Auto Rickshaw Insurance: ಚುನಾವಣೆ ಕಾಲ, ನಾನಾ ಐಡಿಯಾಗಳು! ಹೆಂಗಸರಿಗೆ ಇಳಕಲ್ ಸೀರೆ, ಆಟೋ ಚಾಲಕರಿಗೆ ವಿಮೆ ಮಾಡಿಸ್ತಿದ್ದಾರೆ! ಎಲ್ಲಿ?

Janardhan Reddy KRPP: ಬಳ್ಳಾರಿಯಲ್ಲಿ ಎಲ್ಲ ಆಟೋ ಚಾಲಕರು ಇದೀಗ ಕೆಆರ್​ಪಿಪಿ ಪಕ್ಷದ ವಿಮೆ ಸೌಲಭ್ಯಕ್ಕಾಗಿ ಮುಗಿಬಿದ್ದು ಪಾಲಸಿಗಳನ್ನ ಮಾಡಿಸುತ್ತಿದ್ದಾರೆ. ಪ್ರತಿಫಲವಾಗಿ ಆಟೋಗಳಿಗೆ ಕೆಆರ್ ಪಿಪಿ ಪಕ್ಷದ ಪೊಸ್ಟರ್ ಅಂಟಿಸಿಕೊಂಡು ಪ್ರಚಾರ ನಡೆಸಲು ಸಜ್ಜಾಗಿದ್ದಾರೆ.

Auto Rickshaw Insurance: ಚುನಾವಣೆ ಕಾಲ, ನಾನಾ ಐಡಿಯಾಗಳು! ಹೆಂಗಸರಿಗೆ ಇಳಕಲ್ ಸೀರೆ, ಆಟೋ ಚಾಲಕರಿಗೆ ವಿಮೆ ಮಾಡಿಸ್ತಿದ್ದಾರೆ! ಎಲ್ಲಿ?
ಹೆಂಗಸರಿಗೆ ಇಳಕಲ್ ಸೀರೆ, ಆಟೋ ಚಾಲಕರಿಗೆ ವಿಮೆ ಮಾಡಿಸ್ತಿದ್ದಾರೆ!
Follow us
ಸಾಧು ಶ್ರೀನಾಥ್​
| Updated By: Digi Tech Desk

Updated on:Mar 09, 2023 | 10:24 AM

ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ದಿನಗಣನೆ ಶುರುವಾಗಿದೆ. ರಾಜಕೀಯ ನಾಯಕರು ಮತದಾರರನ್ನ ಸೆಳೆಯಲು ಇನ್ನಿಲ್ಲದ ಆಮಿಷವೊಡುತ್ತಿದ್ದಾರೆ. ಅದ್ರಲ್ಲೂ ಗಣಿನಾಡು ಬಳ್ಳಾರಿಯಲ್ಲಿ ಈ ಬಾರಿ ಭರ್ಜರಿಯಾಗಿ ಗಿಫ್ಟ್ ಹಂಚಿಕೆ ಮಾಡಲಾಗ್ತಿದೆ. ಒಬ್ಬರು ಕುಕ್ಕರ್ ವಿತರಣೆ ಮಾಡಿದರೆ ಮತೊಬ್ಬರು ಪಟ್ಟಾ ವಿತರಣೆ ಮಾಡ್ತಿದ್ದಾರೆ. ಇದರ ಮಧ್ಯೆ ಜನಾರ್ದನ ರೆಡ್ಡಿ ಅಧಿಪತ್ಯದ (Janardhan Reddy KRPP) ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್​ಪಿಪಿ) ದಿಂದ ಮಹಿಳೆಯರಿಗೆ ಸೀರೆ. ಆಟೋ ಚಾಲಕರಿಗೆ ವಿಮಾ ಭಾಗ್ಯ ಕಲ್ಪಿಸುತ್ತಿರುವುದು ರಾಜಕೀಯ ರಂಗು ಹೆಚ್ಚುವಂತೆ ಮಾಡಿದೆ. ಬಳ್ಳಾರಿಯಲ್ಲಿ ಕಾಂಗ್ರೆಸ್​ ಟಿಕೆಟ್ ಆಕ್ಷಾಂಕಿ ಕುಕ್ಕರ್ ಕೊಟ್ಟಿದ್ದಾಯ್ತು.. ಬಿಜೆಪಿಯವರು ಮನೆ ಮನೆಗಳಿಗೆ ಪಟ್ಟಾ ಹಂಚಿದ್ದಾಯ್ತು.. ಮಹಿಳೆಯರಿಗೆ ಸೀರೆ.. ಆಟೋ ಚಾಲಕರಿಗೆ (Auto Rickshaw) ವಿಮಾ ಭಾಗ್ಯ (Insurance) ಕರುಣೆ.. ಯೆಸ್. ಗಣಿ ನಾಡು ಬಳ್ಳಾರಿಯಲ್ಲೀಗ ಗಿಫ್ಟ್ ಪೊಲಿಟಿಕ್ಸ್ ಶುರುವಾಗಿದೆ. ಕುಕ್ಕರ್, ಪಟ್ಟಾ, ಸೀರೆ… ಇನ್ಸೂರೆನ್ಸ್ ಪಾಲಸಿಗಳನ್ನ ವಿತರಣೆ ಮಾಡಿ ಮತದಾರರ ಮನಸ್ಸು ಗೆಲ್ಲಲು ರಣತಂತ್ರ ಮಾಡ್ತಿದ್ದಾರೆ.

