ಹಂಪಿಯಲ್ಲಿ ಜಿ-20: 3ನೇ ಶೆರ್ಪಾ ಸಭೆ ಆರಂಭ, ನ್ಯೂ ದೆಹಲಿ ಘೋಷಣೆಗೆ ಅಂತಿಮ ರೂಪ!

ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಶೃಂಗ ಸಭೆಯ 3ನೇ ಶೆರ್ಪಾ ಸಭೆಗೆ ಗುರುವಾರ ವಿಶ್ವವಿಖ್ಯಾತ ಹಂಪಿಯಲ್ಲಿ ಚಾಲನೆ ದೊರೆತಿದೆ. ಆರ್ಥಿಕ ಬೆಳವಣಿಗೆ, ಸುಸ್ಥಿರ ಅಭಿವೃದ್ಧಿ, ಮಹಿಳಾ ಅಭಿವೃದ್ಧಿ ವಿವಿಧ ರಾಷ್ಟ್ರಗಳ ನಡುವೆ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಒತ್ತು ನೀಡಲಾಗುತ್ತಿದೆ.

ಹಂಪಿಯಲ್ಲಿ ಜಿ-20: 3ನೇ ಶೆರ್ಪಾ ಸಭೆ ಆರಂಭ, ನ್ಯೂ ದೆಹಲಿ ಘೋಷಣೆಗೆ ಅಂತಿಮ ರೂಪ!
3ನೇ ಶೆರ್ಪಾ ಸಭೆ
Follow us
ವೀರೇಶ್ ದಾನಿ, ಬಳ್ಳಾರಿ-ವಿಜಯನಗರ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 13, 2023 | 6:35 PM

ವಿಜಯನಗರ-ಹಂಪಿ: ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಶೃಂಗ ಸಭೆ (G20 Summit) ಯ 3ನೇ ಶೆರ್ಪಾ ಸಭೆಗೆ ಗುರುವಾರ ವಿಶ್ವವಿಖ್ಯಾತ ಹಂಪಿಯಲ್ಲಿ ಚಾಲನೆ ದೊರೆತಿದೆ. ಮುಂಬರುವ ಸೆಪ್ಟೆಂಬರ್‌ನಲ್ಲಿ ಜರುಗುವ ಶೃಂಗ ಸಭೆಯಲ್ಲಿ ನ್ಯೂ ದೆಹಲಿ ಘೋಷಣೆ ಅಳವಡಿಸಿಕೊಳ್ಳಲು ಜಿ-20 ರಾಷ್ಟ್ರಗಳ ಮುಖಂಡರು ಸಹಿ ಮಾಡಲಿದ್ದು, ನ್ಯೂ ದೆಹಲಿ ಘೋಷಣೆಗೆ ಅಂತಿಮ ರೂಪ ನೀಡುವ ಕೆಲಸ ಹಂಪಿಯ ಶೆರ್ಪಾಸಭೆಯಲ್ಲಿ ನಡೆಯಲಿದೆ.

3ನೇ ಶೆರ್ಪಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಜಿ-20ಯ ಭಾರತೀಯ ಶೆರ್ಪಾ ಅಮಿತಾಬ್ ಕಾಂತ್, ಈಗಾಗಲೇ ರಾಜಸ್ಥಾನದ ಉದಯಪುರ ಹಾಗೂ ಕೇರಳದ ಕುಮರಕೊಂ ಅಲ್ಲಿ ನಡೆದ ಶೆರ್ಪಾ ಸಭೆಗಳು ಯಶಸ್ವಿಯಾಗಿವೆ. ಜಿ-20 ರಾಷ್ಟ್ರಗಳ ಮುಖಂಡರು, ಹಣಕಾಸು ಸಚಿವರು, ಹಣಕಾಸು ಸಂಸ್ಥೆಗಳ ಮುಖ್ಯಸ್ಥರ ಸಭೆಗಳು ಜರುಗಿವೆ.

