AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಸವಾಲ್​! ರಾಜ್ಯಪಾಲರು ಬಳಸಿದ ‘ಸೊನಾಟಾ ಗೋಲ್ಡ್’ ಕಾರು ಹರಾಜಿಗಿದೆ- ನೀವೂ ಒಂದ್ ಚಾನ್ಸ್ ನೋಡಿ..!

Used Car Sales: ಕರ್ನಾಟಕ ಭವನದಲ್ಲಿ ಈ ಹಿಂದೆಯೂ 2009 ಹಾಗೂ 2011ರ ಮಾಡೆಲ್​ಗಳ ಇನ್ನೂ 4 ಮಾರುತಿ ಸುಜುಕಿ SX4 ಕಾರುಗಳನ್ನು ಸಹ ಹರಾಜು ಮಾಡಲಾಗಿದ್ದು ಸರಕಾರ ನಿಗದಿ ಪಡಿಸಿದ ಬೆಲೆಗಿಂತ 2 ರಿಂದ 3 ಪಟ್ಟು ಹೆಚ್ಚು ಬೆಲೆಗೆ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗಿವೆ.‌ ಅಂದಹಾಗೆ, ಸರ್ಕಾರ ಇವುಗಳನ್ನು ಮಾರಾಟ ಮಾಡಿ, ಈ ಕಾರುಗಳ ಬದಲಿಗೆ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿದೆ.

ಸರ್ಕಾರಿ ಸವಾಲ್​! ರಾಜ್ಯಪಾಲರು ಬಳಸಿದ ‘ಸೊನಾಟಾ ಗೋಲ್ಡ್' ಕಾರು ಹರಾಜಿಗಿದೆ- ನೀವೂ ಒಂದ್ ಚಾನ್ಸ್ ನೋಡಿ..!
Karnataka Bhavan: ಸರ್ಕಾರಿ ಸವಾಲ್​! ಹರಾಜಿಗಿದೆ ರಾಜ್ಯಪಾಲರು ಬಳಸಿದ ‘ಸೊನಾಟಾ ಗೋಲ್ಡ್' ಕಾರು - ನೀವೂ ಒಂದ್ ಚಾನ್ಸ್ ನೋಡಿ..!
TV9 Web
| Edited By: ಸಾಧು ಶ್ರೀನಾಥ್​|

Updated on:Jun 23, 2021 | 1:58 PM

Share

ದೆಹಲಿ ಕರ್ನಾಟಕ ಭವನದಲ್ಲಿರುವ ‘ಸೊನಾಟಾ ಗೋಲ್ಡ್ ‘ ಕಾರು ಹರಾಜಿಗೆ ಸರಕಾರ ಆದೇಶ ಹೊರಡಿಸಿದೆ. ‘ಸೊನಾಟ ಗೋಲ್ಡ್ ‘ಕಾರು ಇದು ಕರ್ನಾಟಕ ರಾಜ್ಯದ ರಾಜ್ಯಪಾಲರು ಬಳಸಿರುವ ಸರಕಾರಿ ಕಾರು. ಈ ಹಿಂದೆ ರಾಜ್ಯಪಾಲರಾಗಿದ್ದ ಟಿ.ಎನ್ ಚತುರ್ವೇದಿ ಅವರು ಹೆಚ್ಚಾಗಿ ಬಳಸಿರುವ ಕಾರು ಇದಾಗಿದ್ದು, ಹೆಚ್ಚು ಕಿಲೋ ಮೀಟರ್ ಸಹ ಓಡಿಲ್ಲ. ಅಚ್ಚುಕಟ್ಟಾಗಿ ನಿರ್ವಹಿಸಿರುವ ಕಾರನ್ನು ಈಗ ಹರಾಜಿಗೆ ಇಡಲಾಗಿದೆ. ಸರಕಾರ ಲೈಸೆನ್ಸ್ ಹೊಂದಿರುವ ಗುಜರಿ ಸಂಸ್ಥೆಯವರಿಗೆ ಮಾತ್ರ ಕೊಂಡುಕೊಳ್ಳಲು ಅವಕಾಶವಿದೆ. ಕಳೆದ ವಾರ ದೆಹಲಿಯ ಕರ್ನಾಟಕ ಭವನದಲ್ಲಿ ಹರಾಜು ಪ್ರಕ್ರಿಯೆ ನಡೆದಿದೆ. ಸರ್ಕಾರಿ ಲೈಸೆನ್ಸ್ ಹೊಂದಿರುವವರು ಯಾರೂ ಮುಂದೆ ಬಾರದ ಕಾರಣ ಈ ಕಾರು ಹರಾಜು ಆಗಿಲ್ಲ.

