AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಯಾರಿಸ್ ಒಲಿಂಪಿಕ್ಸ್​ಗೆ ನೇರ ಅರ್ಹತೆ ಪಡೆದ ನೀರಜ್ ಚೋಪ್ರಾ

Neeraj Chopra Record: 2020 ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ನೀರಜ್ ಚೋಪ್ರಾ ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದರು. ಬರೋಬ್ಬರಿ 87.58 ಮೀ. ದೂರ ಭರ್ಜಿ ಎಸೆಯುವ ಮೂಲಕ ಚೋಪ್ರಾ ಈ ಸಾಧನೆ ಮಾಡಿದ್ದರು.

ಪ್ಯಾರಿಸ್ ಒಲಿಂಪಿಕ್ಸ್​ಗೆ ನೇರ ಅರ್ಹತೆ ಪಡೆದ ನೀರಜ್ ಚೋಪ್ರಾ
Neeraj Chopra
TV9 Web
| Edited By: |

Updated on:Aug 26, 2023 | 3:16 PM

Share

ಹಂಗೇರಿಯ ಬುಡಾಪೆಸ್ಟ್​ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ (Neeraj Chopra) ಫೈನಲ್​ಗೆ​ ಪ್ರವೇಶಿಸಿದ್ದಾರೆ. ಫೈನಲ್​ನ ಅರ್ಹತಾ ಸುತ್ತಿನಲ್ಲಿ 88.77 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ನೀರಜ್ ಚೋಪ್ರಾ ಅಂತಿಮ ಸುತ್ತಿಗೆ ಪ್ರವೇಶಿಸಿದರು. ಇದರೊಂದಿಗೆ 2024 ರಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್​ಗೂ ನೇರ ಅರ್ಹತೆ ಪಡೆದುಕೊಂಡರು.

ಟಾರ್ಗೆಟ್​ 83 ಮೀಟರ್:

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ಫೈನಲ್​ಗೆ ಪ್ರವೇಶಿಸಲು ಕನಿಷ್ಠ 83 ಮೀಟರ್​ ದೂರದವರೆಗೆ ಜಾವೆಲಿನ್ ಎಸೆಯಬೇಕಿತ್ತು. ಇತ್ತ ಮೊದಲ ಎಸೆತದಲ್ಲೇ 88.77 ಮೀಟರ್ ಎಸೆದು ನೀರಜ್ ಚೋಪ್ರಾ ಫೈನಲ್​ಗೆ ಅರ್ಹತೆ ಪಡೆದುಕೊಂಡರು. ಅಲ್ಲದೆ ಇದಾದ ಬಳಿಕ ಉಳಿದ ಯಾವುದೇ ಎಸೆತಗಾರರು ಚೋಪ್ರಾ ಅವರ ದೂರವನ್ನು ಕ್ರಮಿಸಿರಲಿಲ್ಲ. ಹೀಗಾಗಿ ಏಕೈಕ ಎಸೆತದೊಂದಿಗೆ ನೀರಜ್ ಅಗ್ರಸ್ಥಾನ ಅಲಂಕರಿಸಿದರು.

ಒಲಿಂಪಿಕ್ಸ್​ಗೆ ನೇರ ಎಂಟ್ರಿ:

ಪ್ಯಾರಿಸ್​ನಲ್ಲಿ ನಡೆಯಲಿರುವ 2024ರ ಒಲಿಂಪಿಕ್ಸ್​ಗಾಗಿ ಜುಲೈ 1 ರಿಂದ ಅರ್ಹತಾ ವಿಂಡೋ ತೆರೆದಿದೆ. ಇಲ್ಲಿ  85.50 ಮೀಟರ್ ಮಾರ್ಕ್​​ ಅನ್ನು ಅರ್ಹತಾ ಮಾನದಂಡವಾಗಿ ನಿಗದಿ ಮಾಡಲಾಗಿದ್ದು, ಇದೀಗ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ 88.77 ಮೀಟರ್ ದೂರದವರೆಗೆ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ ಒಲಿಂಪಿಕ್ಸ್​ಗೆ ನೇರ ಅರ್ಹತೆ ಪಡೆದುಕೊಂಡಿದ್ದಾರೆ.