ಇದನ್ನೂ ಓದಿ: G20 Sherpa meeting: ವಧುವಿನಂತೆ ಐತಿಹಾಸಿಕ ಹಂಪಿಗೆ ಶೃಂಗಾರ! ಸ್ಮಾರಕಗಳಿಗೆ ಜೀವಕಳೆ ನೀಡಿದ ಪ್ರಾಚ್ಯವಸ್ತು ಇಲಾಖೆ – ಎಲ್ಲಾ ಮಹತ್ವದ G 20 ಶೃಂಗಸಭೆಗಾಗಿ

ಈ ಸಭೆಗಳಲ್ಲಿ ಜಿ-20 ರಾಷ್ಟ್ರಗಳ ಆರ್ಥಿಕ ಬೆಳವಣಿಗೆ, ಸುಸ್ಥಿರ ಅಭಿವೃದ್ಧಿ, ತಾಂತ್ರಿಕ ಮುನ್ನಡೆ, ಹಸಿರೀಕರಣ, ಮಹಿಳಾ ಅಭಿವೃದ್ಧಿ, ವಿವಿಧ ರಾಷ್ಟ್ರಗಳ ನಡುವೆ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ ಸೇರಿದಂತೆ ಇನ್ನಿತರ ಗುರಿಗಳನ್ನು ಸಾಧಿಸಲು ತೀವ್ರ ತರನಾದ ಒತ್ತು ನೀಡಿ ಚರ್ಚೆ ನಡೆಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಜಿ-20 ಶೃಂಗ ಸಭೆಗೆ ಚಾಲನೆ ನೀಡಿ ಎಲ್ಲಾ ಸದಸ್ಯ ರಾಷ್ಟ್ರಗಳನ್ನು ಒಳಗೊಂಡು, ಮಹತ್ವಾಕಾಂಕ್ಷೆ ಗುರಿಗಳನ್ನು ಸಾಧಿಸಲು, ಕ್ರಿಯಾತ್ಮಕ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುವಂತೆ ಸೂಚನೆ ನೀಡಿದ್ದಾರೆ.

ಜಗತ್ತಿನ ಮುಂದೆ ಅಪಾರ ಪ್ರಮಾಣದ ಸವಾಲುಗಳಿವೆ. ಈ ಜಾಗತಿಕ ಸವಾಲುಗಳಿಗೆ ಸಶಕ್ತ ಪರಿಹಾರ ಕಂಡುಕೊಳ್ಳುವ ಗುರುತರ ಕಾರ್ಯ ಶೆರ್ಪಾ ಸಭೆಯ ಮಾಡಬೇಕಿದೆ. ಮುಂದಿನ ಜನಾಂಗದ ಭವಿಷ್ಯದ ದೃಷ್ಟಿಯಿಂದ ದಿಟ್ಟ ಹೆಜ್ಜೆ ಇಡಬೇಕಿದೆ. ಬಲವಾದ ಬದ್ದತೆಯಿಂದ ಕಾರ್ಯ ನಿರ್ವಹಿಸಬೇಕು. ಜಿ-20 ರಾಷ್ಟ್ರಗಳ ಪ್ರತಿನಿಧಿಗಳು ಭಾರತದ ಐತಿಹಾಸಿಕ ಸ್ಥಳಗಳನ್ನು ಅನ್ವೇಷಿಸುವುದರೊಂದಿಗೆ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Hampi: ಐತಿಹಾಸಿಕ ಹಂಪಿಯಲ್ಲಿ ಜುಲೈ 12ರವರೆಗೂ ಜಿ20 ಸಿಡಬ್ಲ್ಯುಜಿ ಸಭೆ; 29 ದೇಶಗಳ 50 ಪ್ರತಿನಿಧಿಗಳು ಭಾಗಿ

ಹಂಪಿ ಐತಿಹಾಸಿಕವಾಗಿ ಹಾಗೂ ಸಾಂಸ್ಕೃತಿಕ ಮಹತ್ವ ಸ್ಥಳವಾಗಿದ್ದು ಮುಂದಿನ ನಾಲ್ಕುದಿಗಳ ಕಾಲ ನ್ಯೂ ದೆಹಲಿ ಘೋಷಣೆ ಕರಡು ಪ್ರತಿ ಕುರಿತು ಚರ್ಚೆ ನಡೆಸಲಾಗುವುದು. ಎಲ್ಲಾ ಸದಸ್ಯ ರಾಷ್ಟ್ರಗಳು ಅಭಿಪ್ರಾಯಗಳನ್ನು ಸಂಗಹಿಸಿ ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