕ್ರಮವಾಗಿ ಹೇಗೆ ವರ್ಗಾವಣೆಯಾಗಿದೆ ಎಂಬುವುದು ಬಹಿರಂಗವಾಗಿದೆ. ಯಾರ್ಯಾರ ಮೂಲಕ ಯಾವ ದಿನಾಂಕದಂದು ಹಣ ವಹಿವಾಟು ಆಗಿತ್ತು? ಯಾರ್ಯಾರಿಗೆ ಎಷ್ಟು ಹಣ ನೀಡಲಾಗಿತ್ತು? ಎಂಬುವುದು ಇಡಿ ವಶಪಡಿಸಿಕೊಂಡಿರುವ ದಾಖಲೆಯಲ್ಲಿ ಅಡಕವಾಗಿದೆ.

ವಾಲ್ಮೀಕಿ ನಿಗಮದಿಂದ ಅಕ್ರಮವಾಗಿ ವರ್ಗಾಯಿಸಿಕೊಂಡ ಹಣದಲ್ಲಿ 21 ಕೋಟಿಯಷ್ಟು ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆ ಮಾಡಿಕೊಳ್ಳಲಾಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿಯ ನಾಲ್ಕು ಕ್ಷೇತ್ರಕ್ಕೆ 21 ಕೋಟಿ ರೂಪಾಯಿಷ್ಟು ಹಣದ ಹೊಳೆ ಹರಿದಿತ್ತು.

ಇದನ್ನೂ ಓದಿ
Image
ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು
Image
ರನ್ಯಾಗೆ ಮುಗಿಯದ ಸಂಕಷ್ಟ; ಐಟಿ ಇಲಾಖೆಯಿಂದ 3 ದಿನ ನಟಿಯ ವಿಚಾರಣೆ
Image
ವಾಲ್ಮೀಕಿ ಹಗರಣ: ಬಿ.ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ
Image
ವಾಲ್ಮೀಕಿ‌‌‌‌ ನಿಗಮ ಹಗರಣ: ನಾಗೇಂದ್ರನೇ ಪ್ರಮುಖ ಆರೋಪಿ

ಯಾವ ಯಾವ ಕ್ಷೇತ್ರಕ್ಕೆ ಎಷ್ಟು ಕೋಟಿ ಹಣ.

  • ಬಳ್ಳಾರಿ ಗ್ರಾಮೀಣದ – 235 ಮತಗಟ್ಟೆಗಳಿಗೆ ಒಟ್ಟು 5 ಕೋಟಿ 22 ಲಕ್ಷ ಹಣ ನೀಡಲಾಗಿತ್ತು. ಒಂದೊಂದು ಬೂತ್​​ಗೆ 23 ಲಕ್ಷ ರೂ. ನೀಡಲಾಗಿತ್ತು.
  • ಬಳ್ಳಾರಿ ನಗರದ – 150 ಮತಗಟ್ಟೆಗಳಿಗೆ ಒಟ್ಟು 3 ಕೋಟಿ 60 ಲಕ್ಷ ಹಣ ನೀಡಲಾಗಿತ್ತು. ಒಂದೊಂದು ಬೂತ್​ಗೂ 15 ಲಕ್ಷ ರೂ. ಹಂಚಲಾಗಿತ್ತು.
  • ಕಂಪ್ಲಿ ಕ್ಷೇತ್ರದ – 180 ಮತಗಟ್ಟೆಗಳಿಗೆ ಒಟ್ಟು 3 ಕೋಟಿ 20 ಲಕ್ಷ ಹಣ ನೀಡಲಾಗಿತ್ತು. ಒಂದೊಂದು ಬೂತ್​ಗೆ 18 ಲಕ್ಷ ಹಣ ಹಂಚಲಾಗಿತ್ತು.
  • ಕೂಡ್ಲಿಗಿ ಕ್ಷೇತ್ರದ – 160 ಮತ್ತಗಟ್ಟೆಗಳಿಗೆ ಒಟ್ಟು 3 ಕೋಟಿ ಹಣ ನೀಡಲಾಗಿತ್ತು. ಒಂದೊಂದು ಬೂತ್​ಗೆ 15 ಲಕ್ಷ ರೂ. ಹಂಚಲಾಗಿತ್ತು ಎಂಬ ಮಾಹಿತಿ ದೊರೆತಿದೆ. ಪ್ರತಿ ಮತದಾರನ ತಲೆಗೆ 200 ರೂಪಾಯಿ ನಿಗಧಿ‌ ಮಾಡಿ ಹಣ ಹಂಚಿಕೆ ಮಾಡಲಾಗಿತ್ತು.

