AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು, ನಾಳೆ ವಿದ್ಯುತ್ ವ್ಯತ್ಯಯ

ಬೆಂಗಳೂರು ಪವರ್ ಕಟ್: ಬೆಂಗಳೂರಿನಲ್ಲಿ ಬೆಸ್ಕಾಂನಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಅಕ್ಟೋಬರ್ 29 ಮತ್ತು 30 ರಂದು 100 ಕ್ಕೂ ಅಧಿಕ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಕೆಪಿಟಿಸಿಎಲ್ ವತಿಯಿಂದ ನಡೆಯುತ್ತಿರುವ ಈ ಕಾಮಗಾರಿಯಿಂದಾಗಿ 5 ಗಂಟೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗಲಿದೆ.

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು, ನಾಳೆ ವಿದ್ಯುತ್ ವ್ಯತ್ಯಯ
ಅಕ್ಟೋಬರ್ 29 ಮತ್ತು 30ರಂದು ಬೆಂಗಳೂರಿನಲ್ಲಿ ಪವರ್ ಕಟ್
ಭಾವನಾ ಹೆಗಡೆ
|

Updated on:Oct 29, 2025 | 9:50 AM

Share

ಬೆಂಗಳೂರು, ಅಕ್ಟೋಬರ್ 29: ಬೆಂಗಳೂರಿನಲ್ಲಿ ಬೆಸ್ಕಾಂನಿಂದ (BESCOM) ಕಂಚೀಪುರ, ಡಿ.ಟಿ. ವಟ್ಟಿ, ಕೈನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಲಾ‌ರ್ ಪವರ್ ಪ್ಲಾಂಟ್‌ನ ವಿದ್ಯುತ್ ಮಾರ್ಗದಲ್ಲಿ ದುರಸ್ತಿ ಕಾರ್ಯ ನಿರ್ವಹಿಸುವುದರಿಂದ ಅಕ್ಟೋಬರ್ 29 ಮತ್ತು 30 ರಂದು 100 ಕ್ಕೂ ಅಧಿಕ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, 66/11 ಕೆ.ವಿ ಕಂಚೀಪುರ ವಿದ್ಯುತ್ ವಿತರಣಾ ಕೇಂದ್ರದ ಐಪಿ ಹಾಗೂ ನಿರಂತರ ಜ್ಯೋತಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಶ್ರೀರಾಂಪುರ ಬೆಸ್ಕಾಂ ಎಇಇ ಪ್ರಕಟಣೆಯಲ್ಲಿ ತಿಳಿಸಿದೆ.

ಎಲ್ಲೆಲ್ಲಿ ಪವರ್ ಕಟ್?

ಹಳೆಯ ಬೈಯಪ್ಪನಹಳ್ಳಿ, ನಾಗೇನ್ಪಾಳ್ಯ, ಸತ್ಯನಗರ, ಗಜೇಂದ್ರನಗರ, ಎಸ್. ಕುಮಾರ್ ಲೇಔಟ್, ಆಂಧ್ರ ಬ್ಯಾಂಕ್ ರಸ್ತೆ, ಕುಕ್ಸನ್ ರಸ್ತೆ, ರಿಚರ್ಡ್ಸ್ ಪಾರ್ಕ್ ರಸ್ತೆ, ಆಯಿಲ್ ಮಿಲ್ ರಸ್ತೆ, ಸದಾಶಿವ ದೇವಸ್ಥಾನ ರಸ್ತೆ, ಕಾಮನಹಳ್ಳಿ ಮುಖ್ಯ ರಸ್ತೆ, ಕೆಎಚ್ಬಿ ಕಾಲೋನಿ, ಜೈಭಾರತ್ ನಗರ, ಸಿ.ಕೆ. ಗಾರ್ಡನ್, ಡಿ’ಕೋಸ್ಟಾ ಲೇಔಟ್, ಹಚಿನ್ಸ್ ರಸ್ತೆ, ಉತ್ತರ ರಸ್ತೆ, ವೀಲರ್ ರಸ್ತೆ, ಅಶೋಕ ರಸ್ತೆ, ಮಸೀದಿ ರಸ್ತೆ, ರತ್ನಸಿಂಗ್ ರಸ್ತೆ, ಮೂರ್ ರಸ್ತೆ, ದೊಡ್ಡಿ, ಎನ್ಸಿ ಕಾಲೋನಿ, ಗಿಡ್ಡಪ್ಪ ಬ್ಲಾಕ್, ಎಕೆ ಕಾಲೋನಿ, ಹೊಸ ಬಾಗಲೂರು ಎಲ್/ಒ, ಹಳೆಯ ಬಾಗಲೂರು ಎಲ್/ಒ, ಭಾರತಮಠ ಎಲ್/ಒ, ಪಿಳ್ಳನಗರಡೆನ್ 3 ನೇ ಹಂತ, ರೈಲ್ವೆ ಎಲ್/ಒ, ಮಾರುತಿ ಸೇವಾನಗರ, ಜೈ ಭಾರತ್ ನಗರ, ಫ್ರೇಜರ್ ಟೌನ್ ಕಡೆ ಪವರ್ ಕಟ್ ಇರುತ್ತದೆ.

