AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಗವಿಕಲತೆ ದೇಹಕ್ಕೆ ಮನಸ್ಸಿಗಲ್ಲವೆಂದು ಛಲಹಿಡಿದ ಸಾಧಕ; ಚೀನಾದಲ್ಲಿ ನಡೆಯೋ ಪ್ಯಾರ ಒಲಿಂಪಿಕ್​ಗೆ ಆಯ್ಕೆ

ದೇಹದ ಎಲ್ಲಾ ಅಂಗಾಂಗಗಳು ಸರಿಯಿದ್ರೂ ಸಾಧನೆ ಮಾಡಲು ವ್ಯವಸ್ಥೆಯಲ್ಲಿನ ಲೋಪದೋಷವನ್ನು ಎತ್ತಿಹಿಡಿಯುವ ಅದೆಷ್ಟೋ ಜನರ ಮಧ್ಯೆ ಅಪಘಾತವೊಂದರಲ್ಲಿ ಎರಡು ಕಾಲುಗಳನ್ನು ಕಳೆದುಕೊಂಡ ಯುವಕನೊಬ್ಬ ಇದೀಗ ಸಾಧನೆಯ ಶಿಖರವನ್ನೇರಿದ್ದಾನೆ. 17 ವರ್ಷದ ಈ ಈಜುಪಟು ಇದೇ ತಿಂಗಳ 22 ರಿಂದ 28ರವರೆಗೆ ಚೀನಾದ ಹಾಂಗ್‌ನಲ್ಲಿ ನಡೆಯಲಿರುವ ಪ್ಯಾರಾ ಏಷ್ಯನ್ ಗೇಮ್ಸ್ ಆಯ್ಕೆಯಾಗುವ ಮೂಲಕ ಅಂಗವಿಕಲತೆ ಎನ್ನುವುದು ದೇಹಕ್ಕೆ ಹೊರತು ಸಾಧನೆಗಲ್ಲ ಎನ್ನುವದನ್ನು ಸಾಭೀತು ಮಾಡಿದ್ದಾನೆ.

ಅಂಗವಿಕಲತೆ ದೇಹಕ್ಕೆ ಮನಸ್ಸಿಗಲ್ಲವೆಂದು ಛಲಹಿಡಿದ ಸಾಧಕ; ಚೀನಾದಲ್ಲಿ ನಡೆಯೋ ಪ್ಯಾರ ಒಲಿಂಪಿಕ್​ಗೆ ಆಯ್ಕೆ
ಬಳ್ಳಾರಿ ಯುವಕ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Oct 21, 2023 | 7:22 AM

Share

ಬಳ್ಳಾರಿ, ಅ.21: ಅಪಘಾತದಲ್ಲಿ ಎರಡು ಕಾಲನ್ನು ಕಳೆದುಕೊಂಡರು ಧೃತಿಗೇಡದೇ ಸಾಧಿಸಿ ತೋರಿಸಿದ್ದಾರೆ. ಹೌದು, ಬಳ್ಳಾರಿ (Ballari)ಜಿಲ್ಲೆಯ ಸಂಡೂರು ತಾಲೂಕಿನ ದರೋಜಿ ಗ್ರಾಮದವರಾದ ಗೋಪಿಚಂದ್ ಅವರು, ಎರಡನೇ ತರಗತಿ ಓದುತ್ತಿದ್ದಾಗ ರಸ್ತೆ ಅಪಘಾತದಲ್ಲಿ ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡರು. ಆದರೆ, ತನಗೆ ಕಾಲಿಲ್ಲ ಎಂದು ಧೃತಿಗೇಡದ ಗೋಪಿಚಂದ್, ಸುಮ್ಮನೆ ಕೂರದೇ ಸಾಧನೆಯ ಒಂದೊಂದೇ ಮೆಟ್ಟಿಲು ಹತ್ತಿ, ಇಂದು ಅಂತಾರಾಷ್ಟ್ರೀಯ ಈಜುಪಟು (Swimmer) ವಾಗಿ ಹೊರಹೊಮ್ಮಿದ್ದಾರೆ.

