Vegetables Price in Bangalore: ಮುಂಗಾರು ಮಳೆ ಅಬ್ಬರ, ಗಗನಕ್ಕೇರಿದ ತರಕಾರಿ ಬೆಲೆ: ಇಲ್ಲಿದೆ ದರ ಪಟ್ಟಿ
ಬೆಂಗಳೂರು ತರಕಾರಿ ದರ ಪಟ್ಟಿ: ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ಬಲು ದುಬಾರಿಯಾಗಿದ್ದ ತರಕಾರಿ ಬೆಲೆ ನಂತರ ತುಸು ಇಳಿಕೆಯಾಗಿತ್ತು. ಆದರೆ ಇದೀಗ ಮುಂಗಾರು ಮಳೆ ಆರ್ಭಟದ ಪರಿಣಾಮ ಬೆಳೆ ಹಾಳಾಗುತ್ತಿದ್ದು ಪೂರೈಕೆಗೆ ಸಮಸ್ಯೆಯಾಗಿದೆ. ಪರಿಣಾಮವಾಗಿ ತರಕಾರಿ ಬೆಲೆ ಗಗನಕ್ಕೇರಿದೆ. ತರಕಾರಿ ದರ ಪಟ್ಟಿ ಇಲ್ಲಿದೆ.
ಬೆಂಗಳೂರು, ಜುಲೈ 20: ಬೇಸಗೆಯಲ್ಲಿ ನೀರಿನ ಬಿಕ್ಕಟ್ಟು ತೀವ್ರಗೊಂಡ ಕಾರಣ ತರಕಾರಿ ಬೆಲೆ ವಿಪರೀತ ಏರಿಕೆಯಾಗಿತ್ತು. ನಂತರ ತುಸು ಇಳಿಕೆಯಾಗಿ ಹದಕ್ಕೆ ಬಂತೆನ್ನುವಷ್ಟರಲ್ಲೇ ಇದೀಗ ಮತ್ತೆ ತರಕಾರಿ ದರ ಗಗನಕ್ಕೇರಿದೆ. ಮುಂಗಾರು ಮಳೆಯ ಆರ್ಭಟಕ್ಕೆ ಬೆಳೆದ ತರಕಾರಿಗಳು ಹಾಳಾಗುತ್ತಿದ್ದು, ಬೆಲೆ ಸದ್ಯ ದುಪ್ಪಾಟ್ಟಾಗಿದೆ. ತರಕಾರಿಗಳನ್ನು ಖರೀದಿಸುವುದಕ್ಕೂ ಮೊದಲು ಯೋಚನೆ ಮಾಡುವ ಪರಿಸ್ಥಿತಿ ಎದುರಾಗಿದೆ. ಗ್ರಾಹಕರು ಬೆಲೆ ಕೇಳಿಯೇ ಸುಸ್ತಾಗುತ್ತಿದ್ದಾರೆ.
ಟೊಮೆಟೊ ಬೆಲೆ ಕೆಜಿಗೆ 100 ರ ಸಮೀಪ ಬಂದಿದ್ದು, ಕ್ಯಾರೇಟ್ ಕೆಜಿಗೆ 150 ರೂ. ಸಮೀಪ ತಲುಪಿದೆ. ಇನ್ನು ಆಲೂಗಡ್ಡೆ, ಈರುಳ್ಳಿ ಬೆಲೆ 50 ರೂ. ಗಡಿ ತಲುಪಿದ್ದು, ಬೆಳ್ಳುಳ್ಳಿ ಬೆಲೆ 200 ರೂ. ಗಡಿದಾಟಿದೆ.
ತರಕಾರಿ ಬೆಲೆ ಪಟ್ಟಿ (ದರ ಕೆಜಿಗೆ ರೂಪಾಯಿಗಳಲ್ಲಿ)
ತರಕಾರಿ | ಹಿಂದಿನ ಬೆಲೆ | ಇಂದಿನ ಬೆಲೆ |
ನಾಟಿ ಬೀನ್ಸ್ | 75 | 67 |
ಟೊಮೆಟೊ | 65 | 87 |
ಬಿಳಿ ಬದನೆ | 90 | 74 |
ಮೆಣಸಿನ ಕಾಯಿ | 80 | 75 |
ನುಗ್ಗೆ ಕಾಯಿ | – | 138 |
ಕ್ಯಾರೆಟ್ | 80 | 130 |
ನವಿಲುಕೋಸು | 80 | 48 |
ಮೂಲಂಗಿ | 70 | 42 |
ಹೀರೇಕಾಯಿ | 80 | 45 |
ಆಲೂಗಡ್ಡೆ | 40 | 59 |
ಈರುಳ್ಳಿ | 45 | 58 |
ಕ್ಯಾಪ್ಸಿಕಂ | 60 | 68 |
ಹಾಗಲಕಾಯಿ | 60 | 70 |
ಕೊತ್ತಂಬರಿ ಸೊಪ್ಪು | 40 | 70 |
ಶುಂಠಿ | 198 | 180 |
ಬೆಳ್ಳುಳ್ಳಿ | 220 | 354 |
ಪಾಲಕ್ | – | 46 |
ಪುದಿನ | – | 92 |
ಬಟಾಣಿ | 210 | 220 |
ಬೆಂಗಳೂರಿನಲ್ಲಿ ಹೆಚ್ಚಿದ ಮಳೆ
ಬೆಂಗಳೂರಿನಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಒಂದು ವಾರದಿಂದ ಮಳೆಯಾಗುತ್ತಿದೆ. ಅತ್ತ ಕರಾವಳಿ, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆ ಆರ್ಭಟಕ್ಕೆ ಅನೇಕ ಅವಾಂತರಗಳಯ ಸೃಷ್ಟಿಯಾಗಿವೆ. ಇನ್ನು ಬೆಂಗಳೂರಿನಲ್ಲಿ ಒಂದು ವಾರದಿಂದ ಸೊನೆ ಮಳೆ ಹಿಡಿದಿದೆ.
