ಕೊಟ್ಟೂರು ಮಠದ ಡಾ. ಸಂಗನ ಬಸವ ಮಹಾಸ್ವಾಮಿ, ಹಾಲಕೆರೆ ಅನ್ನದಾನೇಶ್ವರ ಮಠದ ಡಾ. ಅಭಿನವ ಸ್ವಾಮೀಜಿ ಲಿಂಗೈಕ್ಯ

ಉತ್ತರ ಕರ್ನಾಟಕದ ಹಿರಿಯ ವೀರಶೈವ ಲಿಂಗಾಯತ ಜಗದ್ಗುರುಗಳಾಗಿದ್ದ ಡಾ.ಸಂಗನ ಬಸವ ಮಹಾಸ್ವಾಮಿ ಅನಾರೋಗ್ಯದ ಹಿನ್ನೆಲೆ ಬೆಂಗಳೂರಿನ‌ ಅಪೋಲೊ ಅಸ್ಪತ್ರೆಯಲ್ಲಿ ದಾಖಲಾಗಿದ್ರು. ಆದ್ರೆ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ 5.30 ಕ್ಕೆ ಲಿಂಗೈಕ್ಯರಾಗಿದ್ದಾರೆ.

ಕೊಟ್ಟೂರು ಮಠದ ಡಾ. ಸಂಗನ ಬಸವ ಮಹಾಸ್ವಾಮಿ, ಹಾಲಕೆರೆ ಅನ್ನದಾನೇಶ್ವರ ಮಠದ ಡಾ. ಅಭಿನವ ಸ್ವಾಮೀಜಿ ಲಿಂಗೈಕ್ಯ
ಕೊಟ್ಟೂರು ಮಠದ ಜಗದ್ಗುರು ಡಾ. ಸಂಗನ ಬಸವ ಮಹಾಸ್ವಾಮಿ, ಹಾಲಕೆರೆಯ ಅನ್ನದಾನೇಶ್ವರ ಮಠದ ಡಾ. ಅಭಿನವ ಅನ್ನದಾನ ಸ್ವಾಮೀಜಿ ಲಿಂಗೈಕ್ಯ

ಬಳ್ಳಾರಿ: ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಕೊಟ್ಟೂರು ಮಠ ಸಂಸ್ಥಾನದ ಜಗದ್ಗುರು ಡಾ.ಸಂಗನ ಬಸವ ಮಹಾಸ್ವಾಮಿ(87) ಲಿಂಗೈಕ್ಯರಾಗಿದ್ದಾರೆ. ಅಲ್ಲದೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಹಾಲಕೆರೆಯ ಅನ್ನದಾನೇಶ್ವರ ಸಂಸ್ಥಾನ ಮಠದ ಡಾ.ಅಭಿನವ ಅನ್ನದಾನ ಸ್ವಾಮೀಜಿ(85) ಕೂಡ ಲಿಂಗೈಕ್ಯರಾಗಿದ್ದಾರೆ.

ಉತ್ತರ ಕರ್ನಾಟಕದ ಹಿರಿಯ ವೀರಶೈವ ಲಿಂಗಾಯತ ಜಗದ್ಗುರುಗಳಾಗಿದ್ದ ಡಾ.ಸಂಗನ ಬಸವ ಮಹಾಸ್ವಾಮಿ ಅನಾರೋಗ್ಯದ ಹಿನ್ನೆಲೆ ಬೆಂಗಳೂರಿನ‌ ಅಪೋಲೊ ಅಸ್ಪತ್ರೆಯಲ್ಲಿ ದಾಖಲಾಗಿದ್ರು. ಆದ್ರೆ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ 5.30 ಕ್ಕೆ ಲಿಂಗೈಕ್ಯರಾಗಿದ್ದಾರೆ.

ಶಿಕ್ಷಣ ಸಂಸ್ಥೆಗಳ ಮೂಲಕ ತ್ರಿವಿಧ ದಾಸೋಹಿಯಾಗಿದ್ದ ಡಾ.ಸಂಗನ ಬಸವ ಮಹಾಸ್ವಾಮಿ 2004ರಿಂದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಶಿವಯೋಗಮಂದಿರದ ಅಧ್ಯಕ್ಷರಾಗಿದ್ರು. ಬಸವಾದಿ ಶರಣರ ವಚನಗಳನ್ನ ನಾಡಿನಾದ್ಯಂತ ಪಸರಿಸುವ ಕಾಯಕದಲ್ಲಿ ನಿರತರಾಗಿದ್ದರು. ಹೊಸಪೇಟೆ ,ಬಳ್ಳಾರಿ, ಗದಗ ಬಾಗಲಕೋಟೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನ ಕಟ್ಟಿ ಬಡವರಿಗೆ ಅನ್ನ ಅಕ್ಷರ ದಾಸೋಹ ನೀಡುತ್ತಿದ್ದರು. ಬಸವ ತತ್ವದ ಮೂಲ ದೀನದಲಿತರ ಕಲ್ಯಾಣಕ್ಕೆ ಶ್ರಮಿಸಿದ್ದ ಶ್ರೀಗಳು ಕಾವಿಧಾರಿಯಾಗಿ ಮಠಕ್ಕೆ ಸೀಮಿತವಾಗಿರದೆ ಜನಪರ ವಿಚಾರಧಾರೆಗಳನ್ನು ಹೊಂದಿದ್ದರು. ಭಕ್ತರ ಅಪೇಕ್ಷೆಯಂತೆ ಇಳಕಲ್ ಗಡದ ಹಾಲಕೆರೆ ಮಠದಲ್ಲಿ ವೀರಶೈವ ಲಿಂಗಾಯತ ಧರ್ಮದ ವಿಧಿವಿಧಾನದಂತೆ ಇಂದು ಶ್ರೀಗಳ ಅಂತ್ಯಕ್ರಿಯೆ ಕಾರ್ಯ ನಡೆಯಲಿದೆ.