ಚಿನ್ನದ ಚೋಪ್ರಾ:

2020 ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ನೀರಜ್ ಚೋಪ್ರಾ ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದರು. ಬರೋಬ್ಬರಿ 87.58 ಮೀ. ದೂರ ಭರ್ಜಿ ಎಸೆಯುವ ಮೂಲಕ ಚೋಪ್ರಾ ಈ ಸಾಧನೆ ಮಾಡಿದ್ದರು. ಇದೀಗ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ 88.77 ಮೀಟರ್ ಥ್ರೋ ಎಸೆಯುವ ಮುಂಬರುವ ಒಲಿಂಪಿಕ್ಸ್​ನಲ್ಲೂ ಸ್ವರ್ಣ ಪದಕ ತಂದುಕೊಡುವ ಭರವಸೆ ಮೂಡಿಸಿದ್ದಾರೆ.

ಇದನ್ನೂ ಓದಿ: RCB ಯಿಂದ ಇಬ್ಬರು, CSK ಯಿಂದ ಒಬ್ಬರು: ತಂಡದಲ್ಲಿ ಮುಂಬೈ ಅವರದ್ದೇ ದರ್ಬಾರು..!

ಫೈನಲ್​ನಲ್ಲಿ 12 ಮಂದಿ:

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನ ಫೈನಲ್​ ರೌಂಡ್​ನಲ್ಲಿ ಒಟ್ಟು 12 ಮಂದಿ ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲಿ ನೀರಜ್ ಚೋಪ್ರಾ ಅಗ್ರಸ್ಥಾನದಲ್ಲಿದ್ದರೆ, ಭಾರತದ ಡಿಪಿ ಮನು ಹಾಗೂ ಕಿಶೋರ್ ಜೆನಾ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ. ಅದರಂತೆ ಭಾನುವಾರ ನಡೆಯಲಿರುವ ಫೈನಲ್​ನಲ್ಲಿ ಭರ್ಜಿ ಎಸೆಯುವ ಸ್ಪರ್ಧಾಳುಗಳ ಪಟ್ಟಿ ಈ ಕೆಳಗಿನಂತಿದೆ…

  1.  ನೀರಜ್ ಚೋಪ್ರಾ (ಭಾರತ) – 88.77 ಮೀ. (ಕೊನೆಯ ಸುತ್ತಿನಲ್ಲಿ ಕ್ರಮಿಸಿದ ದೂರ)
  2.  ನದೀಮ್ ಅರ್ಷದ್ (ಪಾಕಿಸ್ತಾನ) – 86.79 ಮೀ.
  3.  ವಡ್ಲೆಜ್ (ಜೆಕ್ ರಿಪಬ್ಲಿಕ್) – 83.50 ಮೀ
  4.  ವೆಬರ್ (ಜರ್ಮನಿ) – 82.39 ಮೀ
  5.  ಮಾಟುಸೆವಿಸಿಯಸ್ (ಲಿಥುವೇನಿಯಾ) – 82.35 ಮೀ
  6.  ಡಿಪಿ ಮನು (ಭಾರತ) – 81.31 ಮೀ
  7.  ವೆಗ್ನರ್ (ಪೋಲೆಂಡ್) – 81.25 ಮೀ
  8.  ಅಬ್ದೆಲ್​ ರೆಹಮಾನ್ (ಈಜಿಪ್ಟ್) – 80.75 ಮೀ
  9.  ಕಿಶೋರ್ ಜೆನಾ (ಭಾರತ) – 80.55 ಮೀ
  10.  ಹೆಲ್ಯಾಂಡರ್ (ಫಿನ್​ಲ್ಯಾಂಡ್) – 80.19 ಮೀ
  11.  ಹರ್ಮನ್ (ಬೆಲ್ಜಿಯಂ) – 80.11ಮೀ
  12.  ಮರ್ಡೇರ್ (ಮಾಲ್ಡೋವಿಯಾ) – 79.78ಮೀ

