AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು: ಸರ್ಕಲ್​​ನಲ್ಲಿ ಹಾಕಲಾಗಿದ್ದ ಶಾಸಕ ಹ್ಯಾರಿಸ್​ ಫೋಟೋ ತೆರವು

ಸರ್ಕಲ್​​ನಲ್ಲಿ ಫೋಟೋ ಹಾಕಿದ್ದ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರವಾಗಿತ್ತು. ಟಿವಿ9 ವರದಿ ಬಳಿಕ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್​ ಫೋಟೋ ತೆರವುಗೊಳಿಸಿದ್ದಾರೆ.

ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು: ಸರ್ಕಲ್​​ನಲ್ಲಿ ಹಾಕಲಾಗಿದ್ದ ಶಾಸಕ ಹ್ಯಾರಿಸ್​ ಫೋಟೋ ತೆರವು
ಸರ್ಕಲ್​​ನಲ್ಲಿ ಹಾಕಲಾಗಿದ್ದ ಶಾಸಕ ಹ್ಯಾರಿಸ್​ ಫೋಟೋ ತೆರವು
KUSHAL V
|

Updated on:Feb 26, 2021 | 11:24 PM

Share

ಬೆಂಗಳೂರು: ಟಿವಿ9 ವರದಿ ಬೆನ್ನಲ್ಲೇ ಶಾಸಕ ಹ್ಯಾರಿಸ್​ ಫೋಟೋವನ್ನು ತೆರವು ಮಾಡಲಾಗಿದೆ. ಶಾಂತಿನಗರ ಕ್ಷೇತ್ರದ ನೀಲಸಂದ್ರ ವಾರ್ಡ್​​ನ ಸರ್ಕಲ್​​ನಲ್ಲಿ ಹಾಕಲಾಗಿದ್ದ ಫೋಟೋವನ್ನು BBMP ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಸರ್ಕಲ್​​ಗೆ ಸ್ಥಳೀಯರು ಶಾಸಕ ಹ್ಯಾರಿಸ್​ ಹೆಸರು ಇಟ್ಟಿದ್ದರು. ಇನ್ನು, ಸರ್ಕಲ್​​ನಲ್ಲಿ ಫೋಟೋ ಹಾಕಿದ್ದ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರವಾಗಿತ್ತು. ಟಿವಿ9 ವರದಿ ಬಳಿಕ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್​ ಫೋಟೋ ತೆರವುಗೊಳಿಸಿದ್ದಾರೆ.

NA HARRIS CIRCLE 1

ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ BBMP ಅಧಿಕಾರಿಗಳು

ಅಂದ ಹಾಗೆ, ಈ ಹಿಂದೆ, ವರನಟ ಡಾ. ರಾಜ​ಕುಮಾರ್​ ಪ್ರತಿಮೆ ವೀಕ್ಷಣೆ ಸಂದರ್ಭದಲ್ಲಿ ಶಾಂತಿನಗರ ಕಾಂಗ್ರೆಸ್​ ಶಾಸಕ ಎನ್​.ಎ. ಹ್ಯಾರಿಸ್​ ವಿವಾದಾತ್ಮಕವಾಗಿ ಮಾತನಾಡಿರುವ ವಿಡಿಯೋ ಈಗಾಗಲೇ ಎಲ್ಲೆಡೆ ವೈರಲ್​ ಆಗಿತ್ತು. ಈ ಬಗ್ಗೆ ಸ್ಪಷ್ಟೀಕರಣ ನೀಡುತ್ತಾ ‘ಯಾರೋ ವಿಡಿಯೋ ಎಡಿಟ್ ಮಾಡಿದ್ದಾರೆ. ಆದರೂ ನಾನು ಇದಕ್ಕೆ ಕ್ಷಮೆ ಯಾಚಿಸುತ್ತೇನೆ’ ಎಂದು ಹೇಳಿದ್ದರು. ಈ ಕುರಿತಂತೆ ಹ್ಯಾರಿಸ್ ಕ್ಷಮೆ ಯಾಚಿಸಲೇ ಬೇಕು ಎಂದು ಡಾ.ರಾಜಕುಮಾರ್ ಅಭಿಮಾನಿಗಳು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ಗರುಡಾ ಮಾಲ್ ಬಳಿ ಅಭಿಮಾನಿಗಳೆಲ್ಲ ಜಮಾಯಿಸಿದ್ದರು. ಹ್ಯಾರಿಸ್ ಮನೆ ಮುಂದೆ ಪ್ರತಿಭಟನೆ ನಡೆಸಲು ಅಭಿಮಾನಿಗಳು ಸಜ್ಜಾಗಿದ್ದರು. ಹ್ಯಾರಿಸ್ ಕ್ಷಮೆ ಕೇಳಲೇಬೇಕು, ಅಣ್ಣಾವ್ರ ಅಭಿಮಾನಿಗಳು ಎಂದೆಂದೂ ಸತ್ತಿಲ್ಲ, ಅಣ್ಣಾವ್ರ ಅಭಿಮಾನಿಗಳನ್ನ ಕೆಣಕಿದರೆ ಕ್ರಾಂತಿ – ಕ್ಷಮೆ ಕೇಳಿದರೆ ಶಾಂತಿ ಎಂದು ಘೋಷಣೆ ಕೂಗುತ್ತಾ ಅಭಿಮಾನಿಗಳೆಲ್ಲ ಆಕ್ರೋಶ ವ್ಯಕ್ತಪಡಿಸಿದ್ದರು.