ಶಿವಯೋಗಮಂದಿರ ಸ್ವಾಮೀಜಿಗಳ ತರಭೇತಿ ಕೇಂದ್ರ. ನಾಡಿಗೆ ಮಹಾನ್ ಸ್ವಾಮೀಜಿಗಳ ಕೊಟ್ಟ ಕೇಂದ್ರ. ಸಂಗನ ಬಸವ ಸ್ವಾಮೀಜಿ ಅವರ ಅವಧಿಯಲ್ಲೇ ಶಿವಯೋಗಮಂದಿರ ಶತಮಾನೋತ್ಸವ ಆಚರಿಸಿದೆ. ಸದ್ಯ ಶಿವಯೋಗಮಂದಿರಲ್ಲಿ 50 ಜನ ವಟುಗಳಿಗೆ ತರಭೇತಿ ನಡೆಯುತ್ತಿದೆ. ಸ್ವಾಮೀಜಿ ಪ್ರತ್ಯೇಕ ಲಿಂಗಾಯತ ಹೋರಾಟ ವಿರೋಧಿಸಿದ್ದರು. ಲಿಂಗಾಯತ ಪ್ರತ್ಯೇಕ ಹೋರಾಟಕ್ಕೆ ಪರ್ಯಾಯವಾಗಿ ಶಿವಯೋಗಮಂದಿರದಲ್ಲಿ ಗುರು ವಿರಕ್ತರ ಸಮಾವೇಶ ನಡೆಸಿದ್ದರು.ಅಖಂಡ ವೀರಶೈವ ಲಿಂಗಾಯತರು ಒಂದೇ ಎಂಬ ಸಂದೇಶ ಸಾರಿದ್ದರು.

ಡಾ ಅಭಿನವ ಅನ್ನದಾನ ಸ್ವಾಮೀಜಿ ಲಿಂಗೈಕ್ಯ
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಹಾಲಕೆರೆಯ ಡಾ ಅಭಿನವ ಅನ್ನದಾನ ಸ್ವಾಮೀಜಿಗಳು ಹೃದಯ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ. ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ ಹೊಸಪೇಟೆ, ಬಳ್ಳಾರಿಯ ಕೊಟ್ಟೂರು ಸ್ವಾಮಿಮಠ, ಶ್ರೀಮದ ಶಿವಯೋಗಿ ಮಂದಿರದ ಅಧ್ಯಕ್ಷರಾಗಿದ್ದರು. ಇಂದು ಸಂಜೆ ಅಥವಾ ನಾಳೆ ಹಾಲಕೆರೆ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ಈ ಮಠ 28 ಶಾಖಾ ಮಠಗಳನ್ನು ಹೊಂದಿದೆ. ಹಾಗೂ ಇದೇ ನವೆಂಬರ್ 10ಕ್ಕೆ ಹಾಲಕೇರಿಯ 13ನೇ ಪೀಠಾಧಿಪತಿಯಾಗಿ ನೂತನ ಮುಪ್ಪಿನ ಬಸವಲಿಂಗ ಸ್ವಾಮೀಜಿ ಅಧಿಕಾರ ವಹಿಸಿಕೊಂಡಿದ್ದರು.

ಸಿಎಂ ಸಂತಾಪ
ಇನ್ನು ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಅಭಿನವ ಅನ್ನದಾನೇಶ್ವರ ಡಾ. ಸಂಗನ ಬಸವ ಮಹಾಸ್ವಾಮಿಗಳ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳಿಗೆ 85 ವರ್ಷ ವಯಸ್ಸಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಲಿಂಗೈಕ್ಯರಾಗಿದ್ದಾರೆ. ಹಲವು ದಶಕಗಳ ಕಾಲ ಅವರು ಕನ್ನಡ ನಾಡು, ನುಡಿ, ಲಿಂಗಾಯತ ಧರ್ಮಕ್ಕೆ ಸಲ್ಲಿಸಿದ ಸೇವೆ ಅಪಾರ. ಅವರ ನಿಧನದಿಂದ ಅಪಾರ ಭಕ್ತ ಸಮೂಹ ಅನಾಥವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಅವರ ಭಕ್ತ ಸಮೂಹಕ್ಕೆ ನೀಡಲಿ ಎಂದು ಕೋರುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಪುನೀತ್​ ನೆನಪಲ್ಲಿ ಇನ್ನೊಂದು ದೊಡ್ಡ ಕಾರ್ಯಕ್ರಮ ‘ಅಪ್ಪು ಅಮರ’; ಇದು ಕಿರುತೆರೆ ಮಂದಿಯ ನಮನ

Click on your DTH Provider to Add TV9 Kannada