ವಿಧಾನಸೌಧ ಗೋಡೆಗಳು ಪಿಸುಗುಡುತ್ತಿವೆ ಬಿಜೆಪಿ 40 ಪೆರ್ಸೆಂಟ್ ಸರ್ಕಾರ ಎಂದು, ಈಶ್ವರಪ್ಪಗೆ ಕ್ಲಿನ್‌ಚಿಟ್ ಸಿಕ್ಕಂತೆ ಲಿಂಬಾವಳಿಗೆ ಸಿಗಬಾರದು -ಸಿದ್ದರಾಮಯ್ಯ
ಪ್ರದೀಪ್ ಕೂಡ ತನ್ನ ಆತ್ಮಹತ್ಯೆಗೆ ಲಿಂಬಾವಳಿ ಕಾರಣ ಎಂದು ಬರೆದಿದ್ದಾರೆ. ಸಂತೋಷ್ ಕೂಡ ಈಶ್ವರಪ್ಪ ಕಾರಣ ಎಂದು ಬರೆದಿದ್ದರು. ಇವರಿಗೆ ಜೈಲು ಶಿಕ್ಷೆ ಆಗಬೇಕು, ಆದ್ರೆ ಶಿಕ್ಷೆ ಕೊಡಲಿಲ್ಲ.
ವಿಜಯನಗರ: ಬೆಂಗಳೂರಿನ ವಿಧಾನಸೌಧ ಗೋಡೆಗಳು ಪಿಸುಗುಡುತ್ತಿದೆ 40 ಪೆರ್ಸೆಂಟ್ ಸರ್ಕಾರ ಎಂದು. ಪ್ರದೀಪ್ ಕೂಡ ತನ್ನ ಆತ್ಮಹತ್ಯೆಗೆ ಲಿಂಬಾವಳಿ(Arvind Limbavali) ಕಾರಣ ಎಂದು ಬರೆದಿದ್ದಾರೆ. ಸಂತೋಷ್ ಕೂಡ ಈಶ್ವರಪ್ಪ(KS Eshwarappa) ಕಾರಣ ಎಂದು ಬರೆದಿದ್ದರು. ಇವರಿಗೆ ಜೈಲು ಶಿಕ್ಷೆ ಆಗಬೇಕು, ಆದ್ರೆ ಶಿಕ್ಷೆ ಕೊಡಲಿಲ್ಲ. ಈಶ್ವರಪ್ಪನಿಗೆ ಕ್ಲಿನ್‌ಚಿಟ್ ಕೊಟ್ಟಿದ್ದಾರೆ, ಲಿಂಬಾವಳಿ ವಿಷಯದಲ್ಲಿ ಹೀಗೆ ಆಗಬಾರದು. ಕೂಡಲೇ ಲಿಂಬಾವಳಿಯನ್ನ ಬಂಧಿಸಿ, ಪ್ರದೀಪ್‌ಗೆ ನ್ಯಾಯ ಕೊಡಿಸಿ ಎಂದು ಬಳ್ಳಾರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
ವಿಜಯನಗರ ಜಿಲ್ಲೆ ಹಗರಿಬೊಮ್ಮನ ಹಳ್ಳಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಿದ್ದರಾಮಯ್ಯ, ಪ್ರಧಾನಿ ಮೋದಿ ವಿರುದ್ಧ ಗುಡುಗಿದ್ದಾರೆ. ನರೇಂದ್ರ ಮೋದಿಯವರಿಗೆ ಗುತ್ತಿಗೆದಾರರಿಂದ ಪತ್ರ ಬರೆದಿದ್ದರು. ಅವರ ಯೋಗ್ಯತೆಗೆ ಒಂದು ತನಿಖೆ ಮಾಡಿಸಲಿಲ್ಲ. ಅಚೇ ದಿನ್ ಅಯೇಗಾ ಅಂತೀರಾ ಎಲ್ಲಿದೆ ಅಚೇ ದಿನ್. ಗ್ಯಾಸ್ ಬೆಲೆ ಏರಿಕೆಯಾಗಿದೆ, ಪಟ್ರೋಲ್, ಡಿಸೇಲ್ ಏರಿಕೆಯಾಗಿದೆ. ಬಿಜೆಪಿ ಸರ್ಕಾರ ಕಿತ್ತೋಗೆದು ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರ ಕೊಡಿ ಎಂದು ಪ್ರಧಾನಿ ಮೋದಿ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು.
