ಗುರುವಾರದಿಂದ BBMP ಅಧಿಕಾರಿಗಳು, ಸಿಬ್ಬಂದಿ ಬೆಳಗ್ಗೆ 6ಕ್ಕೆ ಕೆಲಸಕ್ಕೆ ಹಾಜರ್!

|

Updated on: Nov 19, 2019 | 10:50 AM

ಬೆಂಗಳೂರು: ನಗರದ ಕಸದ ಸಮಸ್ಯೆ ನಿವಾರಣೆಗೆ ಹೊಸ ಪ್ಲ್ಯಾನ್ ರೂಪುಗೊಂಡಿದೆ. ಮೇಯರ್ ಹಾಗೂ ಕಮಿಷನರ್ ಸೇರಿ ಈ ಕಸದ ಸಮಸ್ಯೆಗೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ. ಬದಲಾಗಲಿದೆ ಅಧಿಕಾರಿ, ಸಿಬ್ಬಂದಿ ಕೆಲಸದ ಸಮಯ: ಕಸದ ಸಮಸ್ಯೆ ನಿವಾರಣೆಗೆ ಮೇಯರ್ ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ ಕೆಲಸದ ಸಮಯವನ್ನು ಬದಲಾಯಿಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದಲೇ ಕೆಲಸ ಆರಂಭವಾಗಲಿದೆ. ಇದು ಕೇವಲ ಬಿಬಿಎಂಪಿ ಸಿಬ್ಬಂದಿಗೆ ಮಾತ್ರವಲ್ಲ. ಅಧಿಕಾರಿಗಳಿಗೂ ಅನ್ವಯ. ಪ್ರತಿ ವಾರ್ಡ್ ನ ಹೆಲ್ತ್ ಇನ್ಸ್ಪೆಕ್ಟರ್, ಎಇ, ಎಇಇ, ಚೀಫ್ ಇಂಜಿನಿಯರ್, ಜಂಟಿ […]

ಗುರುವಾರದಿಂದ BBMP ಅಧಿಕಾರಿಗಳು, ಸಿಬ್ಬಂದಿ ಬೆಳಗ್ಗೆ 6ಕ್ಕೆ ಕೆಲಸಕ್ಕೆ ಹಾಜರ್!
Follow us on

ಬೆಂಗಳೂರು: ನಗರದ ಕಸದ ಸಮಸ್ಯೆ ನಿವಾರಣೆಗೆ ಹೊಸ ಪ್ಲ್ಯಾನ್ ರೂಪುಗೊಂಡಿದೆ. ಮೇಯರ್ ಹಾಗೂ ಕಮಿಷನರ್ ಸೇರಿ ಈ ಕಸದ ಸಮಸ್ಯೆಗೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ.

ಬದಲಾಗಲಿದೆ ಅಧಿಕಾರಿ, ಸಿಬ್ಬಂದಿ ಕೆಲಸದ ಸಮಯ:
ಕಸದ ಸಮಸ್ಯೆ ನಿವಾರಣೆಗೆ ಮೇಯರ್ ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ ಕೆಲಸದ ಸಮಯವನ್ನು ಬದಲಾಯಿಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದಲೇ ಕೆಲಸ ಆರಂಭವಾಗಲಿದೆ. ಇದು ಕೇವಲ ಬಿಬಿಎಂಪಿ ಸಿಬ್ಬಂದಿಗೆ ಮಾತ್ರವಲ್ಲ. ಅಧಿಕಾರಿಗಳಿಗೂ ಅನ್ವಯ.

ಪ್ರತಿ ವಾರ್ಡ್ ನ ಹೆಲ್ತ್ ಇನ್ಸ್ಪೆಕ್ಟರ್, ಎಇ, ಎಇಇ, ಚೀಫ್ ಇಂಜಿನಿಯರ್, ಜಂಟಿ ಆಯುಕ್ತ, ವಿಶೇಷ ಆಯುಕ್ತರು ಸೇರಿದಂತೆ ಕಮಿಷನರ್ ಕೂಡಾ ಬೆಳಗ್ಗೆ ಆರು ಗಂಟೆಗೆ ಕೆಲಸಕ್ಕೆ ಹಾಜರಿರಬೇಕು. ಪ್ರತಿ ರಸ್ತೆ, ಬೀದಿ, ಏರಿಯಾದ ಕಸ ವಿಲೇವಾರಿ ಮಾಡಿಸಬೇಕು. ಬೆಳಗ್ಗೆ ಆರು ಗಂಟೆಗೆ ಡ್ಯೂಟಿಗೆ ಹಾಜರಾಗದಿದ್ರೆ ಪರ್ಮನೆಂಟ್ ಮನೆಗೆ ಕಳಿಸಲಾಗುತ್ತೆ.

ಇಂದೋರ್ ಪದ್ಧತಿ ಅಳವಡಿಸಿದ ಬಿಬಿಎಂಪಿ
ಬೆಳಗ್ಗೆ 6 ಗಂಟೆಯಿಂದ 9 ಗಂಟೆವರೆಗೂ ನಗರದ ಸ್ವಚ್ಛತೆಯ ಕೆಲಸ ಮಾಡಬೇಕು. 11 ಗಂಟೆಯಿಂದ ರೆಗ್ಯೂಲರ್ ಡ್ಯೂಟಿ. ಗುರುವಾರದಿಂದ ಬಿಬಿಎಂಪಿಯಲ್ಲಿ ಹೊಸ ಡ್ಯೂಟಿ ಟೈಮ್ ಶುರುವಾಗಲಿದ್ದು, ಇಂದೋರ್ ಪದ್ಧತಿಯನ್ನ ಅಳವಡಿಸಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.

Published On - 6:47 am, Tue, 19 November 19