ಕೊರೊನಾ ಬಹುತೇಕ ಶೂನ್ಯ, ಮಾಸ್ಕ್ ಹಾಕದಿದ್ದರೆ ಇನ್ನು ಮುಂದೆ ಬಿಬಿಎಂಪಿ ದಂಡ ವಸೂಲಿ ಮಾಡುವುದಿಲ್ಲ!

BBMP mask: ಮಾಸ್ಕ್ ಹಾಕದವರಿಂದ ಕಟ್ಟುನಿಟ್ಟಾಗಿ ದಂಡ ವಸೂಲಿ ಮಾಡದಂತೆ ಸೂಚಿಸಿರುವ ಬಿಬಿಎಂಪಿ, ಭಾಗಶಃ ಜನರು ಮಾಸ್ಕ್ ಧರಿಸುತ್ತಿದ್ದು, ಸೋಂಕಿನ ಪ್ರಮಾಣ ತಗ್ಗಿದೆ. ಅಂದಹಾಗೆ ಬಿಬಿಎಂಪಿ ಮೇ 2020 ರಿಂದ ಮಾಸ್ಕ್ ಹಾಕದವರಿಂದ ದಂಡ ವಸೂಲಿ ಮಾಡುತ್ತಿತ್ತು. ಮೇ 2020 ರಿಂದ ಇದೂವರೆಗೂ 14,03,09,197 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಕೊರೊನಾ ಬಹುತೇಕ ಶೂನ್ಯ, ಮಾಸ್ಕ್ ಹಾಕದಿದ್ದರೆ ಇನ್ನು ಮುಂದೆ ಬಿಬಿಎಂಪಿ ದಂಡ ವಸೂಲಿ ಮಾಡುವುದಿಲ್ಲ!
ಕೊರೊನಾ ಬಹುತೇಕ ಶೂನ್ಯ, ಮಾಸ್ಕ್ ಹಾಕದವರಿಂದ ಇನ್ನು ಮುಂದೆ ಬಿಬಿಎಂಪಿ ದಂಡ ವಸೂಲಿ ಮಾಡುವುದಿಲ್ಲ!
Edited By:

Updated on: Oct 20, 2021 | 10:36 AM

ಬೆಂಗಳೂರು: ಒಂದೆರಡು ವರ್ಷಗಳಿಂದ ಕೊರೊನಾ ಮಹಾಮಾರಿತಿಂದ ಕಂಗೆಟ್ಟಿದ್ದ ಜನಕ್ಕೆ ಮಾಸ್ಕ್​ ಎಂಬುದು ಅನಿವಾರ್ಯವಾಗಿತ್ತು. ಮತ್ತು ಅದನ್ನು ಕಡ್ಡಾಯಗೊಳಿಸಲಾಗಿತ್ತು. ಇಲ್ಲದಿದ್ದರೆ ದಂಡ ಕಟ್ಟಿಟ್ಟಬುತ್ತಿ ಎಂಬಂತಾಗಿತ್ತು. ಇದರಿಂದ ದಂಡ ಕಟ್ಟುವ ಪರಿಸ್ಥಿತಿ ಎದುರಾದಾಗ ಕೊರೊನಾ ಕಾಡಿದಷ್ಟೇ ಕಾಟವನ್ನು ಅನುಭವಿಸಿದ್ದರು ಜನ. ಆದರೆ ಪರಿಸ್ಥಿತಿ ಈಗ ತಿಳಿಯಾಗುತ್ತಿದೆ. ಈ ಸಂದರ್ಭದಲ್ಲಿ ಮಾಸ್ಕ್ ಹಾಕದವರಿಂದ ದಂಡ ವಸೂಲಿಗೆ ತಾತ್ಕಾಲಿಕ ಬ್ರೇಕ್ ನೀಡುವ ಸಾಧ್ಯತೆಗಳು ಗೋಚರವಾಗಿವೆ.

ಕೊರೊನಾ ಕಾಟವೂ ತಪ್ಪಿತು; ಮಾಸ್ಕ್​ ಕಾಟವೂ ತಪ್ಪಿತು?
ಇಷ್ಟು ದಿನ ಭೀಕರ ಕೊರೊನಾ ಭೀತಿಯ ಹಿನ್ನೆಲೆ ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿತ್ತು. ಮಾರ್ಷೆಲ್ ಗಳಿಂದ ಮಾಸ್ಕ್ ಹಾಕದವರಿಂದ ನೂರಾರು ರೂಪಾಯಿ ವಸೂಲಿ ಮಾಡಿಸುತ್ತಿತ್ತು. ಆದರೆ ಈಗ ಬದಲಾದ ಪರಿಸ್ಥಿತಿಯಲ್ಲಿ ಕೊರೊನಾ ಸೋಂಕು ಬಹುತೇಕ ಶೂನ್ಯ ಪ್ರಮಾಣಕ್ಕೆ ಕುಸಿದಿರುವಾಗ ಕಟ್ಟುನಿಟ್ಟಾಗಿ ದಂಡ ವಸೂಲಿ ಮಾಡದಂತೆ ಮಾರ್ಷೆಲ್ ಗಳಿಗೆ ಬಿಬಿಎಂಪಿ ಮೌಖಿಕ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಮಾಸ್ಕ್ ಹಾಕದವರಿಂದ ಕಟ್ಟುನಿಟ್ಟಾಗಿ ದಂಡ ವಸೂಲಿ ಮಾಡದಂತೆ ಸೂಚಿಸಿರುವ ಬಿಬಿಎಂಪಿ, ಭಾಗಶಃ ಜನರು ಮಾಸ್ಕ್ ಧರಿಸುತ್ತಿದ್ದು, ಸೋಂಕಿನ ಪ್ರಮಾಣ ತಗ್ಗಿದೆ. ಹೀಗಾಗಿ ಮಾಸ್ಕ್ ಹಾಕದವರಿಗೆ ದಂಡ ಹಾಕದಂತೆ ಮಾರ್ಷೆಲ್ ಗಳಿಗೆ ಸೂಚನೆ‌ ನೀಡಲಾಗಿದೆ. ಅಂದಹಾಗೆ ಬಿಬಿಎಂಪಿ ಮೇ 2020 ರಿಂದ ಮಾಸ್ಕ್ ಹಾಕದವರಿಂದ ದಂಡ ವಸೂಲಿ ಮಾಡುತ್ತಿತ್ತು. ಮೇ 2020 ರಿಂದ ಇದೂವರೆಗೂ 14,03,09,197 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಇದೀಗ ಮಾಸ್ಕ್ ದಂಡ ಪ್ರಯೋಗಕ್ಕೆ ಬಿಬಿಎಂಪಿ ತಾತ್ಕಾಲಿಕ ವಿರಾಮ ನೀಡಿದೆ.

ಇದನ್ನೂ ಓದಿ:
Bad Breath Problem: ನಿಮ್ಮ ಮಾಸ್ಕ್ ಒಳಗೆ ದುರ್ವಾಸನೆಯೇ? ಕೆಟ್ಟ ಉಸಿರಾಟ ಸಮಸ್ಯೆಗೆ ಪರಿಹಾರ ಕ್ರಮಗಳೇನು ಯೋಚಿಸಿದ್ದೀರಾ?

ಪೊಲೀಸರ ತಪಾಸಣೆ ವೇಳೆ ಕಾರು ನಿಲ್ಲಿಸದೆ ಪರಾರಿಗೆ ಯತ್ನಿಸಿದವ್ರು ಅರೆಸ್ಟ್| GanjaSeeze |Tv9kannada

(BBMP not to fine maskless people strictly orders marshals not to fine people without masks)