AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ತಿ ತೆರಿಗೆ ಮೂಲಕ ಬಿಬಿಎಂಪಿ ಬೊಕ್ಕಸಕ್ಕೆ ಹರಿದುಬಂತು ಕೊಟ್ಯಾಂತರ ರೂ. ಹಣ: ಜುಲೈ ವರೆಗಿನ ಕಲೆಕ್ಷನ್ ಇಲ್ಲಿದೆ

ಲಕ್ಷಕ್ಕೂ ಹೆಚ್ಚು ಜನರು ಒನ್ ಟೈಮ್ ಸೆಟಲ್​ಮೆಂಟ್ ಯೋಜನೆಯಡಿ ಆಸ್ತಿ ತೆರಿಗೆ ಪಾವತಿಸಿದ್ದು, ಹೀಗಾಗಿ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಬೊಕ್ಕಸಕ್ಕೆ 3200 ಕೋಟಿ ರೂ. ಹರಿದು ಬಂದಿದೆ ಎಂದು ಬಿಬಿಎಂಪಿ ಕಂದಾಯ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್​ ತಿಳಿಸಿದ್ದಾರೆ.

ಆಸ್ತಿ ತೆರಿಗೆ ಮೂಲಕ ಬಿಬಿಎಂಪಿ ಬೊಕ್ಕಸಕ್ಕೆ ಹರಿದುಬಂತು ಕೊಟ್ಯಾಂತರ ರೂ. ಹಣ: ಜುಲೈ ವರೆಗಿನ ಕಲೆಕ್ಷನ್ ಇಲ್ಲಿದೆ
ಆಸ್ತಿ ತೆರಿಗೆ ಮೂಲಕ ಬಿಬಿಎಂಪಿ ಬೊಕ್ಕಸಕ್ಕೆ ಹದಿದುಬಂತು ಕೊಟ್ಯಾಂತರ ರೂ. ಹಣ: ಜುಲೈನಲ್ಲಿನ ಕಲೆಕ್ಷನ್ ವಿವರ ಇಲ್ಲಿದೆ
ಗಂಗಾಧರ​ ಬ. ಸಾಬೋಜಿ
| Updated By: ರಮೇಶ್ ಬಿ. ಜವಳಗೇರಾ|

Updated on:Aug 01, 2024 | 8:43 PM

Share

ಬೆಂಗಳೂರು, ಆಗಸ್ಟ್​​ 01: ಒನ್ ಟೈಮ್ ಸೆಟಲ್​ಮೆಂಟ್​ ಆಸ್ತಿ ತೆರಿಗೆ (Property tax) ಪಾವತಿಗೆ ನೀಡಿದ್ದ ಗಡುವು ಜುಲೈ 31ರ ಬುಧವಾರ ಮುಕ್ತಾಯವಾಗಿದೆ. ಒಟಿಎಸ್ ಮೂಲಕ 1 ಲಕ್ಷ ಜನರು ತೆರಿಗೆ ಪಾವತಿಸಿದ್ದು ಆ ಮೂಲಕ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (BBMP) ಬೊಕ್ಕಸಕ್ಕೆ 3200 ಕೋಟಿ ರೂ. ಹರಿದು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 800 ಕೋಟಿ ರೂ. ಹೆಚ್ಚಳವಾಗಿದೆ ಎಂದು ಬಿಬಿಎಂಪಿ ಕಂದಾಯ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್​ ತಿಳಿಸಿದ್ದಾರೆ.

ಕಳೆದ 10-12 ದಿನಗಳಲ್ಲಿ ಸುಮಾರು 1200 ಕೋಟಿ ರೂ ಸಂಗ್ರಹಿಸಲಾಗಿದೆ. ಲಕ್ಷಕ್ಕೂ ಹೆಚ್ಚು ಜನರು ಒನ್ ಟೈಮ್ ಸೆಟಲ್​ಮೆಂಟ್ ಯೋಜನೆಯಡಿ ಆಸ್ತಿ ತೆರಿಗೆ ಪಾವತಿಸಿದ್ದು, ಹೀಗಾಗಿ ಸಂಗ್ರಹವಾದ ಒಟ್ಟು  ಮೊತ್ತದಲ್ಲಿ 380 ಕೋಟಿ ರೂ. ಓಟಿಎಸ್​ ಮೂಲಕ ಸಂಗ್ರಹವಾಗಿದೆ. ಇನ್ನೂ ಸುಮಾರು 150 ಕೋಟಿ ರೂ. ಚೆಕ್ ಮತ್ತು ಡಿಮ್ಯಾಂಡ್ ಡ್ರಾಫ್ಟ್ಗಳ ಮೂಲಕ ಸಂಗ್ರಹಿಸಲಾಗಿದೆ.

