ಬಳ್ಳಾರಿ: ಮದುವೆ ದಿಬ್ಬಣದ ಲಾರಿ ಪಲ್ಟಿ; ಇಬ್ಬರು ಸ್ಥಳದಲ್ಲೇ ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ

ಪ್ರತ್ಯೇಕ ಘಟನೆ: ಬಳ್ಳಾರಿ ಜಿಲ್ಲೆಯ ಕುರುಗೋಡು(Kurugodu) ತಾಲೂಕಿನ ಏಳುಬೆಂಚಿ ಗ್ರಾಮದಲ್ಲಿ ಮದುವೆ ದಿಬ್ಬಣದ ಲಾರಿ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇತ್ತ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆ ನಡೆದಿದೆ.

ಬಳ್ಳಾರಿ: ಮದುವೆ ದಿಬ್ಬಣದ ಲಾರಿ ಪಲ್ಟಿ; ಇಬ್ಬರು ಸ್ಥಳದಲ್ಲೇ ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ
ಬಳ್ಳಾರಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Apr 28, 2024 | 8:04 PM

ಬಳ್ಳಾರಿ, ಏ.28: ಮದುವೆ ದಿಬ್ಬಣದ ಲಾರಿ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು(Kurugodu) ತಾಲೂಕಿನ ಏಳುಬೆಂಚಿ ಗ್ರಾಮದಲ್ಲಿ ನಡೆದಿದೆ. ಭಾಗ್ಯಮ್ಮ(44) ಮತ್ತು ಮಾರೆಮ್ಮ(45) ಮೃತ ರ್ದುದೈವಿಗಳು. ಇನ್ನು 50ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಬಳ್ಳಾರಿಯ ಟ್ರಾಮಾಕೇರ್ ಸೆಂಟರ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಕುಡುತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸ್ಥಳದಲ್ಲೇ ಸಾವು

ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆ ನಡೆದಿದೆ. ಇಂದು ಗ್ರಾಮದ ಆರಾಧ್ಯ ದೈವ ಶ್ರೀ ಸಿದ್ದಲಿಂಗ ಮಹಾರಾಜರ ಕಮರಿಮಠದ ಜಾತ್ರೆಯಲ್ಲಿ ರಥೋತ್ಸವದ ವೇಳೆ ದುರ್ಘಟನೆ ನಡೆದಿದೆ. ಜಾತ್ರೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದು, ಜಾತ್ರೆಯಲ್ಲಿನ ನೂಕು ನುಗ್ಗಲಿನಲ್ಲಿ ರಥದ ಚಕ್ರಕ್ಕೆ ಸಿಲುಕಿದ್ದಾರೆ. ಇನ್ನು ತೀವ್ರವಾಗಿ ಗಾಯಗೊಂಡ ಓರ್ವ ವ್ಯಕ್ತಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮೃತಪಟ್ಟವರ ಹಾಗೂ ಗಾಯಾಳು ಹೆಸರು, ವಿಳಾಸ ಇನ್ನೂ ತಿಳಿದು ಬಂದಿಲ್ಲ. ಘಟನಾ ಸ್ಥಳದಲ್ಲೇ ಪೊಲೀಸರು ಬೀಡು ಬಿಟ್ಟಿದ್ದಾರೆ.

ಇದನ್ನೂ ಓದಿ:ನೀವು ಧರಿಸುವ ಬಟ್ಟೆಯ ಬಣ್ಣ ರಸ್ತೆ ಅಪಘಾತಕ್ಕೆ ಕಾರಣವಾಗಬಹುದು; ವಿಡಿಯೋ ಇಲ್ಲಿದೆ ನೋಡಿ

ಬಾರ್ ಕ್ಯಾಶಿಯರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಕೋಲಾರ: ಬಾರ್ ಕ್ಯಾಶಿಯರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಕೋಲಾರ ನಗರದ ಬಂಗಾರಪೇಟೆ ವೃತ್ತದಲ್ಲಿನ ಸಾಮ್ರಾಟ್ ಅಶೋಕ ಬಾರ್​​ನಲ್ಲಿ‌ ನಡೆದಿದೆ. ಕ್ಯಾಶಿಯರ್ ಶೇಷಗಿರಿ, ಶಣ್ಮುಖ ಎಂಬುವರ ಮೇಲೆ ಹಲ್ಲೆ ಮಾಡಲಾಗಿದೆ. ಕುಡಿದ ಗಲಾಟೆ ಮಾಡುತ್ತಿದ್ದವರನ್ನು ಪ್ರಶ್ನೆ ಮಾಡಿದ್ದಕ್ಕೆ ಮೂರು ಜನರ ಗುಂಪಿನಿಂದ ಈ ಕೃತ್ಯ ಎಸಗಿದ್ದಾರೆ. ಗಾಯಾಳುಗಳನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:59 pm, Sun, 28 April 24

