ಹೈಸ್ಕೂಲ್ ದಿನಗಳಲ್ಲಿ ಪ್ರೀತಿಸಿ ಮದುವೆಯಾದ ದಂಪತಿಗೆ ಜೀವ ಬೆದರಿಕೆ, ಎಸ್ಪಿ ಕಚೇರಿಗೆ ಓಡೋಡಿ ಬಂದ ಜೋಡಿ ಹಕ್ಕಿಗಳು!
ಜೋಡಿ ಹಕ್ಕಿ ಬಳ್ಳಾರಿಯಿಂದ ಆಂದ್ರಕ್ಕೆ ಹೋಗಿ ನರಸಿಂಹ ದೇವಸ್ಥಾನದಲ್ಲಿ ಹಾರ ಬದಲಾಯಿಸಿ ಮದುವೆ ಆಗಿದ್ದಾರೆ. ಹುಡುಗನ ಮನೆಯಲ್ಲಿ ಶಿಲ್ಪಾಳನ್ನ ಸೊಸೆ ಅಂತಾ ಒಪ್ಪಿಕೊಳ್ಳಲು ತಯಾರಿದ್ದಾರೆ. ಆದರೆ ಯುವತಿ ಮನೆಯಲ್ಲಿ ಅಳಿಯನನ್ನ ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ಹುಡುಗಿ ಪೋಷಕರಿಂದ ಏನಾದರೂ ಅನಾಹುತ ಆಗಬಹುದು ಅಂತಾ ರಕ್ಷಣೆಗಾಗಿ ಎಸ್ಪಿ ಕಚೇರಿಗೆ ಬಂದಿದ್ದಾರೆ.
ಅವರಿಬ್ಬರೂ ಪರಸ್ಪರ ಐದು ವರ್ಷಗಳಿಂದ ಪ್ರೀತಿ ಮಾಡ್ತಾ ಇದ್ರು, ಅವರ ಪ್ರೀತಿಗೆ ಮನೆಯಲ್ಲಿ ಒಪ್ಪದ ಕಾರಣ ಮನೆ ಬಿಟ್ಟು ಓಡಿಬಂದು ನರಸಿಂಹ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.. ಮದುವೆಯಾದ ಜೋಡಿಗೀಗ ಮನೆಯವರಿಂದಲೇ ಪ್ರಾಣ ಬೆದರಿಕೆ ಶುರುವಾಗಿದೆ, ಹೀಗಾಗಿ ರಕ್ಷಣೆಗಾಗಿ ಆ ಜೋಡಿ ಠಾಣೆ ಮೆಟ್ಟಿಲು ಏರಿದ್ದಾರೆ… ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಹೌದು ಹೀಗೆ ಮುದ್ದುಮುದ್ದಾಗಿ ಕಾಣುವ ಈ ಜೋಡಿ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ರು, ಒಂದೇ ಜಾತಿಯವರಾದ್ರು ಮನೆಯಲ್ಲಿ ಮದುವೆಗೆ ಒಪ್ಪಿಲ್ಲ, ಹೀಗಾಗಿ ಮನೆ ಬಿಟ್ಟು ಓಡಿ ಬಂದು ಆಂದ್ರದಲ್ಲಿ ನರಸಿಂಹ ದೇವಸ್ಥಾನದ ಮುಂದೆ ಮದುವೆಯಾಗಿದ್ದಾರೆ.. ಮದುವೆಯಾದ ವಿಷಯ ಹುಡಗಿ ಕುಟುಂಬಕ್ಕೆ ತಿಳಿಯುತ್ತಿದ್ದಂತೆ ಹುಡಗನ ಮೇಲೆ ಗರಂ ಆಗಿದ್ದಾರೆ.
ಹೀಗಾಗಿ ಬೆದರಿದ ಈ ಜೋಡಿ ಬಳ್ಳಾರಿ ಎಸ್ಪಿ ಕಚೇರಿಗೆ ಬಂದು ಜೀವ ರಕ್ಷಣೆಗೆ ಮನವಿ ಮಾಡಿದ್ದಾರೆ.. ಎಸ್ ಹೀಗೆ ಕಾಣುವ ಈ ಜೋಡಿ ಹೆಸರು ನಾರಾಯಣ (25) ಮತ್ತು ಶಿಲ್ಪಾ (20) ಅಂತಾ ಯುವಕ ನಾರಾಯಣ ಬಳ್ಳಾರಿ ತಾಲೂಕಿನ ಗೋನಾಳ ಗ್ರಾಮದವನಾದ್ರೆ, ಯುವತಿ ಶಿಲ್ಪಾ ಸಿರಗುಪ್ಪ ತಾಲೂಕಿನ ಊಳೂರು ಗ್ರಾಮದವಳು.. ಶಿಲ್ಪಾ 9 ನೇ ತರಗತಿ ಇರುವಾಗ ಗೋನಾಳ ಗ್ರಾಮದಲ್ಲಿರುವ ಅವಳ ದೊಡ್ಡಮ್ಮನ ಮನೆಗೆ ಬಂದಿದ್ದಳಂತೆ ಆಗ ನಾರಾಯಣನ ಪರಿಚಯವಾಗಿದೆ.. ಪರಿಚಯ ಪ್ರೇಮಕ್ಕೆ ತಿರುಗಿ ಈಗ ಈ ಜೋಡಿ ಮದುವೆ ಆಗಿದ್ದಾರೆ.. ಯುವಕ ಯುವತಿ ಕುರುಬ ಸಮುದಾಯಕ್ಕೆ ಸೇರಿದ್ದಾರೆ ಯಾವುದೇ ಜಾತಿ ಸಮಸ್ಯೆ ಇಲ್ಲ ಆದರೂ ಮನೆಯಲ್ಲಿ ಒಪ್ಪಿಲ್ಲ ಹೀಗಾಗಿ ಶಿಲ್ಪಾ ಮನೆ ಬಿಟ್ಟು ಬಂದು ಈ ಯುವಕನನ್ನ ಮದುವೆ ಆಗಿದ್ದಾಳೆ.
