ಬೆಂಗಳೂರು, ಮೇ 15: ಬೆಂಗಳೂರು ನಗರ ಪೊಲೀಸರು (police) ತಮ್ಮ ಕೆಲಸ ಮತ್ತು ಜೀವನದ ಸಮತೋಲನವನ್ನು ಸುಧಾರಿಸಲು ಹಾಗೂ ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಮಹಿಳಾ ಅಧಿಕಾರಿಗಳ ಮಕ್ಕಳಿಗಾಗಿ ಡೇ ಕೇರ್ ಕೇಂದ್ರಗಳನ್ನು (daycare centres) ಸ್ಥಾಪಿಸಲಾಗಿದೆ. ಆ ಮೂಲಕ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳೆಯರಿಗೆ ಸಿಹಿ ಸುದ್ದಿ ನೀಡಲಾಗಿದೆ. ಕೆಲಸದ ಜೊತೆಗೆ ಮಕ್ಕಳನ್ನ ನೋಡಿಕೊಳ್ಳಲು ಮಹಿಳಾ ಸಿಬ್ಬಂದಿಗೆ ಅವಕಾಶ ನೀಡಲಾಗಿದೆ. 5 ವರ್ಷದೊಳಗಿನ ಮಕ್ಕಳ ಪಾಲನೆಗೆ ನೂತನ ಡೇಕೇರ್ ಸ್ಥಾಪಿಸಲಾಗಿದೆ.
ಪೊಲೀಸ್ ಆಯುಕ್ತರ ಕಚೇರಿಯಲ್ಲೇ ನೂತನವಾಗಿ ಡೇ ಕೇರ್ ನಿರ್ಮಿಸಲಾಗಿದ್ದು, ಕೆಲಸ ಒತ್ತಡದಲ್ಲಿರುವ ಪೋಷಕರ ಮಕ್ಕಳ ಬಗ್ಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಕಾಳಜಿ ವಹಿಸಿದ್ದಾರೆ. ಇಲಾಖೆಯ ಡೇಕೇರ್ನಲ್ಲಿ 30 ಮಕ್ಕಳ ಪಾಲನೆ ಮಾಡಲು ಸ್ಥಳಾವಕಾಶ ಇದೆ.
Behind every brave officer is a supportive, loving mom! Sending endless appreciation to all the moms who go above and beyond every single day. You’re the heart and soul of our community. Happy Mother’s Day!#MothersDay #motherhood #WeServeWeProtect
ಪ್ರತಿಯೊಬ್ಬ ಧೈರ್ಯಶಾಲಿ ಪೊಲೀಸ್… pic.twitter.com/d2scYvbRj7
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) May 12, 2024
ಒಂದು ವರ್ಷದ ಒಳಗಿನ ಮಕ್ಕಳ ಪಾಲನೆ ಮಾಡಲು ತೊಟ್ಟಿಲು, ಐದು ವರ್ಷದ ಮಕ್ಕಳು ಆಟವಾಡಲು ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು ಖುಷಿಪಡಿಸುವಂತಹ ವರ್ಣರಂಜಿತ ಕಾರ್ಟೂನ್ ಪೇಂಟಿಂಗ್ ಮಾಡಲಾಗಿದ್ದು, ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಆಟದ ಜೊತೆ ಪಾಠ ಕಲಿಯಲು ವ್ಯವಸ್ಥೆ ಮಾಡಲಾಗಿದೆ. ಕಮಿಷನರ್ ದಯಾನಂದ ನಡೆಗೆ ಮಹಿಳಾ ಪೊಲೀಸ್ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: SSLC Exam: ಕನ್ನಡ ಮಾಧ್ಯಮದಲ್ಲಿ ಓದಿರೋ ಸಾವಿರಾರು ವಿದ್ಯಾರ್ಥಿಗಳೇ ಕನ್ನಡ ವಿಷಯದಲ್ಲಿ ಫೇಲ್!