ಇದನ್ನೂ ಓದಿ: ಆಸ್ತಿ ತೆರಿಗೆ ಪಾವತಿಗೆ ನೀಡಿದ್ದ ಗಡುವು ಅಂತ್ಯ: ಪಾವತಿಸದವರಿಗೆ ಬಡ್ಡಿ ಅಸ್ತ್ರ ಪ್ರಯೋಗಕ್ಕೆ ಬಿಬಿಎಂಪಿ ಸಜ್ಜು

ಬಿಬಿಎಂಪಿಯ ಅಧಿಕಾರಿಗಳ ಮಾಹಿತಿ ಪ್ರಕಾರ ಏಪ್ರಿಲ್ 1 ರಿಂದ ಜುಲೈ 29 ರವರೆಗೆ ಆಸ್ತಿ ತೆರಿಗೆ ಪಾವತಿದಾರರ ಸಂಖ್ಯೆ ಗಮನಾರ್ಹ ಕುಸಿತ ಕಂಡಿದೆ. ಇದಕ್ಕೆ ಒನ್ ಟೈಮ್ ಸೆಟಲ್​ಮೆಂಟ್​ ಯೋಜನೆ ಕಾರಣ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬಿಬಿಎಂಪಿಯಿಂದ ಗುಡ್ ನ್ಯೂಸ್; ಶೇಕಡ 50 ರಷ್ಟು ರಿಯಾಯಿತಿ

ಇನ್ನು ಇತ್ತೀಚೆಗೆ ಬಿಬಿಎಂಪಿ ಹಂಚಿಕೊಂಡ ಮಾಹಿತಿಯ ಪ್ರಕಾರ ಬೆಂಗಳೂರಿನ ಎಂಟು ವಲಯಗಳಲ್ಲಿ ಸುಮಾರು 2.88 ಲಕ್ಷಕ್ಕೂ ಹೆಚ್ಚು ಜನರು ತೆರಿಗೆ ಪಾವತಿಸಬೇಕಿದ್ದು, 548.94 ಕೋಟಿ ರೂ. ಮೌಲ್ಯದ ಆಸ್ತಿ ತೆರಿಗೆ ಬಾಕಿ ಬಾಕಿ ಇದೆ ಎಂದು ತಿಳಿಸಿದೆ.

ಯಾವ ಯಾವ ವಲಯದಲ್ಲಿ ಎಷ್ಟು ಆಸ್ತಿ ತೆರಿಗೆ ಸಂಗ್ರಹ ಮಾಹಿತಿ ಹೀಗಿದೆ 

ವಲಯ                                        ಏಪ್ರಿಲ್ 2023-ಜುಲೈ 2023            ಏಪ್ರಿಲ್ 2024-ಜುಲೈ 2024

  • ಬೊಮ್ಮನಹಳ್ಳಿ                                   267.12  ಕೋಟಿ                                         316.10 ಕೋಟಿ
  • ದಾಸರಹಳ್ಳಿ                                         70.58   ಕೋಟಿ                                          96.21 ಕೋಟಿ
  • ಪೂರ್ವ                                                456.69 ಕೋಟಿ                                          544.46 ಕೋಟಿ
  • ಮಹದೇವಪುರ                                    643.43 ಕೋಟಿ                                          808.40 ಕೋಟಿ
  • ರಾಜರಾಜೇಶ್ವರಿನಗರ                          163.99  ಕೋಟಿ                                          212.42 ಕೋಟಿ
  • ದಕ್ಷಿಣ                                                  385.86  ಕೋಟಿ                                         459.01 ಕೋಟಿ
  • ಪಶ್ಚಿಮ                                                267.36   ಕೋಟಿ                                         337.82 ಕೋಟಿ
  • ಯಲಹಂಕ                                         202.27  ಕೋಟಿ                                          291.40 ಕೋಟಿ
  • ಒಟ್ಟು                                                  2457.30 ಕೋಟಿ                                         3065.82 ಕೋಟಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:26 pm, Thu, 1 August 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