AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಡುಗಿಯರ ಮಿಸ್‌ಯೂಸ್ ಮಾಡೋ ಜಾಲ ಬಯಲಿಗೆಳೆದು ಯುವಕ ಆತ್ಮಹತ್ಯೆ

ಹುಡುಗಿಯರ ಮಿಸ್‌ಯೂಸ್ ಮಾಡೋ ಜಾಲದ ಮಾಹಿತಿ ಬಿಚ್ಚಿಟ್ಟು ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಾಲದ ಬಗ್ಗೆ ಆಡಿಯೋ ಹಾಗೂ ಪೋಟೋ ಎಡಿಟ್ ಮಾಡಿದ ವಿಡಿಯೋ ಹಂಚಿಕೊಂಡು ಯುವಕ ಸಾವಿಗೆ ಶರಣಾಗಿದ್ದಾನೆ. ವಿಡಿಯೋದಲ್ಲಿ ಹುಡುಗಿಯರನ್ನು ಮಿಸ್‌ಯೂಸ್ ಮಾಡುವ ಜಾಲದ ಬಗ್ಗೆ ಯುವಕ ಎಳೆ ಎಳೆಯಾಗಿ ವಿವರಿಸಿದ್ದಾನೆ.

ಹುಡುಗಿಯರ ಮಿಸ್‌ಯೂಸ್ ಮಾಡೋ ಜಾಲ ಬಯಲಿಗೆಳೆದು ಯುವಕ ಆತ್ಮಹತ್ಯೆ
Santosh
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ರಮೇಶ್ ಬಿ. ಜವಳಗೇರಾ

Updated on: Jun 11, 2025 | 3:23 PM

ಕಾರವಾರ, (ಜೂನ್ 11): ಹುಡುಗಿಯರ ಮಿಸ್‌ಯೂಸ್ ಮಾಡೋ ಜಾಲದ ಮಾಹಿತಿ ಬಿಚ್ಚಿಟ್ಟು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಕನ್ನಡ (Uttara Kannada) ಜಿಲ್ಲೆಯ ಸಿದ್ಧಾಪುರದಲ್ಲಿ ನಡೆದಿದೆ. ಸಂತೋಷ್ ಗಣಪತಿ ನಾಯ್ಕ (26), ಆತ್ಮಹತ್ಯೆ ಮಾಡಿಕೊಂಡ ಯುವಕ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬೆನ್ನೂರು ಚಿಕ್ಕತೌಡತ್ತಿ ನಿವಾಸಿಯಾಗಿರುವ ಸಂತೋಷ್ ಸಾವಿಗೆ ಶರಣಾಗು ಮುನ್ನ ಹುಡುಗಿಯರ ಮಿಸ್‌ಯೂಸ್ ಮಾಡೋ ಜಾಲದ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಜಾಲದ ಬಗ್ಗೆ ಆಡಿಯೋ ಹಾಗೂ ಪೋಟೋ ಎಡಿಟ್ ಮಾಡಿದ ವಿಡಿಯೋ ಹಂಚಿಕೊಂಡಿದ್ದಾನೆ. ಅಲ್ಲದೇ ಸಿದ್ಧಾಪುರ ಕಾಂಗ್ರೆಸ್ ನಾಯಕರ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾನೆ.

ಹುಡುಗಿಯರ ಮಿಸ್‌ಯೂಸ್ ಮಾಡೋ ಜಾಲವನ್ನು ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ಸಿದ್ಧಾಪುರ ತಾಲೂಕಿನ ಚನಮಾಂವದ ಚರಣ್, ಲೋಕೇಶ್, ಮನೋಜ್ ಹಾಗೂ ಇತರೆ 4 ಜನರು ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿಕೊಂಡ ಸಂತೋಷ್, ಸಿದ್ಧಾಪುರದ ತಾಲೂಕಿನ ಕಾನೆಹಳ್ಳಿ ಬಳಿ ದೂಪದಕಾನು ಅರಣ್ಯದಲ್ಲಿ ಅಕೇಶಿಯಾ ಮರಕ್ಕೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗಳ ಮೃತದೇಹ ಪತ್ತೆ, ಸಾವಿನ ಸುತ್ತ ಅನುಮಾನದ ಹುತ್ತ