ಸೊನಾಟಾ ಗೋಲ್ಡ್ 2003ರ ಮಾಡೆಲ್ ಆಗಿದ್ದು ಖರೀದಿಸಲು ದೆಹಲಿಯಲ್ಲಿ ಕೆಲವರು ಮುಂದೆ ಬಂದಿದ್ದರು. ಕೊಂಡು ಕೊಳ್ಳಲು ಬಂದ ಯಾರಲ್ಲೂ ಕೂಡ ಗುಜರಿ ಲೇಸೆನ್ಸ್ ಇಲ್ಲದ ಕಾರಣ ಕಾರು ಹರಾಜು ಆಗದೇ ಉಳಿದಿದೆ. ಗುಜರಿ ಲೈಸೆನ್ಸ್ ಇರುವವರು ಕಾರು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಬಹುದಾಗಿದೆ. ಸರಕಾರ ಇದಕ್ಕೆ ಮೂಲ ಬೆಲೆಯಾಗಿ 25,000 ರೂಪಾಯಿ ನಿಗದಿಪಡಿಸಿದ್ದು, ಇದಕ್ಕಿಂತ ಹೆಚ್ಚು ಹರಾಜು ಕೂಗಿದವರಿಗೆ ಈ ಕಾರು ಸಿಗಲಿದೆ.

ಇದಿಷ್ಟೇ ಅಲ್ಲದೇ, ಕರ್ನಾಟಕ ಭವನದಲ್ಲಿ ಈ ಹಿಂದೆಯೂ 2009 ಹಾಗೂ 2011ರ ಮಾಡೆಲ್​ಗಳ ಇನ್ನೂ 4 ಮಾರುತಿ ಸುಜುಕಿ SX4 ಕಾರುಗಳನ್ನು ಸಹ ಹರಾಜು ಮಾಡಲಾಗಿದ್ದು ಸರಕಾರ ನಿಗದಿ ಪಡಿಸಿದ ಬೆಲೆಗಿಂತ 2 ರಿಂದ 3 ಪಟ್ಟು ಹೆಚ್ಚು ಬೆಲೆಗೆ ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಲಾಗಿದೆ.‌ ಅಂದಹಾಗೆ, ಸರ್ಕಾರ ಇವುಗಳನ್ನು ಮಾರಾಟ ಮಾಡಿ, ಈ ಕಾರುಗಳ ಬದಲಿಗೆ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿದೆ.

– ಜಿ.ಆರ್. ಹರೀಶ್, ನವದೆಹಲಿ

(Karnataka Bhavan in delhi want sell car used by governor to licensed sellers)

ತಿಹಾರ್ ಜೈಲಿನಲ್ಲಿ ನೆರವಿಗೆ ನಿಂತವನ ಕೈಬಿಡದ ಕಾಂಗ್ರೆಸ್ ನಾಯಕ; ಡಿ.ಕೆ‌. ಶಿವಕುಮಾರ್ ಮಾನವೀಯ ಮುಖ ಇಲ್ಲಿದೆ ನೋಡಿ!

Published On - 1:55 pm, Wed, 23 June 21

Follow Us
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?