ಕ್ಷಮೆಯಲ್ಲಿ ಹ್ಯಾರಿಸ್​ ಹೇಳಿದ್ದೇನು? ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರೆ ಕ್ಷಮೆ ಇರಲಿ. ಅಣ್ಣಾವ್ರನ್ನ ತುಂಬಾ ಹತ್ತಿರದಿಂದ ನೋಡಿದ್ದೇನೆ. ಅಣ್ಣಾವ್ರ ಬಗ್ಗೆ ನಾನು ಮಾತಾಡಿಲ್ಲ ಎಂದು ಕಾಂಗ್ರೆಸ್​ ಶಾಸಕ ಎನ್​.ಎ. ಹ್ಯಾರಿಸ್ ಪ್ರತಿಭಟನಾ ನಿರತ ಡಾ.ರಾಜಕುಮಾರ್ ಅಭಿಮಾನಿಗಳಿಗೆ ಕ್ಷಮೆ ಯಾಚಿಸಿದ್ದರು. ನಾನು ಯಾವುದೇ ದುರುದ್ದೇಶದಿಂದ ಮಾತನಾಡಿಲ್ಲ. ನನ್ನ ಹೇಳಿಕೆ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡಿದ್ದರೆ ಕ್ಷಮೆ ಇರಲಿ. ಅಣ್ಣಾವ್ರನ್ನ ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಅಣ್ಣಾವ್ರ ಪ್ರತಿಮೆ ಇಡುವ ಬಗ್ಗೆ ನನ್ನ ಬೆಂಬಲವೂ ಇದೆ. ಕನ್ನಡನಾಡಿನಲ್ಲಿ ನಾನು ಇದ್ದೇನೆ ಕನ್ನಡಕ್ಕಾಗಿ ಸದಾ ಸೇವೆ ಸಲ್ಲಿಸುತ್ತೇನೆ. ನಾನೂ ಕೂಡಾ ಅಣ್ಣಾವ್ರ ದೊಡ್ಡ ಅಭಿಮಾನಿ. ಸಂಘದಲ್ಲಿ ಅವಕಾಶ ಕೊಟ್ಟರೆ ಪದಾಧಿಕಾರಿ ಆಗ್ತೀನಿ. ಎಲ್ಲರೆದುರು ಬಹಿರಂಗವಾಗಿ ಸೋಷಿಯಲ್​ ಮೀಡಿಯಾದಲ್ಲಿ ನಾನು ಕ್ಷಮೆ ಕೇಳಿದ್ದೀನಿ. ನಿಮಗೂ ಹೇಳ್ತಿದಿನಿ ಕ್ಷಮೆ ಇರಲಿ ಎಂದು ಮನವಿ ಮಾಡಿದ್ದರು.

ಎನ್​.ಎ. ಹ್ಯಾರಿಸ್ ಹೇಳಿಕೆಗೆ ರಾಜ್ ಅಭಿಮಾನಿಗಳ ಆಕ್ರೋಶ ವ್ಯಕ್ತವಾಗಲು ಕಾರಣ? ಡಾ. ರಾಜ​​ಕುಮಾರ್​ ಪ್ರತಿಮೆ ನೋಡಲು ಹ್ಯಾರಿಸ್ ಹೋಗಿದ್ದರು. ಈ ವೇಳೆ ಮಾತನಾಡಿದ್ದ ಹ್ಯಾರಿಸ್, ಸ್ಟ್ಯಾಚ್ಯು ಇಡುವುದೇ ದೊಡ್ಡ ಕತೆ. ಅದರಲ್ಲಿ ಆಫೀಸ್ ಬೇರೆ ಮಾಡಿಕೊಡುವುದಕ್ಕೆ ಆಗುತ್ತಾ? ಈ ಪ್ರತಿಮೆಗೆ ಕವರ್​ ಏನು ಬೇಕಾಗುವುದಿಲ್ಲ. ಓಪನ್ ಆಗಿ ಇಡಿ. ಸ್ಟ್ಯಾಚ್ಯುಗೆಲ್ಲಾ ಕವರ್ ಯಾಕ್ ಬೇಕು? ಪ್ರೊಟೆಕ್ಷನ್ ಬೇಕಿದ್ದರೆ ಮನೆಯಲ್ಲೇ ಇಟ್ಟಿದ್ದರೆ ಆಗಿರುತ್ತಿತ್ತು. ರೋಡಲ್ಲಿ ಯಾಕೆ ಇಡುತ್ತಾರೆ? ಬುದ್ಧಿ ಇಲ್ಲ, ಏನ್ ಮಾಡೋದು? ಏನಾದರೂ ಹೇಳಿದರೆ ಅದನ್ನು ಬೇರೆ ರೀತಿಯಲ್ಲೇ ತೆಗೆದುಕೊಳ್ಳುತ್ತಾರೆ ಎಂದಿದ್ದರು.

ಇದನ್ನೂ ಓದಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ: ಮಹಜರಿಗೆ ಕರೆತಂದಾಗ ಕಟ್ಟಡದಿಂದ ಕೆಳಗೆ ಹಾರಿ ಸೂಸೈಡ್​!

Published On - 11:21 pm, Fri, 26 February 21

ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,