Published On - 3:15 pm, Sat, 26 August 23

Follow Us
ಕಬ್ಬಿನ ತೋಟದಲ್ಲಿ 4 ಚಿರತೆ ಮರಿಗಳು
ಕಬ್ಬಿನ ತೋಟದಲ್ಲಿ 4 ಚಿರತೆ ಮರಿಗಳು
ಈದ್ ಮೆರವಣಿಗೆ ವೇಳೆ ಘರ್ಷಣೆ ಸಂಬಂಧ 3 FIR: 8 ಮಂದಿ ಪೊಲೀಸ್ ವಶಕ್ಕೆ
ಈದ್ ಮೆರವಣಿಗೆ ವೇಳೆ ಘರ್ಷಣೆ ಸಂಬಂಧ 3 FIR: 8 ಮಂದಿ ಪೊಲೀಸ್ ವಶಕ್ಕೆ
ಇಂದು ಹಯಗ್ರೀವ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಹಯಗ್ರೀವ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಿಹಾರದಲ್ಲಿ 21 ಜನರಿದ್ದ ದೋಣಿ ಮಗುಚಿ ಇಬ್ಬರು ನಾಪತ್ತೆ; ವಿಡಿಯೋ ಇಲ್ಲಿದೆ
ಬಿಹಾರದಲ್ಲಿ 21 ಜನರಿದ್ದ ದೋಣಿ ಮಗುಚಿ ಇಬ್ಬರು ನಾಪತ್ತೆ; ವಿಡಿಯೋ ಇಲ್ಲಿದೆ
‘ಹೇಗಿದೆ ಟಾಕ್ಸಿಕ್?’ ಕಲೆಕ್ಷನ್, ವಿಮರ್ಶೆ ಇತ್ಯಾದಿ: ವಿಡಿಯೋ ನೋಡಿ
‘ಹೇಗಿದೆ ಟಾಕ್ಸಿಕ್?’ ಕಲೆಕ್ಷನ್, ವಿಮರ್ಶೆ ಇತ್ಯಾದಿ: ವಿಡಿಯೋ ನೋಡಿ
ನೇಪಾಳ-ಟಿಬೆಟ್ ಗಡಿಯಲ್ಲಿ ಪ್ರವಾಹಕ್ಕೆ ಕೊಚ್ಚಿಹೋಯ್ತು ತ್ರಿಶೂಲಿ ನದಿ ಸೇತುವೆ
ನೇಪಾಳ-ಟಿಬೆಟ್ ಗಡಿಯಲ್ಲಿ ಪ್ರವಾಹಕ್ಕೆ ಕೊಚ್ಚಿಹೋಯ್ತು ತ್ರಿಶೂಲಿ ನದಿ ಸೇತುವೆ
ಏಕಾಏಕಿ ಹೊತ್ತಿ ಉರಿದ ಕಾರು: ಕನ್ಯೆ ನೋಡಲು ಹೋಗಿದ್ದವ ಪ್ರಾಣಾಪಾಯದಿಂದ ಪಾರು
ಏಕಾಏಕಿ ಹೊತ್ತಿ ಉರಿದ ಕಾರು: ಕನ್ಯೆ ನೋಡಲು ಹೋಗಿದ್ದವ ಪ್ರಾಣಾಪಾಯದಿಂದ ಪಾರು
6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?
6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?
ಸಿಎಂ ಡಿಕೆ ಶಿವಕುಮಾರ್ ದಿಢೀರ್ ಸುದ್ದಿಗೋಷ್ಠಿಯ ನೇರಪ್ರಸಾರ
ಸಿಎಂ ಡಿಕೆ ಶಿವಕುಮಾರ್ ದಿಢೀರ್ ಸುದ್ದಿಗೋಷ್ಠಿಯ ನೇರಪ್ರಸಾರ
‘ಟಾಕ್ಸಿಕ್’ ಅದ್ದೂರಿ ರಿಲೀಸ್; ತುಮಕೂರಿನಲ್ಲೂ ಯಶ್ ಫ್ಯಾನ್ಸ್ ಸಂಭ್ರಮ
‘ಟಾಕ್ಸಿಕ್’ ಅದ್ದೂರಿ ರಿಲೀಸ್; ತುಮಕೂರಿನಲ್ಲೂ ಯಶ್ ಫ್ಯಾನ್ಸ್ ಸಂಭ್ರಮ