ಕಾಕ್ಸ್ ಟೌನ್, ಬೆನ್ಸನ್ ಟೌನ್, ರಿಚರ್ಡ್ಸ್ ಟೌನ್, ಮಸೀದಿ ರಸ್ತೆ, ಬಿಯಪ್ಪನ ಹಳ್ಳಿ, ಹಲ್ಸೂರು, ಆರ್ ಕೆ ರಸ್ತೆ, ಕೋಲ್ಸ್ ರಸ್ತೆ, ಟ್ಯಾನರಿ ರಸ್ತೆ, ಬಾಣಸವಾಡಿ ರೈಲ್ವೆ ನಿಲ್ದಾಣ ರಸ್ತೆ, ಮರಿಯಮ್ಮ ದೇವಸ್ಥಾನ ಬೀದಿ, ಲಾಜರ್ ಲೇಔಟ್, ವಿವೇಕಾನಂದ ನಗರ, ಕ್ಲೈನ್ ರಸ್ತೆ, ಟೆಲಿಫೋನ್ ಎಕ್ಸ್‌ಚೇಂಜ್ ರಸ್ತೆ, ಗ್ಯಾಂಗ್ಮೆನ್ ಕ್ವಾರ್ಟರ್ಸ್, ಹಚಿನ್ಸ್ ರಸ್ತೆ ಪಾರ್ಕ್ ರಸ್ತೆ, ದೇಶೀಯನಗರ ಸ್ಲಮ್, 5 ನೇ ಮತ್ತು 6 ನೇ ಕ್ರಾಸ್ ಹಚಿನ್ಸ್ ರಸ್ತೆ, ದೈಹಿಕ ಅಂಗವಿಕಲ (ಎಪಿಡಿ) ಸಂಸ್ಥೆ, ಲಿಂಗರಾಜಪುರ, ಕರಿಯನಪಾಳ್ಯ, ರಾಮಚಂದ್ರಪ್ಪ ಲೇಔಟ್, ಕರಮಚಂದ್ ಲೇಔಟ್, ಸಿಎಂಆರ್ ಲೇಔಟ್, ಶ್ರೀನಿವಾಸ ಲೇಔಟ್, ಸ್ಪೆಕ್ಟ್ರಾ ಅಪಾರ್ಟ್‌ಮೆಂಟ್‌ಗಳು, ಮಿಲ್ಟನ್ ಸ್ಟ್ರೀಟ್, ಪುರವಂಕರ ಅಪಾರ್ಟ್‌ಮೆಂಟ್‌, ಐಟಿಸಿ ಮುಖ್ಯ ರಸ್ತೆ, ಜೀವನಹಳ್ಳಿ, ಫೇರ್ಮಾಂಟ್ ಟವರ್ಸ್ (ಐಟಿಸಿ), ಲೂಯಿಸ್ ರಸ್ತೆ, ಕೃಷ್ಣಪ್ಪ ಗಾರ್ಡನ್, ರಾಘವಪ್ಪ ಗಾರ್ಡನ್, ಬಿಬಿಎಂಪಿ ಸರ್ಕಾರಿ ಆಸ್ಪತ್ರೆ, ಶ್ರೀ ಧರಿಯಂ ಕಣ್ಣಿನ ಆಸ್ಪತ್ರೆ, ಹೀರಾಚಂದ್ ಲೇಔಟ್ ಪ್ರದೇಶದಲ್ಲೂ ಪವರ್ ಕಟ್ ಇರಲಿದೆ.

