AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಂಗಭದ್ರಾ ಡ್ಯಾಂನಿಂದ ಹೆಚ್ಚುವರಿ ನೀರು ಬಿಡುಗಡೆ; ನದಿ ಪಾತ್ರದಲ್ಲಿದ್ದ ಪುರಂದರ ದಾಸರ ಮಂಟಪ, ಸ್ನಾನಘಟ್ಟ ಮುಳುಗಡೆ

ತುಂಗಾಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ರಾಮ, ಲಕ್ಷ್ಮಣ, ಯಂತ್ರೋಧ್ಧರ ದೇವಸ್ಥಾನಕ್ಕೆ ಸಂಪರ್ಕ ಕಡಿತವಾಗಿದೆ. ಹೀಗಾಗಿ, ನದಿ ಬಳಿ ತೆರಳದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ.

ತುಂಗಭದ್ರಾ ಡ್ಯಾಂನಿಂದ ಹೆಚ್ಚುವರಿ ನೀರು ಬಿಡುಗಡೆ; ನದಿ ಪಾತ್ರದಲ್ಲಿದ್ದ ಪುರಂದರ ದಾಸರ ಮಂಟಪ, ಸ್ನಾನಘಟ್ಟ ಮುಳುಗಡೆ
ನದಿ ಪಾತ್ರದಲ್ಲಿದ್ದ ಪುರಂದರ ದಾಸರ ಮಂಟಪ, ಸ್ನಾನಘಟ್ಟ ಮುಳುಗಡೆ
TV9 Web
| Edited By: |

Updated on:Jul 26, 2021 | 11:24 AM

Share

ಬಳ್ಳಾರಿ: ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಬೆಳಗಾವಿ, ಗದಗ, ಉತ್ತರ ಕನ್ನಡ, ಬಳ್ಳಾರಿ ಭಾಗದಲ್ಲಿ ಧಾರಾಕಾರ ಮಳೆಗೆ ಪ್ರವಾಹ ಭೀತಿ ಎದುರಾಗಿದೆ. ಹೀಗಿರುವಾಗಲೇ ಬಳ್ಳಾರಿ ಭಾಗದಲ್ಲಿನ ತುಂಗಭದ್ರಾ ಡ್ಯಾಂನಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ನದಿ ಪಾತ್ರದಲ್ಲಿದ್ದ ಹಂಪಿಯ ಪುರಂದರದಾಸರ ಮಂಟಪ ಮತ್ತು ಸ್ನಾನಘಟ್ಟ ಮುಳುಗಡೆಯಾಗಿದೆ.

ತುಂಗಾಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ರಾಮ, ಲಕ್ಷ್ಮಣ, ಯಂತ್ರೋಧ್ಧರ ದೇವಸ್ಥಾನಕ್ಕೆ ಸಂಪರ್ಕ ಕಡಿತವಾಗಿದೆ. ಹೀಗಾಗಿ, ನದಿ ಬಳಿ ತೆರಳದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ.

ದಾವಣಗೆರೆ: ನಿರಂತರ ಮಳೆಯಿಂದ ಸಾಂಬಾರ್‌ ಸೌತೆಕಾಯಿ ಬೆಳೆ ನಾಶ ಮೂರು ದಿನ ಸುರಿದ ನಿರಂತರ ಮಳೆಗೆ ಬೆಳೆ ನೆಲಕಚ್ಚಿದೆ. ಅಷ್ಟೇ ಅಲ್ಲ ದಾವಣಗೆರೆ ತಾಲೂಕಿನ ಮಂಡಲೂರು ಗ್ರಾಮದಲ್ಲಿ ಜಮೀನಿನಲ್ಲಿಯೇ ಸಾಂಬರ್ ಸೌತೆಕಾಯಿ ಕೊಳೆತು ಹೋಗಿದೆ. ಮಹಾಂತೇಶ ಎಂಬ ರೈತರಿಗೆ ಸೇರಿದ ಮೂರು ಎಕರೆ ಪ್ರದೇಶದಲ್ಲಿನ ಸಾಂಬರ್ ಸೌತೆಕಾಯಿ ಕೊಳೆತು ಹೋಗಿದೆ. ಇನ್ನೇನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ, ಶುರುವಾದ ಮಳೆಯಿಂದ ಒಂದು ಲಕ್ಷಕ್ಕೂ ಅಧಿಕ ಹಣ ವೆಚ್ಚಮಾಡಿ ಬೆಳೆದಿದ್ದ ಬೆಳೆ ನಾಶವಾಗಿದೆ.