ಈ ಉಪಕ್ರಮವು ಮಹಿಳಾ ಅಧಿಕಾರಿಗಳು ತಮ್ಮ ಕರ್ತವ್ಯಗಳಿಗೆ ಹಾಜರಾಗುವಾಗಲೂ ಅನುಕೂಲಕರವಾದ ಶಿಶುಪಾಲನಾ ಆಯ್ಕೆಯನ್ನು ಒದಗಿಸುವ ಮೂಲಕ ಅವರನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.
ಈ ಕುರಿತಾಗಿ ವಿಧಾನಸೌಧದ ವಿವಿಐಪಿ ಸೆಕ್ಯುರಿಟಿ ವಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್‌ಸ್ಟೆಬಲ್ ಶೀಲಾ ಕುಮಾರಿ ಪ್ರತಿಕ್ರಿಯಿಸಿದ್ದು, ತಮಗೆ ಪುಟ್ಟ ಮಗುವಿದ್ದು, ಮಗುವಿನೊಂದಿಗೆ ಕರ್ತವ್ಯಕ್ಕೆ ಬರುವಾಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೆ. ಮಗುವನ್ನು ಮನೆಯಲ್ಲಿ ಬಿಡಲು ಸಾಧ್ಯವಿಲ್ಲ. ಏಕೆಂದರೆ ಆರೈಕೆ ಮಾಡಲು ಯಾರೂ ಇಲ್ಲ ಮತ್ತು ಮಗುವನ್ನು ಕೆಲಸದ ಸ್ಥಳಕ್ಕೆ ಕರೆತರುವುದು ಸಹ ಕಷ್ಟಕರವಾಗಿತ್ತು. ಏಕೆಂದರೆ ಮಗುವಿನ ಬಗ್ಗೆ ನಿರಂತರವಾಗಿ ಯೋಚಿಸುವಾಗ ಕೆಲಸದ ಮೇಲೆ ಕೇಂದ್ರೀಕರಿಸುವುದು ಕಷ್ಟ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮುಂಬೈ ದುರ್ಘಟನೆ ಬಳಿಕ ಎಚ್ಚೆತ್ತುಕೊಳ್ಳದ ಬಿಬಿಎಂಪಿ; ಬೆಂಗಳೂರಿನಲ್ಲೂ ಬಲಿಗಾಗಿ ಕಾದು ಕುಂತಿವೆ ಬೃಹತ್ ಹೋರ್ಡಿಂಗ್ಸ್
ಈ ಕುರಿತಾಗಿ ಬೆಂಗಳೂರು ನಗರ ಪೊಲೀಸ್ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಪ್ರತಿಯೊಬ್ಬ ಧೈರ್ಯಶಾಲಿ ಪೊಲೀಸ್ ಅಧಿಕಾರಿ ಹಿಂದೆ ಪ್ರೀತಿಸುವ ಮತ್ತು ಪ್ರೋತ್ಸಾಹಿಸುವ ತಾಯಿ ಇದ್ದೇ ಇರುತ್ತಾಳೆ. ಪ್ರತಿನಿತ್ಯ ಯಾವುದೇ ತರಹದ ತ್ಯಾಗಕ್ಕೂ ಸಿದ್ಧವಿರುವಂತಹ ಎಲ್ಲಾ ತಾಯಂದಿರಿಗೆ ಅಪರಿಮಿತ ಪ್ರಶಂಸೆ ಸಲ್ಲಿಸುತ್ತಿದ್ದೇವೆ. ನಮ್ಮ ಸಮುದಾಯದ ಆತ್ಮ ಹಾಗೂ ಹೃದಯ ನೀವೇ ಆಗಿದ್ದೀರಿ’. ತಾಯಂದಿರ ದಿನದ ಶುಭಾಶಗಳನ್ನು ತಿಳಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:22 pm, Wed, 15 May 24