ಇದನ್ನೂ ಓದಿ: ಸಿದ್ದರಾಮಯ್ಯ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ನಾವು ಸೋಲಿಸುವುದು ನಿಶ್ಚಿತ: ಕೆ ಎಸ್ ಈಶ್ವರಪ್ಪ
ಅನ್ನಭಾಗ್ಯ ಯೋಜನೆಯಲ್ಲಿ 7 ಕೆ.ಜಿ. ಅಕ್ಕಿ ಉಚಿತವಾಗಿ ಕೊಟ್ಟೆ. ಇದನ್ನ ಬಸವರಾಜ್ ಬೊಮ್ಮಾಯಿ ಹೇಳ್ತಾರೆ ಇದು ಕೇಂದ್ರ ಸರ್ಕಾರದ್ದು ಅಂತ. ನಿಮಗೆ ಮಾನ ಮಾರ್ಯದೆ ಏನಾದ್ರು ಇದೆಯಾ? ಬಿಜೆಪಿ ಸುಳ್ಳಿನ ಪ್ಯಾಕ್ಟರಿ ಎಂದು ಸಿದ್ದರಾಮಯ್ಯ, ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧವೂ ವಾಗ್ದಾಳಿ ನಡೆಸಿದ್ರು.
ಮೋದಿ ಮುಂದೆ ಸಿಎಂ ಬೊಮ್ಮಾಯಿ ನಾಯಿಯಂತೆ ಇರುತ್ತಾರೆ
ಇನ್ನು ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ, ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ಬಂದಿರೋ ಹಿನ್ನಲೆ ಬಾಗಿನ ಅರ್ಪಿಸಿದ್ದೇವೆ. ನಲವತ್ತು ವರ್ಷಗಳ ಹೋರಾಟಕ್ಕೆ ಅಂತ್ಯ ಹಾಡಿದ್ದೇವೆ. ಭೀಮಾನಾಯ್ಕ ಜೆಡಿಎಸ್ ಶಾಸಕರಾದ್ದಾಗಲೇ ಅನುದಾನ ಬಿಡುಗಡೆ ಮಾಡಿದ್ದೇವೆ ಅಭಿವೃದ್ಧಿ ಪಕ್ಷ ಅಗತ್ಯವಿಲ್ಲ. ಚುನಾವಣೆಯಲ್ಲಿ ಮಾತ್ರ ಭರವಸೆ ನೀಡ್ತೇವೆ. ಗೆದ್ದ ಮೇಲೆ ಆ ಪಕ್ಷ ಈ ಪಕ್ಷ ಅಂತೇನಿಲ್ಲ ಎಲ್ಲರ ಅಭಿವೃದ್ಧಿ ಮಾಡಬೇಕು. ನಾನು ಮುಖ್ಯಮಂತ್ರಿ ಆಗಿದ್ದಾಗ ಪಕ್ಷಾತೀತವಾಗಿ ಅನುದಾನ ನೀಡಿದ್ದೆ. ಬಿಜೆಪಿಯವರು ಒಂದು ಭರವಸೆಯನ್ನಾದರೂ ಈಡೇರಿಸಿದ್ದಾರಾ? ಸಿಎಂ ಬೊಮ್ಮಾಯಿಗೆ ಧೈರ್ಯವಿದ್ರೆ ಅಭಿವೃದ್ಧಿ ಬಗ್ಗೆ ಚರ್ಚೆಗೆ ಬರಲಿ. ಕಾಂಗ್ರೆಸ್ನವರ ಧಮ್ ಬಗ್ಗೆ ಸಿಎಂ ಬೊಮ್ಮಾಯಿ ಪ್ರಶ್ನೆ ಮಾಡ್ತಾರೆ. ಆದ್ರೆ ಮೋದಿ ಮುಂದೆ ಸಿಎಂ ಬೊಮ್ಮಾಯಿ ನಾಯಿಯಂತೆ ಇರುತ್ತಾರೆ. ಬೊಮ್ಮಾಯಿ ಅವರೇ ಧಮ್, ತಾಕತ್ತಿದ್ರೆ ಕೇಂದ್ರದಿಂದ ಅನುದಾನ ತನ್ನಿ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ, ರಾಜ್ಯದ ಎಲ್ಲ ಕೆರೆಗಳನ್ನು ತುಂಬಿಸುತ್ತೇವೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:25 am, Wed, 4 January 23