ಎಚ್‌ಡಿ -87 ಓರಿಯನ್ ಮಾಲ್, ಬಾಣಸವಾಡಿ ಮುಖ್ಯ ರಸ್ತೆ, ತ್ಯಾಗರಾಜ ಲೇಔಟ್ (ಪ್ರೇಮ ಕರಿಯಪ್ಪ), ಮುದಪ್ಪ ರಸ್ತೆ, ಕೆಂಪಣ್ಣ ರಸ್ತೆ, ರಾಘವಪ್ಪ ರಸ್ತೆ, ಮುಕುಂದ ಥಿಯೇಟರ್, ಪವನ್ ನರ್ಸಿಂಗ್ ಹೋಂ, ಪೋಸ್ಟ್ ಆಫೀಸ್ ರಸ್ತೆ, ವೆಂಕಟರಮಣ ಲೇಔಟ್, MSO ಕಾಲೋನಿ, MEG ಆಫೀಸರ್ಸ್ ಕಾಲೋನಿ, ಪ್ರಣವ್ ಡಯಾಗ್ನೋಸ್ಟಿಕ್ಸ್, ಸೇಂಟ್ ಜಾನ್ಸ್ ರಸ್ತೆ, ರುಕ್ಮಿಣಿ ಕಾಲೋನಿ, ಮಾಮುಂಡಿ ಪಿಳ್ಳೈ ಬೀದಿ, ಡೇವಿಸ್ ರಸ್ತೆ, ಹಾಲ್ ರಸ್ತೆ, ರೋಜರ್ ರಸ್ತೆ, ಪಿಳ್ಳನಗರಡೆನ್ 1ನೇ ಹಂತ, ಹೊಸ ಬಾಗಲೂರು ಲೇಔಟ್, ಚಿನಪ್ಪ ಉದ್ಯಾನ, SK ಉದ್ಯಾನ, ಹ್ಯಾರಿಸ್ ರಸ್ತೆ, ಬೋರ್ ಬ್ಯಾಂಕ್ ರಸ್ತೆ, ಮುದಮ್ಮ ಉದ್ಯಾನ, ವೀಲರ್ಸ್ ರಸ್ತೆ, ದೊಡ್ಡಿಗುಂಟ, ಸುಂದರಮೂರ್ತಿ ರಸ್ತೆ, ತಂಬುಚಟ್ಟಿ ರಸ್ತೆ, ಸಿಂಧಿ ಕಾಲೋನಿ, ಆಸ್ಸಿ ರಸ್ತೆ, ಸಿಸಿ ರಸ್ತೆ, ಆರ್ಕೆ ರಸ್ತೆ, ಆಸ್ಸಿ ರಸ್ತೆ, ಟ್ಯಾಂಕ್ ರಸ್ತೆ, ನ್ಯೂ ಅವೆನ್ಯೂ ರಸ್ತೆ, ಪಿಎಸ್ಕೆ ನಾಯ್ಡು ರಸ್ತೆ, ಎಂಎಂ ರಸ್ತೆ, ಕೆಂಚಪ್ಪ ರಸ್ತೆ, ಲಾಜರ್ ರಸ್ತೆ, ಸ್ಟೆಫೆನ್ಸ್ ರಸ್ತೆ ಈ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಎಷ್ಟು ಗಂಟೆ ವಿದ್ಯುತ್ ವ್ಯತ್ಯ?

ಗುರುವಾರದಂದು ಬೆಳಗ್ಗೆ 11:00 ಗಂಟೆಯಿಂದ ಸಂಜೆ 04:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ಸಂಬಂಧಿತ ದೂರು ನೀಡಲು ಸಂಪರ್ಕಿಸಿ

ವಿದ್ಯುತ್ ಸಂಪರ್ಕ ಸಂಬಂಧಿತ ದೂರುಗಳನ್ನು ವಾಟ್ಸ್​ಆ್ಯಪ್ ಮೂಲಕವೇ ನೀಡಬಹುದು.ಬೆಸ್ಕಾಂ ಸಹಾಯವಾಣಿ ಸಂಖ್ಯೆಗಳ ವಿವರವನ್ನೂ ನೀಡಿದೆ.

ಬೆಂಗಳೂರು ನಗರ

ದಕ್ಷಿಣ ವೃತ್ತ : 8277884011

ಪಶ್ಚಿಮ ವೃತ್ತ:8277884012

ಪೂರ್ವ ವೃತ್ತ : 8277884013

ಉತ್ತರ ವೃತ್ತ :8277884014

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:16 am, Wed, 29 October 25