
ರಾಯಚೂರು, ಆ.11: ಸದ್ಯ ಬಾಂಗ್ಲಾದಲ್ಲಿ ಹೊತ್ತಿ ಉರಿದ ಗಲಭೆ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆಯೂ ಇದೇ ರೀತಿ ಅತೀ ದೊಡ್ಡ ಗಲಭೆಗಳು ನಡೆದಿವೆ. ಅದರಲ್ಲಿ ಅಳಿದು ಉಳಿದವರೇ ಈಗ ರಾಯಚೂರು(Raichur) ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಆರ್ಎಚ್ ಕ್ಯಾಂಪ್ಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ಬಾಂಗ್ಲಾ ನಿರಾಶ್ರಿತರೆಲ್ಲಾ ಭಾರತಕ್ಕೆ ಬಂದಿದ್ದು 1970ರಲ್ಲಿ. ಅಂದು ಕೂಡ ಇದೇ ರೀತಿ ಗಲಾಟೆಗಳು ನಡೆದಿದ್ದು, ಆಗ ಹಿಂದೂಗಳನ್ನ ಟಾರ್ಗೆಟ್ ಮಾಡಿ ಟಾರ್ಚರ್ ನೀಡಲಾಗ್ತಿತ್ತಂತೆ. ಹೀಗಾಗಿ 1970ರಲ್ಲಿ ಬಾಂಗ್ಲಾ ಹಾಗೂ ಬರ್ಮಾ ವಿಭಜನೆ ಸಮಯದಲ್ಲಿ ಅನ್ಯಾಯಕ್ಕೊಳಗಾದವರು ಭಾರತದಲ್ಲಿ ನೆಲೆಸಲಿಚ್ಛಿಸಿದ್ದರಿಂದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಪುನರ್ವಸತಿಗೆ ಸಮ್ಮತಿಸಲಾಗಿತ್ತು.
ಸದ್ಯ ಒಟ್ಟು 5 ಆರ್ಎಚ್ ಕ್ಯಾಂಪ್ಗಳ ಪುನರ್ವಸತಿ ಕೇಂದ್ರಗಳಲ್ಲಿ ಸುಮಾರು 20,000 ಕ್ಕೂ ಹೆಚ್ಚು ಬಾಂಗ್ಲಾ ನಿರಾಶ್ರಿತರು ವಾಸವಿದ್ದಾರೆ. ಅಂದು ಕೂಡ ಹಿಂದುಗಳ ಮೇಲೆ ದೌರ್ಜನ್ಯ ನಡೆದಿತ್ತು,ಈಗಲೂ ಅದೇ ಆಗ್ತಿದೆ ಎಂದು ಇಲ್ಲಿನ ಜನ ಅಲ್ಲಿನ ಸ್ಥಿತಿ ಗತಿಗಳ ಬಗ್ಗೆ ಹೇಳುತ್ತಿದ್ದಾರೆ. ಹೌದು, 1947 ಯಿಂದ ಈವರೆಗೂ ಬಾಂಗ್ಲಾದಲ್ಲಿ ಗಲಾಟೆಗಳು ನಡೆಯುತ್ತಲೇ ಇವೆಯಂತೆ. ಏನೇ ಆದರೂ ಹಿಂದೂಗಳ ಮೇಲೆಯೇ ದಬ್ಬಾಳಿಕೆ, ಟಾರ್ಚರ್ ಮಾಡುತ್ತಾರೆ ಎಂದು ರಾಯಚೂರಿನಲ್ಲಿರುವ ಬಾಂಗ್ಲಾ ನಿರಾಶ್ರಿತರು ಅಳಲನ್ನ ತೋಡಿಕೊಳ್ತಿದ್ದಾರೆ.
ಇದನ್ನೂ ಓದಿ:ರಾಯಚೂರು: ಸಿಂಧನೂರಿನ ಐವರಿಗೆ ಸಿಎಎ ಕಾಯ್ದೆಯಡಿ ಪೌರತ್ವ
ಬಾಂಗ್ಲಾದಲ್ಲಿ ನಡೆಯುತ್ತಿರುವ ಗಲಭೆಯಲ್ಲೂ ಹಿಂದೂಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ನಮ್ಮ ಕುಟುಂಬಸ್ಥರು ಅಲ್ಲೇ ಇದ್ದು ಅವರು ಕೂಡ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಇಲ್ಲಿನ ನಿರಾಶ್ರಿತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಬಾಂಗ್ಲಾ ನಿರಾಶ್ರಿತ ಪ್ರಣಬ್ ಬಾಲಾ ಎಂಬಾತ ಮಾತನಾಡಿ, ‘ 1962, 1964 ,1971 ಆಯ್ತು, ಬಾಬ್ರಿ ಮಸೀದಿ ಗಲಾಟೆ ಸಮಯದಲ್ಲೂ ಹಿಂದುಗಳ ಮೇಲೆಯೇ ಟಾರ್ಚರ್ ಮಾಡಲಾಗಿದೆ. ದೇವಸ್ಥಾನಗಳನ್ನ ಸುಟ್ಟು ಹಾಕ್ತಾರೆ, ಮನೆಗಳಿಗೆ ಲೂಟಿ ಮಾಡುತ್ತಾರೆ. ನಮ್ಮ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗುತ್ತಾರೆ. 1970ರಲ್ಲಿ ಈಗ ನಡೆಯುತ್ತಿರೊ ಗಲಭೆಗಿಂತ ಹೆಚ್ಚಾಗಿ ಗಲಾಟೆಗಳು ನಡೆದಿದ್ದವು. ಹೀಗಾಗಿಯೇ ನಾವು ಇಲ್ಲಿ ಬಂದು ನೆಲೆಸಿದ್ದೇವೆ. ಈಗ ನಡೆಯುತ್ತಿರೊ ಗಲಭೆಯಲ್ಲೂ ಹಿಂದುಗಳ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ ಎಂದರು.
ಸದ್ಯ ಬಾಂಗ್ಲಾದಲ್ಲಿರುವ ಹಿಂದುಗಳಿಗೆ ಪ್ರಧಾನಿ ಮೋದಿ ಅವರು ರಕ್ಷಣೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಇಲ್ಲಿನ ಜನ ಮನವಿ ಮಾಡ್ತಿದ್ದಾರೆ. ಅದೆನೆ ಇರಲಿ ನಾಲ್ಕು ದಶಕಗಳಿಂದ ಇಲ್ಲೆ ಜೀವನ ಕಂಡುಕೊಂಡಿರುವ ಈ ನಿರಾಶ್ರಿತರ ಪೈಕಿ, ಸದ್ಯ ಐದು ಜನಕ್ಕೆ ಸಿಎಎ ಅಡಿಯಲ್ಲಿ ಪೌರತ್ವ ಸಿಕ್ಕಿದೆ. ಇಲ್ಲಿನ ಉಳಿದವರು ಕೂಡ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದು, ಆ ದಾಖಲೆ ಪಡೆಯೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಆದ್ರೆ, ಇವ್ರಿಗೆ ಪೌರತ್ವ ಪಡೆದ ಖುಷಿಯ ಮಧ್ಯೆ ಬಾಂಗ್ಲಾ ಗಲಭೆಯಲ್ಲಿ ತಮ್ಮ ಸಂಬಂಧಿಕರುಗಳು ದೌರ್ಜನ್ಯ ಎದುರಿಸುತ್ತಿರೋದ್ರಿಂದ ಇವರೆಲ್ಲ ಮಂಕಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:09 pm, Sun, 11 August 24