ಬಿಡಿಎಎ ಫುಟ್‍ಬಾಲ್ ಮೈದಾನ ಮತ್ತು ಕ್ರೀಡಾ ವಸತಿ ನಿಲಯಕ್ಕೆ ಸಚಿವ ಬಿ ನಾಗೇಂದ್ರ ದಿಢೀರ್​ ಭೇಟಿ ಪರಿಶೀಲನೆ!

ಡಾ.ರಾಜ್‍ಕುಮಾರ್ ರಸ್ತೆಯ ಬಿಡಿಎಎ ಪುಟ್ಬಾಲ್ ಕ್ರೀಡಾಂಗಣ ಹಾಗೂ ಕ್ರೀಡಾ ವಸತಿನಿಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಊಟೋಪಹಾರ ಸೇರಿದಂತೆ ಇಲಾಖೆಯಿಂದ ದೊರೆಯುತ್ತಿರುವ ಸೌಲಭ್ಯ ಹಾಗೂ ತರಬೇತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಬಿಡಿಎಎ ಫುಟ್‍ಬಾಲ್ ಮೈದಾನ ಮತ್ತು ಕ್ರೀಡಾ ವಸತಿ ನಿಲಯಕ್ಕೆ ಸಚಿವ ಬಿ ನಾಗೇಂದ್ರ ದಿಢೀರ್​ ಭೇಟಿ ಪರಿಶೀಲನೆ!
ವಿದ್ಯಾರ್ಥಿಗಳೊಂದಿಗೆ ಸಚಿವ ಬಿ.ನಾಗೇಂದ್ರ ಚರ್ಚೆ
Follow us
ವೀರೇಶ್ ದಾನಿ, ಬಳ್ಳಾರಿ-ವಿಜಯನಗರ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 13, 2023 | 7:23 PM

ಬಳ್ಳಾರಿ: ನಗರದ ಡಾ.ರಾಜ್‍ಕುಮಾರ್ ರಸ್ತೆಯ ಬಿಡಿಎಎ ಪುಟ್ಬಾಲ್ ಕ್ರೀಡಾಂಗಣ ಹಾಗೂ ಕ್ರೀಡಾ ವಸತಿನಿಲಯಕ್ಕೆ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ (B Nagendra) ಅವರು ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಅವರು, ಊಟೋಪಹಾರ ಸೇರಿದಂತೆ ಇಲಾಖೆಯಿಂದ ದೊರೆಯುತ್ತಿರುವ ಸೌಲಭ್ಯ ಹಾಗೂ ತರಬೇತಿ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಕ್ರೀಡಾ ಇಲಾಖೆ ಅಧಿಕಾರಿಗಳು ಹಾಗೂ ಕೋಚ್‍ಗಳು ಕ್ರೀಡಾಪಟುಗಳಿಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸುವಂತೆ ಸೂಚಿಸಿದರು.

ಇದನ್ನೂ ಓದಿ: ವಿಎಸ್​ಕೆ‌ ವಿವಿ ಹೊಸ ಕಟ್ಟಡಗಳ ಉದ್ಘಾಟಣೆ: ಗೌರವ ಡಾಕ್ಟರೇಟ್ ಪ್ರದಾನ ಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​​

ನಂತರ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರೊಂದಿಗೆ ತೆರಳಿ ಪುಟ್ಬಾಲ್ ಮೈದಾನ ವೀಕ್ಷಣೆ ಮಾಡಿದರು. ಕಳೆದ ಹತ್ತು ವರ್ಷಗಳ ಹಿಂದೆ ಹಾಕಲಾಗಿದ್ದ ಕ್ರೀಡಾಂಗಣದ ಹುಲ್ಲಿನ ಹಾಸನ್ನು ಒಂದು ತಿಂಗಳ ಒಳಗಾಗಿ ಸಂಪೂರ್ಣವಾಗಿ ಬದಲಾಯಿಸಿ ಕ್ರೀಡಾಪಟುಗಳಿಗೆ ಉತ್ತಮ ಕ್ರೀಡಾಂಗಣ ನಿರ್ಮಿಸುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: Mangaluru News: ಕೊಣಾಜೆ ಬಾಳೆಪುಣಿ ಶಾಲೆಯ ಬಳಿ ಬಾರ್; ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೃತ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂಪಾಯಿ ಚೆಕ್​ ವಿತರಿಸಿದ ಸಚಿವ ಬಿ. ನಾಗೇಂದ್ರ

ಹೊಸಪೇಟೆ ಹೊರವಲಯದ ವಡರಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸದಂತೆ ರಸ್ತೆ ಅಪಘಾತದಲ್ಲಿ ಮೃತಪಟ್ಟ 9 ಕುಟುಂಬಸ್ಥರಿಗೆ ಸಚಿವ ಬಿ. ನಾಗೇಂದ್ರ ತಲಾ 2 ಲಕ್ಷ ರೂಪಾಯಿ ಚೆಕ್ ಹಸ್ತಾಂತರ ಮಾಡಿದ್ದಾರೆ. ಬಳ್ಳಾರಿಯ ಕೌಲಬಜಾರ್ ಪ್ರದೇಶದ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿ ಪರಿಹಾರ ವಿತರಣೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.