Kannada News Karnataka BBMP implements new add act: Add allowed on govt and private buildings, Karnataka news in kannada
ಹೊಸ ಜಾಹೀರಾತು ಕಾಯ್ದೆ ಜಾರಿಗೊಳಿಸಿದ ಬಿಬಿಎಂಪಿ: ಸರ್ಕಾರಿ, ಖಾಸಗಿ ಕಟ್ಟಡಗಳ ಮೇಲೆ ಜಾಹೀರಾತಿಗೆ ಅವಕಾಶ
ವೈಜ್ಞಾನಿಕವಾಗಿ ಹಾಗೂ ನಗರದ ಸೌಂದರ್ಯ ಹಾಳಾಗದಂತೆ ಜಾಹೀರಾತು ಕಾಯ್ದೆ ಜಾರಿಗೆ ಸರ್ಕಾರ ಅನುಮೋದನೆ ನೀಡಿದೆ. ಸರ್ಕಾರದ ರಾಜ್ಯಪತ್ರದ ಮೂಲಕ ಕರಡು ಪ್ರತಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಡುಗಡೆ ಮಾಡಿದೆ. ಆಕ್ಷೇಪಣೆ ಸಲ್ಲಿಸುವುದಕ್ಕೆ ಸಾರ್ವಜನಿಕರಿಗೆ 30 ದಿನ ಕಾಲಾವಕಾಶ ನೀಡಲಾಗಿದೆ.
ಹೊಸ ಜಾಹೀರಾತು ಕಾಯ್ದೆ ಜಾರಿಗೊಳಿಸಿದ ಬಿಬಿಎಂಪಿ: ಸರ್ಕಾರಿ, ಖಾಸಗಿ ಕಟ್ಟಡಗಳ ಮೇಲೆ ಜಾಹೀರಾತಿಗೆ ಅವಕಾಶ
ಬೆಂಗಳೂರು, ಜುಲೈ 20: ವೈಜ್ಞಾನಿಕವಾಗಿ ಮತ್ತು ನಗರದ ಸೌಂದರ್ಯ ಹಾಳಾಗದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಹೊಸ ಜಾಹೀರಾತು (Advertisement) ಕಾಯ್ದೆ ಜಾರಿಗೊಳಿಸಿದೆ. ಈ ಹೊಸ ಜಾಹೀರಾತು ಕರಡು ನೀತಿಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಸರ್ಕಾರದ ರಾಜ್ಯಪತ್ರದ ಮೂಲಕ ಕರಡು ಪ್ರತಿಯನ್ನು ಪಾಲಿಕೆ ಬಿಡುಗಡೆ ಮಾಡಿದೆ. ಆಕ್ಷೇಪಣೆ ಸಲ್ಲಿಸುವುದಕ್ಕೆ ಸಾರ್ವಜನಿಕರಿಗೆ 30 ದಿನ ಕಾಲಾವಕಾಶ ನೀಡಲಾಗಿದೆ.
ಹೊಸ ಜಾಹೀರಾತು ನೀತಿಯ ಪ್ರಮುಖ ಅಂಶಗಳು
ಜಾಹೀರಾತು ಟೆಂಡರ್‌ನಲ್ಲಿ ಭಾಗವಹಿಸಲು ಪಾಲಿಕೆಯಲ್ಲಿ ನೋಂದಣಿ ಕಡ್ಡಾಯ
ಟೆಂಡರ್‌ನಲ್ಲಿ ಭಾಗವಹಿಸಲು ನೋಂದಣಿ ಶುಲ್ಕ 5 ಲಕ್ಷ ರೂ. ನಿಗದಿ ಮಾಡಲಾಗಿದೆ.
ಒಮ್ಮೆ ನೋಂದಣಿ ಪಡೆದವರು ಪ್ರತಿ 3 ವರ್ಷಕ್ಕೆ ನವೀಕರಣ ಮಾಡಬೇಕು.
ರಸ್ತೆ, ಸರ್ಕಲ್, ವಲಯವಾರು ಪ್ಯಾಕೇಜ್ ಮಾದರಿಯಲ್ಲಿ ಟೆಂಡರ್ ನೀಡಲಾಗುತ್ತದೆ.
ರಸ್ತೆ ಅಗಲ, ಸರ್ಕಲ್ ಗಾತ್ರಕ್ಕೆ ಅನುಗುಣವಾಗಿ ಜಾಹೀರಾತು ಫಲಕಕ್ಕೆ ಅವಕಾಶ.
ಒಂದು ಜಾಹೀರಾತು ಫಲಕದಿಂದ ಮತ್ತೊಂದಕ್ಕೆ 100 ಮೀಟರ್ ಅಂತರ ಕಡ್ಡಾಯ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತಿಗೆ ಕಡಿವಾಣ ಹಾಕಲು ಹಾಗೂ ಸರ್ಕಾರದ ಖಜಾನೆ ಭರ್ತಿ ಮಾಡುವ ನಿಟ್ಟಿನಲ್ಲಿ ಜಾಹೀರಾತು ನಿಯಮ ತಿದ್ದುಪಡಿ ಮಾಡಿ ಹೊಸ ಜಾಹೀರಾತು ನಿಯಮ ಜಾರಿಗೆ ತರುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತು. ಇದರ ಬೆನ್ನಲ್ಲೇ ಇಂದು ಹೊಸ ಜಾಹೀರಾತು ಕಾಯ್ದೆ ಜಾರಿ ಮಾಡಲಾಗಿದೆ.