ತಾಜಾ ಸುದ್ದಿ
ವಿದ್ಯುತ್ ದೀಪದ ಬೆಳಕಲ್ಲಿ ಕಣ್ಮನ ಸೆಳೆದ ತುಂಗಭದ್ರಾ ಜಲಾಶಯ, ವಿಡಿಯೋ
ವಿದ್ಯುತ್ ದೀಪದ ಬೆಳಕಲ್ಲಿ ಕಣ್ಮನ ಸೆಳೆದ ತುಂಗಭದ್ರಾ ಜಲಾಶಯ, ವಿಡಿಯೋ
ಪ್ರಶ್ನೆಗಳಿಗೆ ಉತ್ತರಿಸುವ ಬದಲು ಸಿಎಂ ಹೇಡಿಯಂತೆ ಓಡಿಹೋಗಿದ್ದಾರೆ: ಅಶೋಕ
ಪ್ರಶ್ನೆಗಳಿಗೆ ಉತ್ತರಿಸುವ ಬದಲು ಸಿಎಂ ಹೇಡಿಯಂತೆ ಓಡಿಹೋಗಿದ್ದಾರೆ: ಅಶೋಕ
ಮುಡಾ ಹಗರಣ: ನ್ಯಾಯ ಕೇಳಲು ರಾಜ್ಯಪಾಲರಲ್ಲಿಗೆ ಹೋದ ವಿರೋಧ ಪಕ್ಷಗಳ ಶಾಸಕರು
ಮುಡಾ ಹಗರಣ: ನ್ಯಾಯ ಕೇಳಲು ರಾಜ್ಯಪಾಲರಲ್ಲಿಗೆ ಹೋದ ವಿರೋಧ ಪಕ್ಷಗಳ ಶಾಸಕರು
ಶಿರೂರು ಗುಡ್ಡ ಕುಸಿತ: ನದಿಯಲ್ಲಿ ತೇಲಿಬಂತು ಟ್ರಕ್​ನಲ್ಲಿದ್ದ ಮರದ ತುಂಡು
ಶಿರೂರು ಗುಡ್ಡ ಕುಸಿತ: ನದಿಯಲ್ಲಿ ತೇಲಿಬಂತು ಟ್ರಕ್​ನಲ್ಲಿದ್ದ ಮರದ ತುಂಡು
ಬಿಜೆಪಿ ನಾಯಕರಿಂದ ಹೂವು ನೀಡಿ ಮನವೊಲಿಸುವ ಪ್ರಯತ್ನಕ್ಕೂ ಮಣಿಯದ ಸ್ಪೀಕರ್
ಬಿಜೆಪಿ ನಾಯಕರಿಂದ ಹೂವು ನೀಡಿ ಮನವೊಲಿಸುವ ಪ್ರಯತ್ನಕ್ಕೂ ಮಣಿಯದ ಸ್ಪೀಕರ್
ಅರ್ಜುನ್ ಮತ್ತಿಬ್ಬರ ಶೋಧ ಜಾರಿ, ಡ್ರೋನ್ ಮತ್ತು ಕೋಸ್ಟ್ ಗಾರ್ಡ್ ಚಾಪರ್ ಬಳಕೆ
ಅರ್ಜುನ್ ಮತ್ತಿಬ್ಬರ ಶೋಧ ಜಾರಿ, ಡ್ರೋನ್ ಮತ್ತು ಕೋಸ್ಟ್ ಗಾರ್ಡ್ ಚಾಪರ್ ಬಳಕೆ
ಮೃತ ಮಾಲೀಕನಿಗಾಗಿ ಹುಡುಕಾಡುತ್ತಿರುವ ಸಾಕು ನಾಯಿ, ಮನಕಲಕುವ ದೃಶ್ಯ ಇಲ್ಲಿದೆ
ಮೃತ ಮಾಲೀಕನಿಗಾಗಿ ಹುಡುಕಾಡುತ್ತಿರುವ ಸಾಕು ನಾಯಿ, ಮನಕಲಕುವ ದೃಶ್ಯ ಇಲ್ಲಿದೆ
13 ವರ್ಷದ ಹಿಂದೆ ಜೈಲಿನಲ್ಲಿದ್ದಾಗ ದರ್ಶನ್ ಹೇಗಿದ್ದರು: ಜೈಲಧಿಕಾರಿ ನೆನಪು
13 ವರ್ಷದ ಹಿಂದೆ ಜೈಲಿನಲ್ಲಿದ್ದಾಗ ದರ್ಶನ್ ಹೇಗಿದ್ದರು: ಜೈಲಧಿಕಾರಿ ನೆನಪು
ವಾತಾವರಣ ಅನುಕೂಲಕರವಾಗಿದೆ, ಬಿಜೆಪಿ ಸದಸ್ಯರು ಪಾದಯಾತ್ರೆ ಮಾಡಲಿ: ಖರ್ಗೆ
ವಾತಾವರಣ ಅನುಕೂಲಕರವಾಗಿದೆ, ಬಿಜೆಪಿ ಸದಸ್ಯರು ಪಾದಯಾತ್ರೆ ಮಾಡಲಿ: ಖರ್ಗೆ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಜನರ ಹುಚ್ಚಾಟ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಜನರ ಹುಚ್ಚಾಟ