ಪೇದೆಗೆ ಕೊರೊನಾ​! ಆತಂಕದಲ್ಲಿ ಬೆಂಗಳೂರು ಪೊಲೀಸರು

ಬೆಂಗಳೂರು: ಅಕ್ಷರಶಃ ಕೊರೊನಾ ವಾರಿಯರ್ಸ್​ ಆಗಿ ಹಗಲಿರುಳು ದುಡಿಯುತ್ತಿದ್ದ ರಾಜ್ಯ ಪೊಲೀಸ್ ಇಲಾಖೆಯ ಪೇದೆಯೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ರಾಜಧಾನಿಯ ಹಾಟ್​ ಸ್ಪಾಟ್ ಆಗಿ ಕಾಡುತ್ತಿರುವ ಹೊಂಗಸಂದ್ರದಿಂದಲೇ ಈ ಕೊರೊನಾ ಸುದ್ದಿ ಕೇಳಿಬಂದಿದೆ. 650ನೇ ಸೋಂಕಿತ ಬೆಂಗಳೂರಿನ 40 ವರ್ಷದ ಪೊಲೀಸ್ ಪೇದೆ. ಮೂಲತಃ ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆಯ ಪೇದೆಯಾಗಿರುವ ಈ ಸೋಂಕಿತ ಕೊರೊನಾ ವಾರಿಯರ್, ಹೊಂಗಸಂದ್ರದಲ್ಲಿ ಕೊರೊನಾ ಸೋಂಕಿತರ ಉಪಟಳ ಜಾಸ್ತಿಯಾಗಿದ್ದಾಗ ಪೊಲೀಸ್ ಬಂದೋಬಸ್ತ್​ಗೆ ತೆರಳಿದ್ದರು. ಆ ವೇಳೆ ಬೇಗೂರು ಠಾಣೆಯ ಪೇದೆಗೆ ಕೊರೊನಾ […]

ಪೇದೆಗೆ ಕೊರೊನಾ​! ಆತಂಕದಲ್ಲಿ ಬೆಂಗಳೂರು ಪೊಲೀಸರು
ಸಾಧು ಶ್ರೀನಾಥ್​

Updated on: May 04, 2020 | 5:54 PM

ಬೆಂಗಳೂರು: ಅಕ್ಷರಶಃ ಕೊರೊನಾ ವಾರಿಯರ್ಸ್​ ಆಗಿ ಹಗಲಿರುಳು ದುಡಿಯುತ್ತಿದ್ದ ರಾಜ್ಯ ಪೊಲೀಸ್ ಇಲಾಖೆಯ ಪೇದೆಯೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ರಾಜಧಾನಿಯ ಹಾಟ್​ ಸ್ಪಾಟ್ ಆಗಿ ಕಾಡುತ್ತಿರುವ ಹೊಂಗಸಂದ್ರದಿಂದಲೇ ಈ ಕೊರೊನಾ ಸುದ್ದಿ ಕೇಳಿಬಂದಿದೆ. 650ನೇ ಸೋಂಕಿತ ಬೆಂಗಳೂರಿನ 40 ವರ್ಷದ ಪೊಲೀಸ್ ಪೇದೆ.

ಮೂಲತಃ ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆಯ ಪೇದೆಯಾಗಿರುವ ಈ ಸೋಂಕಿತ ಕೊರೊನಾ ವಾರಿಯರ್, ಹೊಂಗಸಂದ್ರದಲ್ಲಿ ಕೊರೊನಾ ಸೋಂಕಿತರ ಉಪಟಳ ಜಾಸ್ತಿಯಾಗಿದ್ದಾಗ ಪೊಲೀಸ್ ಬಂದೋಬಸ್ತ್​ಗೆ ತೆರಳಿದ್ದರು. ಆ ವೇಳೆ ಬೇಗೂರು ಠಾಣೆಯ ಪೇದೆಗೆ ಕೊರೊನಾ ಸೋಂಕು ಅಂಟಿಕೊಂಡಿದೆ ಎಂಬ ಆಘಾತಕಾರಿ ಸಂಗತಿ ತಿಳಿದುಬಂದಿದೆ.

ಠಾಣೆಯ ಇತರೆ ಪೇದೆಗಳಿಗೂ ಆತಂಕ!
ಬೇಗೂರು ಪೊಲೀಸ್ ಠಾಣೆಯ ಪೇದೆಗೆ ಕೊರೊನಾ ಅಟ್ಯಾಕ್ ಆಗಿರುವ ಕಾರಣ ಠಾಣೆಯ ಉಳಿದ ಪೊಲೀಸರಿಗೂ ಆತಂಕ ಶುರುವಾಗಿದೆ. ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡುವ ಕಾರಣದಿಂದ ಉಳಿದ ಪೇದೆಗಳಿಗೂ ಕೊರೊನಾ ಭಯ ಕಾಡುತ್ತಿದೆ.

ಪೊಲೀಸ್ ಪೇದೆ ಠಾಣೆಗೆ ಬಂದಿರಲಿಲ್ಲ:
650ನೇ ಕೊರೊನಾ ಸೋಂಕಿತ ಬೆಂಗಳೂರಿನ ಪೊಲೀಸ್ ಪೇದೆ ಠಾಣೆಗೆ ಬಂದಿರಲಿಲ್ಲ. ಹೀಗಾಗಿ ಇಡೀ ಪೊಲೀಸ್ ಠಾಣೆ ಕ್ವಾರಂಟೈನ್ ಮಾಡುವಂತಿಲ್ಲ. ಪೇದೆಯ ಜತೆ ಸಂಪರ್ಕದಲ್ಲಿದ್ದವರ ಪತ್ತೆ ಹಚ್ಚಿ ಕ್ವಾರಂಟೈನ್​ ಮಾಡಲಾಗುವುದು ಎಂದು ಟಿವಿ9ಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದಾರೆ.

Published On - 5:32 pm, Mon, 4 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us