ಗುಂಪು ಗುಂಪಾಗಿ ಸೇರಿರೋ ಆಟೋ ಚಾಲಕರು.. ಸಾಲು ಸಾಲಾಗಿ ನಿಂತು ರಿಜಿಸ್ಟರ್ ಮಾಡಿಸುತ್ತಿರುವ ಚಾಲಕರು, ಆಟೋಗಳಿಗೆ ಪೊಸ್ಟರ್ ಹಚ್ಚಿ ಪ್ರಚಾರ ಮಾಡ್ತಿರೋ ನಾಯಕರು.. ಯೆಸ್. ರಾಜ್ಯ ರಾಜಕಾರಣದಲ್ಲಿ ಹೊಸ ಬಿರುಗಾಳಿ ಎಬ್ಬಿಸಿರುವ ಗಾಲಿ ಜನಾರ್ದನ ರೆಡ್ಡಿ ನೇತೃತ್ವದ ಕೆಆರ್​ಪಿಪಿ ಪಕ್ಷ ಇದೀಗ ಮತದಾರರನ್ನ ಸೆಳೆಯಲು ಹೊಸ ತಂತ್ರಕ್ಕೆ ಮುಂದಾಗಿದೆ. ಬಳ್ಳಾರಿ ನಗರದಲ್ಲಿನ ಮಹಿಳಾ ಮತದಾರರನ್ನ ಸೆಳೆಯಲು ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣಾ ಮಹಿಳೆಯರಿಗೆ ಉಡಿ ತುಂಬಿ ಸೀರೆ ಹಂಚಿಕೆ ಮಾಡಿದ ಬೆನ್ನಲ್ಲೆ ಮತ್ತೊಂದು ರೀತಿ ಮತದಾರರನ್ನ ಸೆಳೆಯಲು ಮುಂದಾಗಿದ್ದಾರೆ. ನಗರದಲ್ಲಿರುವ 8 ಸಾವಿರ ಆಟೋಗಳಿಗೆ ಇನ್ಸೂರೆನ್ಸ್ ಪಾಲಿಸಿ ಮಾಡಿಸಿ ಆಟೋ ಚಾಲಕರ ಮೂಲಕ ಪ್ರಚಾರ ಕೈಗೊಳ್ಳುವ ಮೂಲಕ ಮತದಾರರ ಮನಸ್ಸು ಗೆಲ್ಲಲು ಮುಂದಾಗಿದ್ದಾರೆ.

ಬಳ್ಳಾರಿ ನಗರದ ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿ ಭರತರೆಡ್ಡಿ ಮನೆ ಮನೆಗಳಿಗೆ ಈಗಾಗಲೇ ಕುಕ್ಕರ್ ಹಂಚಿಕೆ ಮಾಡಿದ್ದಾರೆ. ನಗರದಲ್ಲಿನ ಸ್ಲಂ ಮತದಾರರನ್ನ ಸೆಳೆಯಲು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಸ್ಲಂ ನಿವಾಸಿಗಳಿಗೆ ಪಟ್ಟಾ ವಿತರಣೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್​-ಬಿಜೆಪಿ ಗಿಫ್ಟ್ ಪಾಲಿಟಿಕ್ಸ್ ಶುರು ಮಾಡಿದ ಬೆನ್ನಲ್ಲೆ ಕೆಆರ್ ಪಿಪಿ ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣಾ ಸಹ ಮತದಾರರನ್ನ ಪಕ್ಷದತ್ತ ಸೆಳೆಯಲು ಪಕ್ಷದಿಂದ ವಿನೂತನವಾಗಿ ಗಿಫ್ಟ್ ಹಂಚಿಕೆ ಮಾಡ್ತಿದ್ದಾರೆ.

