ದೇವಿ ಕಣ್ಬಿಟ್ಟ ದೃಶ್ಯ ನೋಡಲು ಮುಗಿಬಿದ್ದ ಬೆಳಗಾವಿಯ ಜನ; ಮೂರ್ತಿಯ ಮುಂದೆ ನಿಂತು ಭಕ್ತಿಪೂರ್ವಕ ನಮನ

ದೇವರು ಕಣ್ಣು ಬಿಟ್ಟಿರುವುದು ದೇಶಕ್ಕೆ ಮತ್ತು ರಾಜ್ಯಕ್ಕೆ ಒಳ್ಳೆದಯದಾಗುವ ಮುನ್ಸೂಚನೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಕೊರೊನಾ ಸಂಕಷ್ಟದ ಕಾಲ ಕಳೆದು ಎಲ್ಲರಿಗೂ ಸಹ ಒಳ್ಳೆಯ ದಿನಗಳು ಬರಲಿವೆ ಎಂದು ಅರ್ಚಕರಾದ ರವಿ ಆಶಿಸಿದ್ದಾರೆ.

ದೇವಿ ಕಣ್ಬಿಟ್ಟ ದೃಶ್ಯ ನೋಡಲು ಮುಗಿಬಿದ್ದ ಬೆಳಗಾವಿಯ ಜನ; ಮೂರ್ತಿಯ ಮುಂದೆ ನಿಂತು ಭಕ್ತಿಪೂರ್ವಕ ನಮನ
ದೇವಿ ಕಣ್ಬಿಟ್ಟ ದೃಶ್ಯ
Edited By:

Updated on: Jun 23, 2021 | 1:48 PM

ಬೆಳಗಾವಿ: ಈ ಆಧುನಿಕ ಯುಗದಲ್ಲಿ ಅದೆಂತಹ ಪವಾಡಗಳು ನಡೆದು ಬಿಡುತ್ತದೆ ಎನ್ನುವುದನ್ನು ಊಹಿಸಲೂ ಸಹ ಅಸಾಧ್ಯ ಗಣೇಶ ಹಾಲು ಕುಡಿದ, ಬಾಬಾ ಕಣ್ಣು ಬಿಟ್ಟ, ಒಂದು ದಿನ ಹಚ್ಚಿದ ದೀಪ 75 ದಿನವಾದರೂ ಆರಲಿಲ್ಲ. ಹೀಗೆ ನಾನಾ ರೀತಿಯ ಘಟನೆಗಳ ಬಗ್ಗೆ ನಾವು ಈಗಾಗಲೇ ಓದಿದ್ದೇವೆ. ಇಂತಹದ್ದೇ ಘಟನೆ ನಡೆದಿರುವ ಬಗ್ಗೆ ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಸುದ್ದಿಯಾಗಿದ್ದು, ಸಂತೂ ಬಾಯಿ ದೇವಿಯೂ ಕಣ್ಣು ಬಿಟ್ಟಿದ್ದಾಳೆ ಎಂದು ಭಕ್ತರು ದೇವಸ್ಥಾನಕ್ಕೆ ಸಾಗರೋಪಾದಿಯಲ್ಲಿ ಜಮಾಯಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ನಿನ್ನೆ ತಡರಾತ್ರಿ ಇಲ್ಲಿನ ಸಂತೂ ಬಾಯಿ ದೇವಿಗೆ ಕಣ್ಣು ಬಂದಿವೆ ಎಂಬ ಸುದ್ದಿ ಊರ ತುಂಬ ಹರಡಿದೆ. ಬೆಳಗ್ಗೆ ದೇವರನ್ನು ನೋಡಲು ಬಂದ ಭಕ್ತರಿಗೆ ದೇವರು ಕಣ್ಣು ಬಿಟ್ಟಿರುವ ದೃಶ್ಯ ಕಂಡು ಶಾಕ್ ಆಗಿದೆ. ಕೂಡಲೇ ದೇವಸ್ಥಾದ ಅರ್ಚಕರನ್ನು ಕರೆಸಿದ್ದು, ದೇವಿಯು ಕಣ್ಬಿಟ್ಟ ರೀತಿಯನ್ನು ನೋಡಿ ಖುಷಿಯಾಗಿದೆ ಎಂದು ಭಕ್ತೆ ಲಕ್ಷ್ಮಮ್ಮ ತಿಳಿಸಿದ್ದಾರೆ.

ದೇವಿ ಕಣ್ಣು ಬಿಟ್ಟಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಅರ್ಚಕರು ಹಾಗೂ ಗ್ರಾಮಸ್ಥರು ಸೇರಿ ಈಗಾಗಲೇ ದೇವಸ್ಥಾನದಲ್ಲಿ ಕುಂಬಾಭಿಷೇಕ ಮತ್ತು ಚಂಡಿಕಾಯಾಗ ಮಾಡಲು ನಿರ್ಧಾರ ಮಾಡಿಕೊಂಡಿದ್ದಾರೆ. ಅಲ್ಲದೆ ದೇವರು ಕಣ್ಣು ಬಿಟ್ಟಿರುವುದು ದೇಶಕ್ಕೆ ಮತ್ತು ರಾಜ್ಯಕ್ಕೆ ಒಳ್ಳೆದಯದಾಗುವ ಮುನ್ಸೂಚನೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಕೊರೊನಾ ಸಂಕಷ್ಟದ ಕಾಲ ಕಳೆದು ಎಲ್ಲರಿಗೂ ಸಹ ಒಳ್ಳೆಯ ದಿನಗಳು ಬರಲಿವೆ ಎಂದು ಅರ್ಚಕರಾದ ರವಿ ಆಶಿಸಿದ್ದಾರೆ.

ಒಟ್ಟಿನಲ್ಲಿ ದೇವಿ ಕಣ್ಣು ಬಿಟ್ಟಳೋ ಅಥವಾ ಕಣ್ಣು ಬಿಡಿಸಿದರೋ ಯಾರಿಗೂ ತಿಳಿದಿಲ್ಲ ಆದರೆ ಎಲ್ಲರ ಹರಕೆ‌ ಹಾರೈಕೆಯಂತೆ ದೇಶಕ್ಕೆ ಮತ್ತು ರಾಜ್ಯಕ್ಕೆ ಕಂಟಕಪ್ರಾಯವಾಗಿರುವ ಕೊರೊನಾ ಸಂಪೂರ್ಣವಾಗಿ ತೊಲಗಲಿ ಎಲ್ಲರ ಬುದುಕು ಹಸನಾಗಲಿ ಎನ್ನುವುದು ಸದ್ಯದ ಆಶಯ.

ಇದನ್ನೂ ಓದಿ:

Maha Shivaratri; ಕಾಯುವನೇ ಶಿವ?: ಕಣ್ಣು ಬಿಡಡ ಬಿಟ್ರೆ ಮತ್ತೆ ಶುರುವಿನಿಂದ ಮಾಡಕಾಗ್ತು ರಾತ್ರಿ ಎಲ್ಲ ಇಲ್ಲೇ ಕೂರಕ್ಕು ಒಬ್ಬಳೇ

ಎಣ್ಣೆ ಹಾಕದೆ, ಬತ್ತಿ ಬದಲಾಯಿಸದೆ ಸತತ 75 ದಿನಗಳಿಂದ ಉರಿಯುತ್ತಿರುವ ದೀಪ; ದೇವರ ಪವಾಡವೆಂದು ಮನೆಗೆ ಆಗಮಿಸುತ್ತಿರುವ ಬಾಗಲಕೋಟೆ ಜನರು