ST Reservation ಮೀಸಲಾತಿ ವಿಚಾರ: ಬೆಂಗಳೂರಿನಲ್ಲಿ ಅಕ್ಟೋಬರ್ 8ರಂದು ಸರ್ವಪಕ್ಷಗಳ ಸಭೆ

ಎಸ್​ಟಿ ಮೀಸಲಾತಿ ಹೆಚ್ಚಿಸುವಂತೆ ಸ್ವಾಮೀಜಿ ಧರಣಿ ಮಾಡ್ತಿದ್ದಾರೆ. ಬಿಜೆಪಿ ಸರ್ಕಾರ ಬಂದರೆ ಮೀಸಲಾತಿ ಕೊಡಿಸುವುದಾಗಿ ಹೇಳಿದ್ದೆ.  ಸಮುದಾಯಕ್ಕೆ ಅವಮಾನವಾದರೆ ರಾಜೀನಾಮೆ ನೀಡುತ್ತೇನೆ. ಕಾರಣಾಂತರದಿಂದ ಮೀಸಲಾತಿ ವಿಚಾರ ತಡವಾಗುತ್ತಿದೆ - ಕೂಡ್ಲಿಗಿಯಲ್ಲಿ ಸಚಿವ ಶ್ರೀರಾಮುಲು

ST Reservation ಮೀಸಲಾತಿ ವಿಚಾರ: ಬೆಂಗಳೂರಿನಲ್ಲಿ ಅಕ್ಟೋಬರ್ 8ರಂದು ಸರ್ವಪಕ್ಷಗಳ ಸಭೆ
ಮೀಸಲಾತಿ ವಿಚಾರ: ಬೆಂಗಳೂರಿನಲ್ಲಿ ಅಕ್ಟೋಬರ್ 8ರಂದು ಸರ್ವಪಕ್ಷಗಳ ಸಭೆ
Edited By:

Updated on: Sep 26, 2022 | 3:15 PM

ವಿಜಯನಗರ: ಕಗ್ಗಂಟಾಗಿ ಕಾಡುತ್ತಿರುವ ಮೀಸಲಾತಿ ವಿಚಾರವನ್ನು (ST Reservation) ಇತ್ಯರ್ಥಪಡಿಸಲು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಅಕ್ಟೋಬರ್ 8ರಂದು (October 8) ಸರ್ವಪಕ್ಷಗಳ ಸಭೆ ಕರೆದಿದೆ. ಸರ್ವಪಕ್ಷ ಸಭೆಯಲ್ಲಿ (All party meeting) ಸಲಹೆ ಪಡೆದು ಮೀಸಲಾತಿ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ವಿಜಯನಗರ ಜಿಲ್ಲೆ ಕೂಡ್ಲಿಗಿಯಲ್ಲಿ ಸಾರಿಗೆ ಸಚಿವ ಬಿ. ಶ್ರೀರಾಮುಲು (B Sriramulu) ಹೇಳಿದ್ದಾರೆ. ಮೀಸಲಾತಿ ವಿಚಾರದಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ. ನಮ್ಮ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದೆ. ST ಮೀಸಲಾತಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಸ್ವಾಮೀಜಿ, ಸಮುದಾಯದ ಹಿರಿಯರು ರಾಜಕೀಯ ಮಾಡಬಾರದು ಎಂದು ಪುನರುಚ್ಛರಿಸಿದ ಸತೀಶ್ ಜಾರಕಿಹೊಳಿಯಿಂದ ವಾಲ್ಮೀಕಿ ಜಯಂತಿ ಬಹಿಷ್ಕಾರಕ್ಕೆ ಕರೆ ನೀಡಿರುವುದನ್ನು ಪ್ರಸ್ತಾಪಿಸಿ ನಾನು ಸತೀಶ್ ಜಾರಕಿಹೊಳಿಯಷ್ಟು ದೊಡ್ಡವನಲ್ಲ. ಅವರಿಗೆ ಅವಮಾನ ಮಾಡಲ್ಲ ಎಂದರು.

ಸಮುದಾಯಕ್ಕೆ ಅವಮಾನವಾದರೆ ರಾಜೀನಾಮೆ ನೀಡುತ್ತೇನೆ:

ಎಸ್​ಟಿ ಮೀಸಲಾತಿ ಹೆಚ್ಚಿಸುವಂತೆ ಸ್ವಾಮೀಜಿ ಧರಣಿ ಮಾಡ್ತಿದ್ದಾರೆ. ಬಿಜೆಪಿ ಸರ್ಕಾರ ಬಂದರೆ ಮೀಸಲಾತಿ ಕೊಡಿಸುವುದಾಗಿ ಹೇಳಿದ್ದೆ. ಎಸ್​​ಟಿ ಸಮುದಾಯಕ್ಕೆ ಅವಮಾನ ಮಾಡುವುದಿಲ್ಲ. ಸಮುದಾಯಕ್ಕೆ ಅವಮಾನವಾದರೆ ರಾಜೀನಾಮೆ ನೀಡುತ್ತೇನೆ. ಕಾರಣಾಂತರದಿಂದ ಮೀಸಲಾತಿ ವಿಚಾರ ತಡವಾಗುತ್ತಿದೆ. 75 ವರ್ಷದ ಬಳಿಕ ಎಸ್ಸಿ ಸಮುದಾಯದ ಮಹಿಳೆ ರಾಷ್ಟ್ರಪತಿ ಗಳಾಗಿದ್ದಾರೆ. ಅವರಿಂದ ಇಂದು ದಸರಾ ಉದ್ಘಾಟನೆಗೊಂಡಿದೆ. ಅಲ್ಪಸಂಖ್ಯಾತ ಸಮುದಾಯದ ಅಬ್ದುಲ್ ಕಲಾಂ, ಹಿಂದುಳಿದ ವರ್ಗದ ಕೋವಿಂದ್ ಅವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿದ್ದು ಬಿಜೆಪಿ. ಮೀಸಲಾತಿ ವಿಚಾರದಲ್ಲಿ ನಾವು ಕೊಟ್ಟ ಮಾತು ತಪ್ಪೋದಿಲ್ಲ ಎಂದು ಕೂಡ್ಲಿಗಿಯಲ್ಲಿ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದರು.

ಒಬ್ಬ ದೊಡ್ಡ ಮನುಷ್ಯ (ಶಾಸಕ ನಾಗೇಂದ್ರ) 2018ರಲ್ಲಿ ಕೂಡ್ಲಿಗಿ ಬಿಟ್ಟು ಹೋದ್ರು. ಆಗ ನಮಗೆ ಕಣ್ಣಿಗೆ ಕಂಡಿದ್ದೇ ಎನ್. ವೈ. ಗೋಪಾಲಕೃಷ್ಣ. ಅವರನ್ನು ಕೂಡ್ಲಿಗಿ ಜನರು ಗೆಲ್ಲಿಸಿದ್ರು. ಮಂತ್ರಿಯಾಗಬೇಕಂದ್ರೇ ಕೆಲವರ ಮನವೊಲೈಕೆ ಮಾಡಬೇಕು. ಆದ್ರೇ ಗೋಪಾಲ ಕೃಷ್ಣ ಹಾಗೆ ಮಾಡಲ್ಲ, ಹೀಗಾಗಿ ಆರು ಬಾರಿ ಗೆದ್ದರೂ ಮಂತ್ರಿಯಾಗಿಲ್ಲ ಎಂದು ರಾಮುಲು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.