ಸಂತೋಷ್ ಫೇಸ್‌ಬುಕ್‌ನಲ್ಲಿ ಯುವತಿಯ ಫೇಕ್ ಪ್ರೊಫೈಲ್ ಮಾಡಿ ಜಾಲವನ್ನು ತನ್ನ ಬಲೆಗೆ ಬೀಳಿಸಿದ್ದ. ಹುಡುಗಿಯಂತೆ ಮಾತನಾಡಿ, ಅವರಿಂದ ಮಾಹಿತಿ ಪಡೆದು ಒಂದಷ್ಟು ಹಣ ಕೂಡಾ ಪಡೆದಿದ್ದ. ಆದರೆ, ಫೇಕ್ ಪ್ರೊಫೈಲ್ ಹುಡುಗಿಯದ್ದಲ್ಲ ಸಂತೋಷನದ್ದು ಎಂದು ತಿಳಿದು ಆತನಿಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಮನೆಗೆ ತೆರಳಿ ಗಲಾಟೆ ಮಾಡಿ ಆತನ ಟ್ಯಾಬ್‌ಗಳನ್ನು ಕೂಡಾ ತೆಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ
Image
ಕಂಡ ಕಂಡ ಹೆಣ್ಮಕ್ಕಳಿಗೆ ಮುತ್ತಿಟ್ಟು ಎಸ್ಕೇಪ್ ಅಗುತ್ತಿದ್ದ ಕಾಮುಕ ಅರೆಸ್ಟ್​
Image
ಜಾತ್ರೇಲಿ ಸಿಕ್ಕ ಪ್ರೇಯಸಿಯನ್ನ ಓಯೋ ರೂಮಿಗೆ ಕರೆದೊಯ್ದು ಹತ್ಯೆ:ಅಸಲಿ ಕಾರಣ
Image
ಬಾಲಕಿ ಶವ ಕೇಸ್: ಲೈಂಗಿಕ ಕ್ರಿಯೆಗೆ ಸಹಕರಿಸಿಲ್ಲವೆಂದು ಹತ್ಯೆ
Image
ಇಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಇಡೀ ಕುಟುಂಬಕ್ಕೆ ವಿಷ ಹಾಕಿದ್ಲು

ತಾನು ಪ್ರೀತಿಸಿದ ಯುವತಿ ಕೂಡಾ ಈ ಜಾಲಕ್ಕೆ ಬೆಂಬಲ ನೀಡುತ್ತಿರುವುದಾಗಿ ಆಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಜಾಲದ ಬಗ್ಗೆ ಆಡಿಯೋ ಹಾಗೂ ಪೋಟೋ ಎಡಿಟ್ ಮಾಡಿದ ವಿಡಿಯೋ ಸಹ ಹಂಚಿಕೊಂಡಿದ್ದಾನೆ. ಅಲ್ಲದೇ, ಸಿದ್ಧಾಪುರದ ಕಾಂಗ್ರೆಸ್ ನಾಯಕರ ಬಗ್ಗೆಯೂ ಆರೋಪ ಮಾಡಿದ್ದಾನೆ. ಆರೋಪಿಗಳಿಗೆ ಕಾಂಗ್ರೆಸ್ ನಾಯಕರು ಬೆಂಬಲವಾಗಿ ನಿಂತಿರುವ ಬಗ್ಗೆ ಆಡಿಯೋದಲ್ಲಿ ಹೇಳಿದ್ದಾನೆ.

ತಾನು ಪ್ರೀತಿಸಿದ ಯುವತಿಯನ್ನು ಜಾಲದಿಂದ ರಕ್ಷಣೆ ಮಾಡಲು ಇಷ್ಟೆಲ್ಲಾ ಮಾಡಿದ್ದೆ. ಆದರೆ, ಕೊನೆಗೆ ಪ್ರೀತಿಸಿದ ಯುವತಿಯೇ ಜಾಲಕ್ಕೆ ಬೆಂಬಲವಾಗಿ ನಿಂತಿದ್ದಾಳೆ. ಇನ್ನು ನನಗೇನು ಬೇಡ, ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಆಡಿಯೋ ಮಾಡಿ ಬಳಿಕ ನೇಣು ಹಾಕಿಕೊಂಡಿದ್ದಾನೆ.

ಈ ಸಂಬಂಧ ಮೃತ ಸಂತೋಷ್ ತಂದೆ ಗಣಪತಿ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಂತೋಷ್ ಸಿದ್ಧಾಪುರ ಕೋಲಸಿರ್ಸಿಯ ಅಪೇಕ್ಷಾ ಅನ್ನೋ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ, ಸಿದ್ಧಾಪುರ ಚನಮಾಂವದ ಚರಣ್, ಲೋಕೇಶ್, ಮನೋಜ್ ಹಾಗೂ ಇತರ 4 ಜನರು ಮನೆಗೆ ಬಂದು ಬೆದರಿಕೆ ಹಾಕಿದ್ದರು. ಹುಡುಗಿಯನ್ನು ಲವ್ ಮಾಡಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಬೇರೆಡೆ ಹೋಗಿ ಸಾಯಲು ದುಷ್ಪ್ರೇರಣೆ ನೀಡಿದ್ದರು. ಅಲ್ಲದೇ, ತನಗೂ ಆರೋಪಿಗಳು ಅವಾಚ್ಯವಾಗಿ ನಿಂದಿಸಿದ್ದರು. ಇದರಿಂದ ಭಯಭೀತನಾಗಿದ್ದ ಸಂತೋಷ್ ಊಟ ಕೂಡಾ ಮಾಡುತ್ತಿರಲಿಲ್ಲ. ನಿನ್ನೆ ಮಧ್ಯಾಹ್ನ ಜಮೀನಿಗೆ ಹೋಗಿ ಬರುತ್ತೇನೆಂದು ಸಿದ್ಧಾಪುರದ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.