ನಿಗಮದ ಹಣದಲ್ಲಿ ಬೆಂಝ್​ ಕಾರು ಖರೀದಿ

ಹಗರಣದ ಆರೋಪಿ ಸತ್ಯನಾರಾಯಣ ವರ್ಮಾ ತನ್ನ ಬಳಿ ಇದ್ದ 4.2 ಕೋಟಿ ರೂ. ಹಣದಲ್ಲಿ 1.5 ಕೋಟಿಯಷ್ಟು ಸಾಲ ತೀರಿಸಿದ್ದಾನೆ. 1.2 ಕೋಟಿ ರೂ. ಬೆಲೆ ಬಾಳುವ ಬೆಂಝ್ ಕಾರ್ ಖರೀದಿಸಿದ್ದಾನೆ. ಉಳಿದ ಹಣವನ್ನು ರಿಯಲ್ ಎಸ್ಟೇಟ್​ನಲ್ಲಿ ತೊಡಗಿಸಿದ್ದಾನೆ ಎಂದು ಇಡಿ ಮೂಲಗಳಿಂದ ತಿಳಿದುಬಂದಿದೆ. ಅಲ್ಲದೇ, ಮೂರು ಕಂತುಗಳಲ್ಲಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭನಿಗೆ ಕೊಟ್ಟಿದ್ದಾನೆ.

  • ಮೊದಲ ಕಂತು: ಮಾರ್ಚ್ 7 ರಂದು ಆನಂದರಾವ್ ಸರ್ಕಲ್​ನಲ್ಲಿರುವ ಹೊಟೇಲ್ ಒಂದರಲ್ಲಿ 90 ಲಕ್ಷ ಹಣ ನೀಡಿದ್ದಾನೆ.
  • ಎರಡನೇ ಕಂತು: ಮಾರ್ಚ್ 7 ರಂದೇ ನಾಗೇಂದ್ರ ರವಿ ನೆಕ್ಕಂಟಿಗೆ 1.2 ಕೋಟಿ ಹಣ ನೀಡಿದ್ದಾನೆ.
  • ಮೂರನೇ ಕಂತು: ಉಳಿದ 5.25 ಕೋಟಿ ಹಣವನ್ನು ಯಶವಂತಪುರದಲ್ಲಿನ ಮಾಲ್​ವೊಂದರ ಬಳಿ ಮಾಜಿ ಎಂಡಿ ಪದ್ಮನಾಭನಿಗೆ ನೀಡಿದ್ದಾನೆ.

ಹವಾಲಾ ವಾಸನೆ

ಆರೋಪಿ ನೆಕ್ಕಂಟಿ ನಾಗರಾಜ್ ಐ ಫೋನ್​ನಲ್ಲಿ 20 ರೂ. ನೋಟಿನ ಫೋಟೋ ಪತ್ತೆಯಾಗಿದೆ. ಹವಾಲಾ ವ್ಯವಹಾರಕ್ಕೆ ಈ 20 ರೂ. ನೋಟ್ ಬಳಸಲಾಗಿದೆ. ನಾಗರಾಜ ನೆಕ್ಕಂಟಿ ತನ್ನ ಸಹೋದರ ನೆಕ್ಕಂಟಿ ರಮೇಶ್​ಗೆ 20 ರೂ. ನೋಟ್ ಕೊಟ್ಟಿದ್ದನು.ಸತ್ಯನಾರಾಯಣ ವರ್ಮಾಗೆ ಈ ನೋಟ್ ಕೊಟ್ಟರೆ 1.5 ಕೋಟಿ ಹಣ ಕೊಡುತ್ತಾನೆ ಅಂತ ನೆಕ್ಕಂಟಿ ನಾಗರಾಜ್ ಹೇಳಿದ್ದನು. ಅದರಂತೆ, ನೆಕ್ಕಂಟಿ ರಮೇಶ್ 300042317 ನಂಬರ್​ನ 20 ರೂ. ಕೊಟ್ಟು 1.5 ಕೋಟಿ ಹಣ ಪಡೆದಿದ್ದನು. ಈ ಎಲ್ಲ ಹಣದ ವಹಿವಾಟುಗಳು ಮಾಜಿ ಸಚಿವ, ಶಾಸಕ ಬಿ. ನಾಗೇಂದ್ರಗೆ ಗೊತ್ತಿತ್ತು. ಮತ್ತು ಬಿ. ನಾಗೇಂದ್ರ ಸೂಚನೆ ಮೇರೆಗೆ ಇದೆಲ್ಲವೂ ನಡೆದಿತ್ತು ಎಂದು ಗೊತ್ತಾಗಿದೆ.

