ನಾಮಫಲಕಗಳಲ್ಲಿ ಬೆಳಗಾಂವ, ಬೆಳಗಾಮ್ ನಿಷಿದ್ಧ, ಬೆಳಗಾವಿ ಕಡ್ಡಾಯ: ಪಾಲಿಕೆ ಆಯುಕ್ತರ ಆದೇಶ
ಬೆಳಗಾವಿ ಮಹಾನಗರದ ಎಲ್ಲ ಅಂಗಡಿ/ಮುಗ್ಗಟ್ಟುಗಳ ನಾಮಫಲಕಗಳಲ್ಲಿ ಶೇ60 ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ಜೊತೆಗೆ ವಿಳಾಸದಲ್ಲಿ ಬೆಳಗಾವಿ ಅಂತ ನಮೋದಿಸುವಂತೆ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಎರಡು ಸಾವಿರ ಅಂಗಡಿಗಳಿಗೆ ನೋಟಿಸ್ ನೀಡಿದ್ದಾರೆ.
ಬೆಳಗಾವಿ, ಜನವರಿ 13: ಮಹಾನಗರದ ಎಲ್ಲ ಅಂಗಡಿ/ಮುಗ್ಗಟ್ಟುಗಳ ನಾಮಫಲಕಗಳಲ್ಲಿ ಶೇ60 ರಷ್ಟು ಕನ್ನಡವನ್ನು (Kannada) ಕಡ್ಡಾಯವಾಗಿ ಬಳಸಬೇಕು. ಜೊತೆಗೆ ವಿಳಾಸದಲ್ಲಿ ಬೆಳಗಾವಿ (Belagavi) ಅಂತ ನಮೋದಿಸುವಂತೆ ಮಹಾನಗರ ಪಾಲಿಕೆ (City Corporation) ಆಯುಕ್ತ ಅಶೋಕ ದುಡಗುಂಟಿ ಎರಡು ಸಾವಿರ ಅಂಗಡಿಗಳಿಗೆ ನೋಟಿಸ್ ನೀಡಿದ್ದಾರೆ. ನಗರದ ಕೆಲವು ಅಂಗಡಿ ಮಾಲಿಕರು ಬೆಳಗಾವಿ ಬದಲು ಬೆಳಗಾಂವ, ಬೆಳಗಾಂ ಅಂತ ನಾಮಫಲಕಗಳಲ್ಲಿ ಬರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಯಕ್ತರು ನೋಟಿಸ್ ಜಾರಿ ಮಾಡಿದ್ದಾರೆ.
ನಾಮಫಲಕಗಳನ್ನು ಶೇಕಡಾ 60 ರಷ್ಟು ಬಳಸಬೇಕೆಂದು ಸರ್ಕಾರ ಹೇಳಿದ ಬೆನ್ನಲ್ಲೇ ಆಯಕ್ತರು ಬೆಳ್ಳಂಬೆಳಿಗ್ಗೆ ನಗರ ಸಂಚಾರ ಕೈಗೊಂಡರು. ಈ ವೇಳೆ ನಗರದ ಹಲವು ಅಂಗಡಿಗಳಲ್ಲಿ ಕನ್ನಡ ಬಳಕೆ ತೀರ ವಿರಳವಾಗಿತ್ತು. ಮತ್ತು ವಿಳಾಸದ ಸ್ಥಳದಲ್ಲಿ ಬೆಳಗಾಂವ, ಬೆಳಗಾಮ್ ಎಂದು ಬರೆಸಲಾಗಿತ್ತು. ಇದನ್ನು ಮನಗಂಡ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಮಹಾರಾಷ್ಟ್ರ ಆರೋಗ್ಯ ವಿಮೆ ಜಾರಿ: ಕೆಎಲ್ಇ, ಅರಿಹಂತ ಆಸ್ಪತ್ರೆಗೆ ನೋಟಿಸ್
ಆಯುಕ್ತರ ಆದೇಶ ಪ್ರತ್ರದಲ್ಲಿ ಏನಿದೆ?
ರಾಜ್ಯ ಸರ್ಕಾರ ನಗರಪಾಲಿಕೆ/ಜಿಲ್ಲೆಯಾದ್ಯಂತ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ/ಮುಂಗಟ್ಟುಗಳು/ವಾಣಿಜ್ಯ ಸಂಕಿರ್ಣಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಭಾಗವನ್ನು ಕನ್ನಡವನ್ನು ಬಳಸತಕ್ಕದ್ದು ಎಂದು ನಿರ್ದೇಶಿಸಿದೆ. ಜೊತೆಗೆ ವಿಳಾಸದಲ್ಲಿ “ಬೆಳಗಾವಿ” ಎಂದು ನಮೂದಿಸಬೇಕಾಗಿರುತ್ತದೆ. ಆದರೆ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ಉದ್ದಿಮೆದಾರರು ತಮ್ಮ ಉದ್ದಿಮೆಯ ನಾಮಫಲಕದಲ್ಲಿ ಬೆಳಗಾಂವ ಅಥವಾ ಬೆಳಗಾಮ್ ಎಂದು ನಮೂದಿಸಿದ್ದು ಹಾಗೂ ಶೇ.50 ರಷ್ಟು ಭಾಗವನ್ನು ಕನ್ನಡ ಭಾಷೆಗೆ ಪ್ರಥಮಾಧ್ಯತೆ ನೀಡದೇ ನಾಮಫಲಕವನ್ನು ಉಪಯೋಸುತ್ತಿದ್ದು ಕಂಡುಬಂದಿದೆ.
ಇಂತಹ ಉದ್ದಿಮೆದಾರರಿಗೆ ನೀಡಿದ ಪರವಾನಿಗೆಯನ್ನು ರದ್ದುಗೊಳಿಸಿ ಅಂಗಡಿಯನ್ನು ಬಂದ್ ಅಥವಾ ಸೀಲ್ ಮಾಡಲಾಗವುದು ಎಂದು ಆದೇಶ ಹೊರಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