ನಗರದಲ್ಲಿರುವ 1 ಲಕ್ಷಕ್ಕೂ ಅಧಿಕ ಮಹಿಳಾ ಮತದಾರರಿಗೆ ಇಳಕಲ್ ಸೀರೆ ವಿತರಣೆ ಮಾಡ್ತಿದ್ದು. ಇದೀಗ ಹೊಸದಾಗಿ 8 ಸಾವಿರ ಆಟೋಗಳಿಗೆ ಇನ್ಸೂರೆನ್ಸ್ ಭಾಗ್ಯ ಕಲ್ಪಿಸುತ್ತಿದ್ದಾರೆ. ಪ್ರತಿ ಆಟೋಗಳಿಗೆ 6 ಸಾವಿರ ರೂಪಾಯಿಯ ಪ್ರೀಮಿಯಂ ಕಟ್ಟಿ ಎಲ್ಲ ಆಟೋಗಳಿಗೆ ವಿಮೆ ಮಾಡಿಸುತ್ತಿದ್ದಾರೆ.

ಇದ್ರಿಂದ ಆಟೋ ಚಾಲಕರಿಗೆ ಎನಾದರೂ ಅನಾಹುತವಾದ್ರೆ ಆಟೋ ಚಾಲಕರ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಪರಿಹಾರ ದೊರೆಯಲಿದೆ. ಹೀಗಾಗಿ ನಗರದಲ್ಲಿನ ಎಲ್ಲ ಆಟೋ ಚಾಲಕರು ಇದೀಗ ಕೆಆರ್ ಪಿಪಿ ಪಕ್ಷದ ವಿಮೆ ಸೌಲಭ್ಯಕ್ಕಾಗಿ ಮುಗಿಬಿದ್ದು ಇನ್ಸೂರೆನ್ಸ್ ಪಾಲಸಿಗಳನ್ನ ಮಾಡಿಸುತ್ತಿದ್ದಾರೆ. ಪ್ರತಿಫಲವಾಗಿ ಆಟೋಗಳಿಗೆ ಕೆಆರ್ ಪಿಪಿ ಪಕ್ಷದ ಪೊಸ್ಟರ್ ಅಂಟಿಸಿಕೊಂಡು ಪ್ರಚಾರ ನಡೆಸಲು ಸಜ್ಜಾಗಿದ್ದಾರೆ.

ಬಳ್ಳಾರಿಯಲ್ಲಿ ಯಾವುದೇ ಚುನಾವಣೆ ನಡೆದರೂ ಇದೂವರೆಗೂ ಭರ್ಜರಿಯಾಗಿ ಹಣ ಹಂಚಿಕೆ ಮಾಡ್ತಿದ್ರು. ಆದ್ರೆ ಈ ಬಾರಿ ವಿಧಾನಸಭೆಯ ಚುನಾವಣೆಗೂ ಮುನ್ನವೇ ಎಲ್ಲ ಪಕ್ಷಗಳ ನಾಯಕರು ಮತದಾರರನ್ನ ಸೆಳೆಯಲು ಗಿಫ್ಟ್​​ ಹಂಚಿಕೆ ಮಾಡುತ್ತಿದ್ದಾರೆ. ಅದ್ರಲ್ಲೂ ಕೆಆರ್ ಪಿಪಿ ಪಕ್ಷದ ಸೀರೆ, ಆಟೋಗಳಿಗೆ ವಿಮೆ ಸೌಲಭ್ಯ ಇದೀಗ ನಗರದಲ್ಲಿ ಸಾಕಷ್ಟು ಸದ್ದು ಮಾಡ್ತಿರೋದು ಮಾತ್ರ ಸುಳ್ಳಲ್ಲವಾಗಿದೆ. ಆದ್ರೆ ಮುಂದಿನ ದಿನಗಳಲ್ಲಿ ಮತದಾರರಿಗೆ ಇನ್ನೂ ಅದ್ಯಾವ್ ಗಿಫ್ಟ್​ ದೊರೆಯುತ್ತೋ.. ಮತದಾರರು ಯಾರಿಗೆ ಮತ ಹಾಕಿ ಗೆಲ್ಲಿಸ್ತಾರೋ ಅನ್ನೋದು ಮಾತ್ರ ಕುತೂಹಲ ಮೂಡಿಸಿದೆ.

ವರದಿ: ವೀರೇಶ್ ದಾನಿ, ಟಿವಿ9, ಬಳ್ಳಾರಿ 

Published On - 8:27 am, Thu, 9 March 23

ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್