crop loss

ನಿರಂತರ ಮಳೆಯಿಂದ ಸಾಂಬಾರ್‌ ಸೌತೆಕಾಯಿ ಬೆಳೆ ನಾಶ

ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ; ರೈತನ ಮನೆಗೆ ಬಂದ ಮೊಸಳೆ ಮರಿ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನಲೆಯಲ್ಲಿ, ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದ ರೈತನ ಮನೆಗೆ ಮೊಸಳೆ ಮರಿ ಬಂದಿದೆ. ಸಾಸ್ವೆಹಳ್ಳಿಯ ತುಂಗಭದ್ರಾ ನದಿ ತಟದಲ್ಲಿ ರೈತನ ಮನೆಯಿದ್ದು, ಈ ವೇಳೆ ನದಿಯ ನೀರು ಹೆಚ್ಚಾದ ಹಿನ್ನಲೆ ಮೊಸಳೆ ಮರಿ ರೈತನ ಮನೆ ಹತ್ತಿರ ಬಂದಿದೆ. ಸದ್ಯ ಮೊಸಳೆ ಮರಿಯನ್ನು ರಕ್ಷಿಸಿದ ಗ್ರಾಮಸ್ಥರು, ಮಾವೀನ ಕೋಟೆ ಅರಣ್ಯ ಇಲಾಖೆ ಅಧಿಕಾರಿ ಸಿದ್ದೇಶ್ ಅವರಿಗೆ ಒಪ್ಪಿಸಿದ್ದಾರೆ.

Crocodile

ರೈತನ ಮನೆಗೆ ಬಂದ ಮೊಸಳೆ ಮರಿ

ಮೂರು ಭಾಗವಾಗಿ ಉರುಳಿ ಬಿದ್ದ ಆಲದ ಮರ ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣ ಗೋಕರ್ಣೇಶ್ವರ ದೇವಸ್ಥಾನದ ಎದುರು ಇದ್ದಕ್ಕಿದ್ದಂತೆ ಮೂರು ಭಾಗವಾಗಿ ಆಲದ ಮರ ಉರುಳಿ ಬಿದ್ದಿದೆ. ಕಟ್ಟೆಯ ನಾಗದೇವರಿಗೆ ಹಾನಿಯಾಗಿದ್ದು, ನಿತ್ಯ ಈ ಭಾಗದಲ್ಲಿ ನೂರಾರು ಜನರು ಓಡಾಡುತಿದ್ದರು. ಸದ್ಯ ಭಾರೀ ಅನಾಹುತ ತಪ್ಪಿದಂತಾಗಿದೆ. 50 ಮೀಟರ್ ನಷ್ಟು ದೂರ ಮರ ಬಿದ್ದರು ಯಾವುದೇ ಹಾನಿ ಸಂಬವಿಸಿಲ್ಲ ಎನ್ನುವುದು ಗ್ರಾಮಸ್ಥರಿಗೆ ಸಮಾಧಾನ ತಂದಿದೆ.

ರಾಯಚೂರು: ಗರ್ಭಿಣಿ ಬಾಣಂತಿಯರ ರಕ್ಷಣೆಗೆ ಹರಸಾಹಸ ಬಸವ ಸಾಗರ ಜಲಾಶಯದಿಂದ ಕೃಷ್ಣ ನದಿಗೆ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ, ನದಿ ದಂಡೆ ಗ್ರಾಮಗಳಲ್ಲೂ ಗರ್ಭಿಣಿ, ಬಾಣಂತಿಯರ ರಕ್ಷಣೆಗೆ ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಲಿಂಗಸಗೂರ ತಾಲೂಕಿನ ಯರಡೋಣಿ ಗ್ರಾಮದ ಇಬ್ಬರು ಗರ್ಭಿಣಿಯರನ್ನು ಕುಟುಂದವರ ಮನವೊಲಿಸಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.

ಶೀಲಹಳ್ಳಿ ಸೇತುವೆ ಮುಳುಗಡೆ ಹಿನ್ನೆಲೆ ಹಲವು ಹಳ್ಳಿಗಳ ಸಂಪರ್ಕ ಕಡಿತವಾಗಿತ್ತು. ಅಲ್ಲದೆ ಯರೆಡೋಣಿ ಗ್ರಾಮದ ಬಳಿಯ ಸೇತುವೆಯು ಮುಳುಗುವ ಹಂತಕ್ಕೆ ತಲುಪಿದೆ. ಈ ನಿಟ್ಟಿನಲ್ಲಿ ಸೇತುವೆ ಮುಳುಗಡೆಯಾದರೆ 6 ಹಳ್ಳಿಗಳ ಸಂಪರ್ಕ‌ ಸಂಪೂರ್ಣ ಕಡಿತವಾಗಲಿದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಿದ್ದು, ಯರಡೋಣಿ ಸೇರಿ ಆರು ಹಳ್ಳಿಗಳಲ್ಲಿನ ಗರ್ಭಿಣಿಯರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: ಕಾರವಾರ: ಮಳೆಗೆ ಮನೆ ಕುಸಿತ; ನೆಲಸಮ‌ವಾದ ಸೂರು ನೋಡಿ ಭಾವುಕರಾದ ದಂಪತಿ

ಮಳೆ ಅಬ್ಬರ ತಗ್ಗಿದರೂ ಬೆಳಗಾವಿಯಲ್ಲಿ ನಿಲ್ಲದ ಭೀತಿ; ಬೆಳೆ ಹಾನಿಗೆ ಪರಿಹಾರ ನೀಡುವಂತೆ ರೈತರ ಆಗ್ರಹ

Published On - 9:04 am, Mon, 26 July 21

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು