ಬಿಬಿಎಂಪಿಯ 8 ವಲಯಗಳ ತೆರಿಗೆ ಬಾಕಿದಾರರ ಪಟ್ಟಿ ರಿಲೀಸ್: ಇಲ್ಲಿದೆ ವಲಯವಾರು ಅಂಕಿ-ಅಂಶ

ಆಸ್ತಿ ತೆರಿಗೆ ‘‘ಒಂದು ಬಾರಿ ಪರಿಹಾರ ಯೋಜನೆ’’ ಕಾಲಾವಕಾಶವನ್ನು ಇತ್ತೀಚೆಗೆ ವಿಸ್ತರಣೆ ಮಾಡಲಾಗಿದೆ. ಇದೀಗ ಬಿಬಿಎಂಪಿ 8 ವಲಯಗಳ ತೆರಿಗೆ ಬಾಕಿದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೆಂಗಳೂರಿಗರು ಲಕ್ಷ ಲಕ್ಷ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಪುಟ್ಟೇನಹಳ್ಳಿಯ ಪ್ರೈಂಕೋ ಲಿಮಿಟೆಡ್​ ಬರೋಬ್ಬರಿ 22 ಲಕ್ಷದ 87 ಸಾವಿರದ 225 ರೂ.ತೆರಿಗೆ ಬಾಕಿ ಇದೆ.

ಬಿಬಿಎಂಪಿಯ 8 ವಲಯಗಳ ತೆರಿಗೆ ಬಾಕಿದಾರರ ಪಟ್ಟಿ ರಿಲೀಸ್: ಇಲ್ಲಿದೆ ವಲಯವಾರು ಅಂಕಿ-ಅಂಶ
ಬಿಬಿಎಂಪಿಯ 8 ವಲಯಗಳ ತೆರಿಗೆ ಬಾಕಿದಾರರ ಪಟ್ಟಿ ರಿಲೀಸ್: ಇಲ್ಲಿದೆ ವಲಯವಾರು ಅಂಕಿ-ಅಂಶ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Aug 28, 2024 | 6:18 PM

ಬೆಂಗಳೂರು, ಆಗಸ್ಟ್​​ 28: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (BBMP) 8 ವಲಯಗಳ ತೆರಿಗೆ ಬಾಕಿದಾರರ ಪಟ್ಟಿಯನ್ನು ಬುಧವಾರ ಬಿಡುಗಡೆಗೊಳಿಸಿದೆ. ಎಂಟು ವಲಯಗಳಿಂದ ಕೋಟಿ ಕೋಟಿ ರೂ. ತೆರಿಗೆ ಹಣ ಬಾಕಿ ಇದ್ದು, ಪ್ರತಿ ವಲಯದಲ್ಲೂ 50 ತೆರಿಗೆ ಬಾಕಿದಾರರ ಮಾಹಿತಿ ಪ್ರಕಟ ಮಾಡಲಾಗಿದೆ. ಒಟಿಎಸ್ ಸೌಲಭ್ಯ ನೀಡಿದ್ದರೂ ಬಾಕಿ ಹಣ ಬೊಕ್ಕಸಕ್ಕೆ ಬಂದಿಲ್ಲ. ಪುಟ್ಟೇನಹಳ್ಳಿಯ ಪ್ರೈಂಕೋ ಲಿಮಿಟೆಡ್​ನಿಂದ ಬರೋಬ್ಬರಿ 22 ಲಕ್ಷದ 87 ಸಾವಿರದ 225 ರೂ.ತೆರಿಗೆ ಬಾಕಿ ಇದೆ.

ವಲಯವಾರು ಒಟ್ಟು ತೆರಿಗೆ ಬಾಕಿ

  • ಬೊಮ್ಮನಹಳ್ಳಿ ವಲಯ: 7 ಕೋಟಿ 27 ಲಕ್ಷದ 51 ಸಾವಿರ ರೂ.
  • ಪೂರ್ವ ವಲಯ: 7 ಕೋಟಿ 49 ಲಕ್ಷದ 50 ಸಾವಿರ ರೂ.
  • ಮಹದೇವಪುರ ವಲಯ: 4 ಕೋಟಿ 74 ಲಕ್ಷದ 87 ಸಾವಿರ ರೂ.
  • ದಕ್ಷಿಣ ವಲಯ: 47, 81,75 ರೂ.
  • ಯಲಹಂಕ ವಲಯ: 2,79,44 ರೂ.

