Kannada News Photo gallery Kerala Landslide, 6 people from Chamarajanagar who escaped from the disaster have returned, Kannada News
ಕೇರಳ ಭೂಕುಸಿತ; ದುರಂತದಿಂದ ಪಾರಾಗಿದ್ದ ಚಾಮರಾಜನಗರದ 6 ಮಂದಿ ಸ್ವಗ್ರಾಮಗಳಿಗೆ ವಾಪಾಸ್
ದೇವರನಾಡು ಕೇರಳದ ವಯನಾಡು ಜಿಲ್ಲೆಯಲ್ಲಿ ಗುಡ್ಡ ಕುಸಿದು ಈವರೆಗೂ 293 ಜನ ಸಾವನ್ನಪ್ಪಿದ್ದಾರೆ. ಅದರಲ್ಲಿ ಚಾಮರಾಜನಗರದ ಜಿಲ್ಲೆಯ ಚೂರಲಮಲದ ಚಹಾ ಎಸ್ಟೇಟ್ನಲ್ಲಿ ಕೂಲಿ ಮಾಡುತ್ತಾ ಇದ್ದ ರತ್ನಮ್ಮ ಹಾಗೂ ರಾಜೇಂದ್ರ ದಂಪತಿ ಕೂಡ ಹೌದು, ಇನ್ನುಳಿದ ಜಿಲ್ಲೆಯ 6 ಮಂದಿಯನ್ನು ಇದೀಗ ಅವರವರ ಸ್ವಗ್ರಾಮಗಳಿಗೆ ಸುರಕ್ಷಿತವಾಗಿ ವಾಪಸ್ ಕರೆದುಕೊಂಡು ಬಿಡಲಾಗಿದೆ.
ಕೇರಳದ ವಯನಾಡು ಜಿಲ್ಲೆಯಲ್ಲಿ ಗುಡ್ಡ ಕುಸಿದು ಸಾವು ನೋವು ಸಂಭವಿಸಿದೆ. ಈ ದುರಂತದಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ 293ಕ್ಕೆ ಏರಿಕೆಯಾಗದ್ದು, 200ಕ್ಕೂ ಹೆಚ್ಚು ಜನ ನಾಪತ್ತೆಯಾಗಿರುವ ಮಾಹಿತಿ ದೊರೆತಿದೆ. ಜೊತೆಗೆ ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
1 / 6
ಇಂತಹ ದುರಂತದಲ್ಲಿ ಪಾರಾಗಿದ್ದ ಚಾಮರಾಜನಗರ ಜಿಲ್ಲೆಯ 6 ಮಂದಿಯನ್ನು ಇದೀಗ ಅವರವರ ಸ್ವಗ್ರಾಮಗಳಿಗೆ ಸುರಕ್ಷಿತವಾಗಿ ವಾಪಸ್ ಕರೆದುಕೊಂಡು ಬಿಡಲಾಗಿದೆ. ಹೌದು, ಚಾಮರಾಜನಗರ ಜಿಲ್ಲಾಡಳಿತ, ಮೇಪ್ಪಾಡಿ ಕಾಳಜಿ ಕೇಂದ್ರದಿಂದ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ.
2 / 6
ಇವರೆಲ್ಲರೂ ನೆರೆ ರಾಜ್ಯ ಕೇರಳದ ಚೂರಲ್ಮಲಾ ಟೀ ಎಸ್ಟೇಟ್ಗಳಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಮಾಡಿಕೊಂಡಿದ್ದರು. ದುರಂತದಿಂದ ಪಾರಾಗಿ ಮೇಪ್ಪಾಡಿ ಕಾಳಜಿ ಕೇಂದ್ರದಲ್ಲಿ ಈ ಕಾರ್ಮಿಕರನ್ನು ಇರಿಸಲಾಗಿತ್ತು.
3 / 6
ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದ ನಾಗಶೆಟ್ಟಿ, ಗೌರಮ್ಮ, ದಿವ್ಯಾ, ಚಾಮರಾಜನಗರ ತಾಲೋಕಿನ ಮಂಗಲ ಗ್ರಾಮದ ಜಯಶ್ರೀ, ಮಂಜುಳಾ, ಹಾಗೂ ಸಿದ್ದರಾಜು ಎಂಬುವವರನ್ನು ಅಧಿಕಾರಿಗಳು ಟೆಂಪೋ ಟ್ರಾವೆಲ್ಲರ್ ಮೂಲಕ ಸ್ವಗ್ರಾಮಗಳಿಗೆ ಕರೆತಂದು ಬಿಟ್ಟಿದ್ದಾರೆ.
4 / 6
ಇನ್ನು ದೇವರನಾಡು ಕೇರಳದ ವಯನಾಡು ಜಿಲ್ಲೆಯ ಚೂರಲಮಲದ ಚಹಾ ಎಸ್ಟೇಟ್ನಲ್ಲಿ ಕೂಲಿ ಮಾಡುತ್ತಾ ಇದ್ದ ರತ್ನಮ್ಮ ಹಾಗೂ ರಾಜೇಂದ್ರ ದಂಪತಿ ಗುಡ್ಡ ಕುಸಿತದಲ್ಲಿ ಸಾವಿಗೀಡಾಗಿದ್ದರು. ಇದೀಗ ಉಳಿದವರನ್ನು ರಕ್ಷಿಸಿ ಕರೆತರಲಾಗಿದೆ.
5 / 6
ಕೇರಳದ ಮೆಪ್ಪಾಡಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ವಯನಾಡು ಜಿಲ್ಲೆಯ ಜನ ತತ್ತರಿಸಿದ್ದಾರೆ. ಬೆಳಿಗ್ಗೆ ಕೆಲ ಸಮಯ ಬಿಡುವು ನೀಡಿದ್ದ ಮಳೆ, ಸಂಜೆಯಾಗುತ್ತಿದ್ದಂತೆ ಮತ್ತೆ ವರುಣಾರ್ಭಟ ಜೋರಾಗಿದೆ.