ಬೆಂಗಳೂರು, ಮೇ 17: ರಾಜ್ಯ ರಾಜಧಾನಿ ಬೆಂಗಳೂರು (Bangaluru) ಹಲವಾರು ವಿಚಾರಗಳಿಗೆ ಸಾಕಷ್ಟು ಫೇಮಸ್. ಹೀಗಾಗಿ ಸಿಲಿಕಾನ್ ಸಿಟಿಯನ್ನು ಎಲ್ಲರೂ ಇಷ್ಟ ಪಡುತ್ತಾರೆ. ಬೇರೆ ಬೇರೆ ರಾಜ್ಯಗಳಿಂದ ಬಂದ ಜನರು ಇಲ್ಲಿ ನೆಲೆ ಕಂಡುಕೊಂಡಿದ್ದಾರೆ. ಆದರೆ ಇಂತಹ ಉದ್ಯಾನ ನಗರಿ ಬೆಂಗಳೂರು ಬದುಕಲು ಯೋಗ್ಯವಲ್ಲದ ಪಟ್ಟಿಗೆ ಸೇರಿಕೊಳ್ಳುತ್ತಿದೆ ಎಂದರೆ ನೀವು ನಂಬಲೇ ಬೇಕು. ಮುಂದಿನ 5 ವರ್ಷದಲ್ಲಿ ಬೆಂಗಳೂರು ವಾಸಕ್ಕೆ ಯೋಗ್ಯವಲ್ಲದ ನಗರವಾಗಲಿದೆ ಎಂಬ ಆಘಾತಕಾರಿ ವಿಚಾರವೊಂದು ಇದೀಗ ಚರ್ಚೆ ಹುಟ್ಟುಹಾಕಿದೆ.
ಐಐಟಿ ಮದ್ರಾಸ್ನ ಹಳೆಯ ವಿದ್ಯಾರ್ಥಿನಿ ಅಂಜಲಿ ಲಾಲ್ ಎಂಬುವವರು ಈ ಕುರಿತಾಗಿ ಟ್ವೀಟ್ ಮಾಡಿದ್ದು, ಸಾಕಷ್ಟು ವೈರಲ್ ಆಗುತ್ತಿದೆ. ಬೆಂಗಳೂರು ಮುಂದಿನ ಐದು ವರ್ಷಗಳಲ್ಲಿ ದೆಹಲಿಯಂತೆ ಬದುಕಲು ಯೋಗ್ಯವಾಗಿರುವುದಿಲ್ಲ. ಹಾಗಾದರೆ ಜನರೇ, ನಾವೆಲ್ಲರೂ ಯಾವ ನಗರಕ್ಕೆ ಹೋಗಲು ಸಿದ್ದರಾಗುತ್ತಿದ್ದೇವೆ ಮತ್ತು ಅಲ್ಲಿ ಕೂಡ ಬದುಕಲು ಸಾಧ್ಯವಿಲ್ಲ? ಎಂದು ಬರೆದುಕೊಂಡಿದ್ದಾರೆ.
Bangalore is not going to be liveable in next 5 years.
Just like Delhi isn’t now.Folks, which city we all planning to go to and make unliveable next?
— Anjali Lal (@AnjaliLal14) May 16, 2024
ಭಾರತದ ಬಹುತೇಕ ಮೆಟ್ರೋ ಪಾಲಿಟನ್ ನಗರಗಳಲ್ಲಿ ಮಾಲಿನ್ಯ, ಸಂಚಾರ ದಟ್ಟಣೆ, ಜನಸಂಖ್ಯೆ ಮತ್ತು ನೀರಿನ ಕೊರತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳಿಂದು ತುಂಬಿತುಳುಕುತ್ತಿವೆ. ಇದೆಲ್ಲದರ ಮಧ್ಯೆ ಇದೀಗ ಮುಂದಿನ 5 ವರ್ಷದಲ್ಲಿ ಬೆಂಗಳೂರು ವಾಸಕ್ಕೆ ಯೋಗ್ಯವಲ್ಲ ಎಂಬ ಐಐಟಿ ವಿದ್ಯಾರ್ಥಿನಿಯ ಟ್ವೀಟ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ: ವಾರದ ನಂತರ ಮತ್ತೆ ಓಪನ್ ಆದ ಮಂತ್ರಿ ಮಾಲ್; ಕೋರ್ಟ್ ಸೂಚನೆಯಂತೆ ಬೀಗ ತೆಗೆದ ಬಿಬಿಎಂಪಿ
ನೀವು ಮುಂಬೈಯಂತಹ ನಗರಗಳಲ್ಲಿ ನಿಮ್ಮ ಜೀವನದ ಬಹುಪಾಲು ಅಲ್ಲಿಯೇ ವಾಸವಾಗಿದ್ದರೆ, ಬೆಂಗಳೂರು ನಿಮಗೆ ವಾಸಕ್ಕೆ ಯೋಗ್ಯ ನಗರವಾಗಿ ಕಾಣಿಸುವುದಿಲ್ಲ ಎಂದು ಎಕ್ಸ್ ಬಳಕೆದಾರರೊಬ್ಬರು ಕಿಡಿಕಾರಿದ್ದಾರೆ.
ಉತ್ತರ ಭಾಗದವರು ಬೆಂಗಳೂರನ್ನು ಯಾವಾಗಲು ದೂರುತ್ತಾರೆ. ಇದು ಎಂದಿಗೂ ಮುಗಿಯುದಿಲ್ಲ. ಮತ್ತೊಬ್ಬರು ದೆಹಲಿ ಸಂಪೂರ್ಣವಾಗಿ ವಾಸಕ್ಕೆ ಯೋಗ್ಯವಾಗಿದೆ. ಆದರೆ 2 ತಿಂಗಳು ಮಾತ್ರ ಹೊರಗಿನ ಗಾಳಿಯನ್ನು ಉಸಿರಾಡಬೇಡಿ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸೀಟ್ ಬೆಲ್ಟ್ ಧರಿಸದೇ ಪ್ರಯಾಣಿಸಿದರೆ ಫೈನ್ ಪಕ್ಕ; 16 ದಿನದಲ್ಲಿ 12 ಸಾವಿರ ಕೇಸ್
ಬೆಂಗಳೂರು ಮತ್ತು ದೆಹಲಿಯ ಸಮಸ್ಯೆಗಳು ನಾಗರಿಕ ಪ್ರಜ್ಞೆಗೆ ಬಿಟ್ಟಿದ್ದು. ಪ್ರತಿ ವ್ಯಕ್ತಿಗೆ ಅತ್ಯುನ್ನತ ಶಿಕ್ಷಣವಾಗಿರುವ ಬೆಂಗಳೂರು ನಾಗರಿಕ ಪ್ರಜ್ಞೆಯಲ್ಲಿ ದೆಹಲಿಗೆ ಸರಿಸಮಾನವಾಗಿದೆ. ದುರದೃಷ್ಟವಶಾತ್ ಮುಂಬೈ ವ್ಯವಸ್ಥಿತ ಭ್ರಷ್ಟಾಚಾರದಿಂದ ಕುಡಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.