ಇದನ್ನೂ ಓದಿ: ಆಸ್ತಿ ತೆರಿಗೆ ಮೂಲಕ ಬಿಬಿಎಂಪಿ ಬೊಕ್ಕಸಕ್ಕೆ ಹರಿದುಬಂತು ಕೊಟ್ಯಾಂತರ ರೂ. ಹಣ: ಜುಲೈ ವರೆಗಿನ ಕಲೆಕ್ಷನ್ ಇಲ್ಲಿದೆ

ಆಸ್ತಿ ತೆರಿಗೆ ಸಂಗ್ರಹ ವಿಚಾರವಾಗಿ ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್​ ಮಾತನಾಡಿ, ಇಲ್ಲಿವರೆಗೆ ಸುಮಾರು 3 ಸಾವಿರ ಕೋಟಿಯಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಹೆಚ್ಚುವರಿಯಾಗಿ 400 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಆಸ್ತಿ ತೆರಿಗೆ ಹೆಚ್ಚಳದ ಬಗ್ಗೆ ಸ್ಪಷ್ಟನೆ ನೀಡಿದ ಬಿಬಿಎಂಪಿ, 5% ರಿಯಾಯಿತಿ ಅವಧಿ ವಿಸ್ತರಣೆ

ಒಟಿಎಸ್ ಕಾಲಾವಧಿ ಒಂದು ತಿಂಗಳು ವಿಸ್ತರಣೆ ಮಾಡಬೇಕು ಎಂದು ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಒತ್ತಡ ಬರುತ್ತಿದೆ. ಸರ್ವರ್ ಸಮಸ್ಯೆಗಳಿದ್ದು, ಕೆಲವರು ಚೆಕ್ ಮೂಲಕ ಪಾವತಿ ಮಾಡಿದ್ದರಿಂದ ವಿಸ್ತರಣೆಯ ಅಗತ್ಯವಿತ್ತು. ಜುಲೈ 31ರವರೆಗೆ ನೀಡಲಾಗಿದ್ದ ಕಾಲಾವಧಿಯನ್ನು ಒಂದು ತಿಂಗಳ ಕಾಲ ಅಂದರೆ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದರು.

ಪ್ರತಿ 8 ವಲಯಗಳ ಪ್ರಮುಖ 100 ಅತ್ಯಧಿಕ ಆಸ್ತಿ ತೆರಿಗೆ ಬಾಕಿ ಆಸ್ತಿಗಳ ಪಟ್ಟಿ ಇಲ್ಲಿದೆ. https://bbmptax.karnataka.gov.in/documents/DefaulterslistZones1.pdf

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:11 pm, Wed, 28 August 24

ಕೆಟ್ಟ ಕಮೆಂಟ್ ಮಾಡ್ತೀರಾ? ರಕ್ಷಕ್ ಬುಲೆಟ್​ ಏನ್ ಹೇಳ್ತಾರೆ ಸ್ವಲ್ಪ ಕೇಳಿ..
ಕೆಟ್ಟ ಕಮೆಂಟ್ ಮಾಡ್ತೀರಾ? ರಕ್ಷಕ್ ಬುಲೆಟ್​ ಏನ್ ಹೇಳ್ತಾರೆ ಸ್ವಲ್ಪ ಕೇಳಿ..
ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ
ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ
ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು
ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ ದಿನಾಂಕ ಯಾವುದು ಗೊತ್ತಾ?
ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್​ಐಆರ್
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ
ಆರ್​ಎಸ್ಎಸ್, ಬಿಜೆಪಿ ವಿರುದ್ಧ ಎಂ ಲಕ್ಷ್ಮಣ್ ಗಂಭೀರ ಆರೋಪ
ವಿಡಿಯೋ ನೋಡಿ - ಪಪ್ಪಾಯಿ ಹಣ್ಣಿನಲ್ಲಿ ವಿಚಿತ್ರ ವಿನಾಯಕ!
ವಿಡಿಯೋ ನೋಡಿ - ಪಪ್ಪಾಯಿ ಹಣ್ಣಿನಲ್ಲಿ ವಿಚಿತ್ರ ವಿನಾಯಕ!