ಇನ್ನು ಯುವಕ ನಾರಾಯಣ ಬಳ್ಳಾರಿ ಜಿಲ್ಲಾ ಪಂಚಾಯತ್ನಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ.. ನೋಡಲು ಸ್ಮಾಟ್೯ ಆಗಿದ್ದಾನೆ.. ಯುವತಿ ಶಿಲ್ಪಾ ಪಿಯುಸಿ ಮುಗಿಸಿದ್ದಾಳೆ ಇವಳು ಕೂಡ ಸುಂದರವಾಗಿದ್ದಾಳೆ. ಪರಸ್ಪರ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಇರದಂತ ಪ್ರೀತಿ ಮಾಡಿದ್ದಾರೆ..
ಆದರೆ ಈ ಪ್ರೀತಿಗೆ ಹುಡುಗಿ ಪೋಷಕರು ಒಪ್ಪಿಗೆ ನೀಡಿಲ್ಲ, ಇದಕ್ಕೆ ಕಾರಣ ಅಂದ್ರೆ ಹುಡಗನಿಗೆ ಆಸ್ತಿಯಿಲ್ಲ ಬಡವ ಇದ್ದಾನೆ ಅಂತಾ. ಆದರೆ ಐದು ವರ್ಷದ ಪ್ರೀತಿ ಹೇಗೆ ಬಿಟ್ಟು ಕೊಡುವುದಕ್ಕೆ ಆಗುತ್ತೆ ಅಂತಾ ಶಿಲ್ಪಾ ಜ. 27 ನೇ ತಾರೀಖು ಮನೆ ಬಿಟ್ಟು ಬಂದಿದ್ದಾಳೆ.. ಮನೆ ಬಿಟ್ಟು ಬಂದು ನನ್ನ ಮದುವೆ ಆಗು ಅಂತಾ ನಾರಾಯಣನಿಗೆ ಹೇಳಿದ್ದಾಳೆ.
ಆಗ ಇಬ್ಬರು ಬಳ್ಳಾರಿ ಯಿಂದ ಆಂದ್ರಪ್ರದೇಶಕ್ಕೆ ಹೋಗಿ ಅಲ್ಲಿರುವ ನರಸಿಂಹ ದೇವಸ್ಥಾನದ ಮುಂದೆ ಹಾರ ಬದಲಾಯಿಸಿ ಮದುವೆ ಆಗಿದ್ದಾರೆ.. ಹುಡುಗನ ಮನೆಯಲ್ಲಿ ಶಿಲ್ಪಾಳನ್ನ ಸೊಸೆ ಅಂತಾ ಒಪ್ಪಿಕೊಳ್ಳಲು ತಯಾರಿದ್ದಾರೆ. ಆದರೆ ಯುವತಿ ಮನೆಯಲ್ಲಿ ನಾರಾಯಣನನ್ನ ಅಳಿಯ ಅಂತಾ ಒಪ್ಪಿಕೊಳ್ಳುತ್ತಿಲ್ಲ.. ಹೀಗಾಗಿ ಹುಡುಗಿ ಪೋಷಕರಿಂದ ಏನಾದರೂ ಅನಾಹುತ ಆಗ ಬಹುದು ಅಂತಾ ರಕ್ಷಣೆಗಾಗಿ ಎಸ್ಪಿ ಕಚೇರಿಗೆ ಬಂದಿದ್ದಾರೆ.
ಒಟ್ಟಿನಲ್ಲಿ ಐದು ವರ್ಷದಿಂದ ಪ್ರೀತಿ ಪ್ರೇಮದಲ್ಲಿ ಮುಳಗಿದ್ದ ಜೋಡಿ ಮದುವೆ ಆಗಿದ್ದಾರೆ.. ಆದರೆ ಈ ಮದುವೆಗೆ ಹುಡುಗಿ ಪೋಷಕರು ಒಪ್ಪಿಗೆ ನೀಡಿಲ್ಲ.. ಹೀಗಾಗಿ ರಕ್ಷಣೆ ಬೇಕು ಅಂತಾ ಠಾಣೆ ಮೆಟ್ಟಿಲೇರಿದ್ದಾರೆ.. ಇನ್ನಾದರೂ ಎರಡೂ ಕುಟುಂಬಗಳು ಹಗೆ ಸಾಧಿಸದೆ ಈ ಜೋಡಿಯನ್ನ ಒಪ್ಪಿ ಆಶೀರ್ವದಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