ಮುಂಗಾರು ಆರಂಭದಲ್ಲಿ ಜೂನ್ನಿಂದ ಇಂದಿನವರೆಗೂ ರಾಜ್ಯದಲ್ಲಿ ಶೇ 20 ಹೆಚ್ಚು ಮಳೆಯಾಗಿದೆ. ರಾಜ್ಯದಲ್ಲಿ ವಾಡಿಕೆ ಪ್ರಕಾರ ಜೂನ್ ಹಾಗೂ ಜುಲೈ ತಿಂಗಳಲ್ಲಿ 35 ಸೆಂಮೀ ಮೀಟರ್ ಮಳೆಯಾಗಬೇಕಿತ್ತು. ಆದರೆ ಜುಲೈ ತಿಂಗಳು ಮುಗಿಯುವುದಕ್ಕೂ ಮೊದಲೇ 42 ಸೆಂಮೀ ಮಳೆಯಾಗಿದೆ. ಅದರಲ್ಲಿ ಕರಾವಳಿ ಜಿಲ್ಲೆಯಲ್ಲೆಂತೂ ಶೇ 40 ರಷ್ಟು ಹೆಚ್ಚು ಮಳೆಯಾಗಿದೆ. ವಾಡಿಕೆ ಪ್ರಕಾರ 135 ಸೆಂಮೀ ಮಳೆಯಾಗಬೇಕಿತ್ತು. ಆದರೆ 189 ಸೆಂಮೀ ಮಳೆಯಾಗಿದೆ. ಇನ್ನು ಉತ್ತರ ಒಳನಾಡು ಒಟ್ಟು ಶೇ 16 ಮಳೆಯಾಗಿದ್ದು, ವಾಡಿಕೆ ಪ್ರಕಾರ 17 ಸೆಂಮೀ ಆಗಬೇಕಿತ್ತು. ಆದರೆ 20 ಸೆಂಮೀ ಹೆಚ್ಚು ಮಳೆಯಾಗಿದೆ. ಅಲ್ಲದೇ ದಕ್ಷಿಣ ಒಳನಾಡಿನಲ್ಲಿ ಶೇ 17 ರಷ್ಟು ಮಳೆಯಾಗಿದ್ದು, ವಾಡಿಕೆ ಪ್ರಕಾರ 27 ಸೆಂಮೀ ಮಳೆಯಾಗಬೇಕಿತ್ತು. ಆದರೆ 32 ಸೆಂಮೀ ಮಳೆಯಾಗಿದೆ.
ಇದನ್ನೂ ಓದಿ: ಪೀಣ್ಯ ಮೇಲ್ಸೇತುವೆ ಜುಲೈ ಕೊನೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ಮುಕ್ತ
ಬೆಂಗಳೂರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ
ಬೆಂಗಳೂರು ನಗರದಲ್ಲಿ ಶೇ 29 ರಷ್ಟು ಹೆಚ್ಚು ಮಳೆಯಾಗಿದ್ದು, 125 ಮಿಮೀ ಹೆಚ್ಚು ಮಳೆಯಾಗಿದೆ. ವಾಡಿಕೆಯ ಪ್ರಕಾರ 273 ಮಿ ಮೀ ಯಾಗಬೇಕಿತ್ತು. ಆದರೆ 148 ಮಿಮೀ ಮಳೆಯಾಗಿದೆ. ಬೆಂಗಳೂರು ಗ್ರಾಮಂತರದಲ್ಲಿ 12 ಸೆಂಮೀ ಮಳೆಯಾಗಬೇಕಿತ್ತು. ಆದರೆ 17 ಸೆಂ ಮೀ ಮಳೆಯಾಗಿದ್ದು ಒಟ್ಟು ಶೇ 46 ರಷ್ಟು ಹೆಚ್ಚು ಮಳೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