ಜನಪ್ರತಿನಿಧಿಗಳು ಒಪ್ಪಿದರೆ ಮತ್ತೆ ಬಳ್ಳಾರಿ ಅಖಂಡ ಜಿಲ್ಲೆ: ಸಚಿವ ನಾಗೇಂದ್ರ

ವಿಜಯನಗರ ಜಿಲ್ಲೆಯನ್ನ ಮತ್ತೆ ಬಳ್ಳಾರಿಗೆ ಸೇರ್ಪಡೆ ಮಾಡಲು ಎಲ್ಲ ಜನಪ್ರತಿನಿಧಿಗಳು ಒಪ್ಪಿದರೇ ತೀರ್ಮಾನ ಕೈಗೊಳ್ಳಲು ಸಿದ್ದ ಎಂದು ಸಚಿವ ನಾಗೇಂದ್ರ ಹೇಳಿದ್ದಾರೆ.

ಜನಪ್ರತಿನಿಧಿಗಳು ಒಪ್ಪಿದರೆ ಮತ್ತೆ ಬಳ್ಳಾರಿ ಅಖಂಡ ಜಿಲ್ಲೆ: ಸಚಿವ ನಾಗೇಂದ್ರ
ಸಚಿವ ನಾಗೇಂದ್ರ
Follow us
ವಿವೇಕ ಬಿರಾದಾರ
|

Updated on: Jun 06, 2023 | 1:49 PM

ಬಳ್ಳಾರಿ: ದೊಡ್ಡ ಜಿಲ್ಲೆಯಾಗಿದ್ದ ಬಳ್ಳಾರಿಯನ್ನು (Bellary) ಎರಡು ಜಿಲ್ಲೆಗಳನ್ನಾಗಿ ಮಾಡಲಾಗಿದೆ. ಇದೀಗ ಮತ್ತೆ ಬಳ್ಳಾರಿ ಜಿಲ್ಲೆಯಲ್ಲಿ ನೂತನ ವಿಜಯನಗರ (Vijayanagr) ಜಿಲ್ಲೆಯನ್ನು ವಿಲೀನ ಮಾಡುವ ವಿಚಾರವಾಗಿ ಕ್ರೀಡಾ ಮತ್ತು ಯುವಜನ ಇಲಾಖೆ ಸಚಿವ ನಾಗೇಂದ್ರ (Nagendra) ಮಾತನಾಡಿ ವಿಜಯನಗರ ಜಿಲ್ಲೆಯನ್ನ ಮತ್ತೆ ಬಳ್ಳಾರಿಗೆ ಸೇರ್ಪಡೆ ಮಾಡಲು ಎಲ್ಲ ಜನಪ್ರತಿನಿಧಿಗಳು ಒಪ್ಪಿದರೇ ತೀರ್ಮಾನ ಕೈಗೊಳ್ಳಲು ಸಿದ್ದ. ಅಖಂಡ ಬಳ್ಳಾರಿ ಜಿಲ್ಲೆಯನ್ನಾಗಿ ಮಾಡಲು ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿ ಚರ್ಚೆ ಮಾಡುವೆ ಎಂದು ಕ್ರೀಡಾ ಮತ್ತು ಯುವಜನ ಇಲಾಖೆ ಸಚಿವ ನಾಗೇಂದ್ರ ಹೇಳಿದ್ದಾರೆ.

2021ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೆಬ್ರವರಿ 8ರಂದು ಬಳ್ಳಾರಿಯಿಂದ ವಿಜಯನಗರವನ್ನು ಬೇರ್ಪಡಿಸಿ ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆ ಮಾಡಲಾಯಿತು. 2021ಅಕ್ಟೋಬರ್ 2 ರಿಂದ ರಾಜ್ಯದ 31ನೇ ಜಿಲ್ಲೆಯಾಗಿ ಕಾರ್ಯಾರಂಭ ಮಾಡಿತು. ಆದರೆ ಇದಕ್ಕೆ ಸಚಿವ ನಾಗೇಂದ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಮತ್ತೆ ಅಖಂಡ ಬಳ್ಳಾರಿ ಜಿಲ್ಲೆಯನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು.

ಇದನ್ನೂ ಓದಿ: ಬಳ್ಳಾರಿಯಲ್ಲಿ ಸಚಿವನನ್ನೇ ಸೋಲಿಸಿದ ಕೈ ಶಾಸಕನಿಗೆ ಸ್ಕೆಚ್​: ಸೋಲಿನ ಹತಾಶೆಯಿಂದ ಮಚ್ಚು ಬೀಸಲು ಯತ್ನ, ಶಾಸಕ ಜಸ್ಟ್ ಮಿಸ್!

ಇದೀಗ ವಿಜಯನಗರ ಜಿಲ್ಲೆಯನ್ನ ಮತ್ತೆ ಬಳ್ಳಾರಿಗೆ ಸೇರ್ಪಡೆ ಮಾಡಲು ಸಚಿವರು ಉತ್ಸಾಹ ತೋಡಿದ್ದು, ವಿಜಯನಗರ ಜಿಲ್ಲೆಯನ್ನ ಬಳ್ಳಾರಿಗೆ ಸೇರ್ಪಡೆ ಮಾಡಿ ಅಖಂಡ ಬಳ್ಳಾರಿ ಜಿಲ್ಲೆಯನ್ನಾಗಿ ಮಾಡಲು ಕಂಕಣ ಕಟ್ಟಿಕೊಂಡಿದ್ದಾರೆ.

ಇನ್ನು ವಿಜಯನಗರ ಜಿಲ್ಲೆ ಸ್ಥಾಪನೆ ವಿಚಾರವಾಗಿ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ಮಾಜಿ ಸಚಿವ ಆನಂದಸಿಂಗ್ ರಾಜೀನಾಮೆ ನೀಡಿದ್ದರು. ನಂತರ ವಿಜಯನಗರ ಜಿಲ್ಲೆ ಸ್ಥಾಪನೆಯಾಗದ ಪರಿಣಾಮ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ
‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