AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ, ಗಾಯಾಳು ಪತ್ನಿ ಹೇಳಿದ್ದಿಷ್ಟು

ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ, ಗಾಯಾಳು ಪತ್ನಿ ಹೇಳಿದ್ದಿಷ್ಟು

ರಾಮು, ಆನೇಕಲ್​
| Edited By: |

Updated on:Feb 13, 2026 | 7:53 PM

Share

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರಾಣಿ ಪಾಲಕ ಶಾಂತಪ್ಪ ಚಿರತೆ ದಾಳಿಗೆ ಒಳಗಾಗಿದ್ದು, ಅವರ ಕುಟುಂಬ ಆಘಾತಕ್ಕೊಳಗಾಗಿದೆ. ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ, ಶಾಂತಪ್ಪ ಕಾಯಮಾತಿಗೊಂಡಿಲ್ಲ. ಈ ಹಿಂದೆ ಕಾಡೆಮ್ಮೆ ದಾಳಿಗೂ ಒಳಗಾಗಿದ್ದ ಇವರಿಗೆ, ಮನೆಗೆ ಅವರೇ ಆಧಾರವಾಗಿದ್ದಾರೆ. ಕುಟುಂಬವು ಈಗ ಕಾಯಮಾತಿ ಮತ್ತು ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡುತ್ತಿದೆ.

ಆನೇಕಲ್​, ಫೆಬ್ರವರಿ 13: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ ಮಾಡಿರುವಂತಹ ಘಟನೆ ನಡೆದಿದೆ. ಉದ್ಯಾನವನದ ಪ್ರಾಣಿ ಪಾಲಕ ಶಾಂತಪ್ಪ ಮೇಲೆ ಚಿರತೆ ದಾಳಿ ಮಾಡಿದ್ದು, ಮುಖ, ಕತ್ತಿನ ಭಾಗಕ್ಕೆ ಗಂಭೀರ ಗಾಯವಾಗಿದೆ. ಸದ್ಯ ಶಾಂತಪ್ಪರನ್ನ ಜಿಗಣಿಯ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಘಟನೆ ಬಗ್ಗೆ ಶಾಂತಪ್ಪ ಪತ್ನಿ ಜಯಮ್ಮ ಪ್ರತಿಕ್ರಿಯಿಸಿದ್ದು, ಬನ್ನೇರುಘಟ್ಟ ಝೂನಲ್ಲಿ ಕಳೆದ 25 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕಾಡೆಮ್ಮೆ ದಾಳಿಯಿಂದ ಗಾಯಗೊಂಡಿದ್ದರು. ಇದೀಗ ಚಿರತೆ ದಾಳಿ ಮಾಡಿದೆ. ಮನೆಗೆ ಆಧಾರವಾಗಿದ್ದಾರೆ. ಅವರನ್ನ ಖಾಯಂ ನೌಕರರನ್ನಾಗಿ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Feb 13, 2026 07:47 PM