ಈ ಸಾಧಕನ ಹಿಂದೆ ಇದ್ದಾರೆ ಮಹಿಳಾ ಕೋಚ್

ಈಜಿನಲ್ಲಿ ಆಸಕ್ತಿ ಹೊಂದಿದ್ದ ಗೋಪಿಚಂದ್ ಅವರಿಗೆ ಬಳ್ಳಾರಿಯ ಕೋಚ್ ರಜಿನಿ ಲಕ್ಕಾ ಎಂಬುವವರು ನಿರಂತರ ಈಜನ್ನು ಕಲಿಸುವ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅಲ್ಲದೇ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪದಕ ಗೆಲ್ಲುವಂತೆ ಮಾಡಿದ್ದಾರೆ. ಇಷ್ಟೇ ಅಲ್ಲದೇ ಗೋಪಿ ಅವರಿಗೆ ಅರ್ಜುನ ಪ್ರಶಸ್ತಿ ಕೂಡ ಬಂದಿದೆ. ಇನ್ನು ಇದೇ ಮೊದಲ ಬಾರಿಗೆ ಬಳ್ಳಾರಿ ಜಿಲ್ಲೆಯಿಂದ ಏಷ್ಯಾನ್ ಗೇಮ್ಸ್ ಗೆ ಆಯ್ಕೆಯಾದವರು ಎನ್ನುವ ಖ್ಯಾತಿಯನ್ನೂ ಪಡೆದಿದ್ದಾರೆ.

ಇದನ್ನೂ ಓದಿ:ಪ್ಯಾರಿಸ್ ಒಲಿಂಪಿಕ್ಸ್​ಗೆ ನೇರ ಅರ್ಹತೆ ಪಡೆದ ನೀರಜ್ ಚೋಪ್ರಾ

ರಾಷ್ಟ್ರ, ಅಂತರರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ 23 ಚಿನ್ನ ಹಾಗೂ 8 ಬೆಳ್ಳಿ ಸೇರಿ ಅನೇಕ ಪದಕ

ಬಳ್ಳಾರಿ ಮೂಲದ ರಜಿನಿ ಅವರು ಅಂಗವಿಕಲ ಮಕ್ಕಳಿಗೆ ಈಜು ಕಲಿಸುವ ವಿಶೇಷ ತರಬೇತುದಾರ ರಜಿನಿಯವರ ಹತ್ತು ವರ್ಷದ ಶ್ರಮದಿಂದಲೇ ಗೋಪಿಚಂದ ರಾಷ್ಟ್ರ, ಅಂತರರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ 23 ಚಿನ್ನ ಹಾಗೂ 8 ಬೆಳ್ಳಿ ಸೇರಿದಂತೆ ಅನೇಕ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಲ್ಲದೇ ತಂದೆ ರಾಜಶೇಖರ್ ಹಾಗೂ ತಾಯಿ ವಸಂತ ಅವರ ಪ್ರೋತ್ಸಾಹ ಮತ್ತು ಇದೀಗ ಹೆಚ್ಚಿನ ತರಬೇತಿ ನೀಡುತ್ತಿರುವ ಬೆಂಗಳೂರಿನ ಶರತ್ ಗಾಯಕ್ವಾಡ ಅವರ ನಿರಂತರ ತರಬೇತಿಯಿಂದ ಇಂದು ಗೋಪಿಚಂದ್​ ಪ್ಯಾರ ಏಷ್ಯಾನ್ ಗೇಮ್ಸ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಿರಂತರ ಪರಿಶ್ರಮದಿಂದ ಗೋಪಿಚಂದ ಏಷ್ಯಾನ್ ಗೇಮ್ಸ್ ತಲುಪಿದ್ದು, ಅಲ್ಲಿಯೂ ಚಿನ್ನ ಗೆಲ್ಲುವ ಮೂಲಕ ಕರ್ನಾಟಕದ ಕೀರ್ತಿ ಬಾನೆತ್ತರಕ್ಕೆರಿಸುವಂತೆ ಮಾಡಲಿ ಎನ್ನುವುದೇ ರಾಜ್ಯದ ಜನರ ಆಶಯವವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