ದುಡ್ಡಿನ ಫೋಟೋ ರಿಕವರಿ ಮಾಡಿದ್ದ ಇಡಿ

21 ಕೋಟಿ ದುಡ್ಡಿನ ಫೋಟೋವನ್ನು ಇಡಿ ಅಧಿಕಾರಿಗಳು ರಿಕವರಿ ಮಾಡಿದ್ದಾರೆ. ನಾಗೇಂದ್ರ ಪಿ ಎ ಗೋವರ್ಧನ ಮೂಲಕ ಹವಾಲ ಹಣ ನೀಡಲಾಗಿದೆ. ಹವಾಲಕ್ಕೆ ಬಳಸಿದ್ದ 20 ರೂಪಾಯಿ ನೋಟಿನ ಫೋಟೋ ಮತ್ತು ಹವಾಲಾ ಮೂಲಕ ಪಡೆದ ಕಂತೆ ಕಂತೆ ಹಣದ ಫೋಟೋ ಇಡಿ ಅಧಿಕಾರಿಗಳಿಗೆ ಲಭ್ಯವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಸಂಸದ,​​ ಶಾಸಕರ ಮನೆಗಳ ಮೇಲೆ ಇಡಿ ದಾಳಿ ವಿಚಾರ: ಸಿಎಂ ಸೇರಿ ಯಾರೆಲ್ಲಾ ಏನಂದ್ರು?

ಮೊಬೈಲ್​ ವಶಕ್ಕೆ ಪಡೆದ ಇಡಿ ಅಧಿಕಾರಿಗಳು

ಕಾಂಗ್ರೆಸ್ ಶಾಸಕರು, ಸಂಸದರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದು, ಸಂಸದ ಇ.ತುಕಾರಾಂ, ಶಾಸಕಿ ಅನ್ನಪೂರ್ಣ ಅವರ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಶಾಸಕರಾದ ಭರತ್​ ರೆಡ್ಡಿ, ಜೆ.ಎನ್​.ಗಣೇಶ್ ಮೊಬೈಲ್ ಸಹ ವಶಕ್ಕೆ ಪಡೆದು, ಪರಿಶೀಲಿಸುತ್ತಿದ್ದಾರೆ.

ವರದಿ: ವಿಕಾಸ್​

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:10 pm, Wed, 11 June 25

Daily Devotional: ಈ 5 ವಿಷಯಗಳನ್ನ ಯಾರಿಗೂ ಹೇಳಬಾರದು
Daily Devotional: ಈ 5 ವಿಷಯಗಳನ್ನ ಯಾರಿಗೂ ಹೇಳಬಾರದು
ಸೂರ್ಯ ಮಿಥುನ ರಾಶಿಯಲ್ಲಿ, ಇಂದು ಯಾರಿಗೆಲ್ಲಾ ಶುಭ ದಿನ ತಿಳಿಯಿರಿ
ಸೂರ್ಯ ಮಿಥುನ ರಾಶಿಯಲ್ಲಿ, ಇಂದು ಯಾರಿಗೆಲ್ಲಾ ಶುಭ ದಿನ ತಿಳಿಯಿರಿ
ನಟಿ ರಚಿತಾ ರಾಮ್ ವಿರುದ್ಧ ಕ್ರಮ ಕೈಗೊಳ್ಳುತ್ತಾ ಚಲನಚಿತ್ರ ವಾಣಿಜ್ಯ ಮಂಡಳಿ?
ನಟಿ ರಚಿತಾ ರಾಮ್ ವಿರುದ್ಧ ಕ್ರಮ ಕೈಗೊಳ್ಳುತ್ತಾ ಚಲನಚಿತ್ರ ವಾಣಿಜ್ಯ ಮಂಡಳಿ?
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!