Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: ಟೊಮೆಟೊ ಬೆಳೆದು ಖುಲಾಯಿಸಿದ ಲಕ್; ಮೂರೇ ತಿಂಗಳಲ್ಲಿ 80 ಲಕ್ಷ ರೂ. ಆದಾಯ ಗಳಿಸಿದ ರೈತ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರುಪಿನಾಳ ಗ್ರಾಮದ ರೈತ ಅಪ್ಪಾಸಾಹೇಬ್ ಎಂಬುವವರು ನಿತ್ಯ ಟೊಮೆಟೊ ಮಾರಾಟ ಮಾಡಿ ಲಕ್ಷ ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಹೌದು, ನಿರಂತರ 12 ವರ್ಷಗಳಿಂದ ಟೊಮೆಟೊ ಬೆಳೆಯುತ್ತಿದ್ದ ರೈತನಿಗೆ ಈ ವರ್ಷ ಲಕ್ ಖುಲಾಯಿಸಿದೆ.

ಬೆಳಗಾವಿ: ಟೊಮೆಟೊ ಬೆಳೆದು ಖುಲಾಯಿಸಿದ ಲಕ್; ಮೂರೇ ತಿಂಗಳಲ್ಲಿ 80 ಲಕ್ಷ ರೂ. ಆದಾಯ ಗಳಿಸಿದ ರೈತ
ರೈತ ಅಪ್ಪಾಸಾಹೇಬ್
Follow us
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 19, 2023 | 4:00 PM

ಬೆಳಗಾವಿ, ಆ.19: ದೇಶದಲ್ಲಿ ಬೆಲೆ ಏರಿಕೆಯ ದೊಡ್ಡ ಸಂಚಲನವನ್ನು ಮೂಡಿಸಿದ್ದ ಟೊಮೆಟೊ(Tomato) ದರ, ಇದೀಗ ಕುಸಿಯುತ್ತಿದೆ. ಹೌದು, 15 ಕೆಜಿ ಟೊಮೆಟೊ ಬಾಕ್ಸ್​ಗೆ 500 ರಿಂದ 800 ರೂ. ಗೆ ಹರಾಜು ಆಗುತ್ತಿದೆ. ಈ ಹಿಂದೆ ಬರೊಬ್ಬರಿ 15 ಕೆಜಿ ಬಾಕ್ಸ್ ಟೊಮ್ಯಾಟೊ ದರ 2,500 ರೂಪಾಯಿಯ ಗಡಿ ದಾಟಿತ್ತು. ಇದೀಗ ಕೊಂಚ ಮಟ್ಟಿಗೆ ದರ ಕಡಿಮೆಯಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಟೊಮೆಟೊ ದರ ಕುಸಿತದ ಮಧ್ಯೆಯೂ ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರುಪಿನಾಳ ಗ್ರಾಮದ ರೈತ ಅಪ್ಪಾಸಾಹೇಬ್ ಎಂಬುವವರು ನಿತ್ಯ ಟೊಮೆಟೊ ಮಾರಾಟ ಮಾಡಿ ಲಕ್ಷ ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.

ನಿತ್ಯ ಎರಡೂವರೆ ಲಕ್ಷ ಆದಾಯ ಗಳಿಸುತ್ತಿರುವ ರೈತ

ಹೌದು, ನಿರಂತರ 12 ವರ್ಷಗಳಿಂದ ಟೊಮೆಟೊ ಬೆಳೆಯುತ್ತಿದ್ದ ರೈತನಿಗೆ ಈ ವರ್ಷ ಲಕ್ ಖುಲಾಯಿಸಿದೆ. ಐದು ಎಕರೆ ಹೊಲದಲ್ಲಿ ಮೂರು ಭಾಗ ಮಾಡಿ ರೈತ ಅಪ್ಪಾಸಾಹೇಬ್ 40 ಸಾವಿರ ಟೊಮೆಟೊ ಸಸಿ ನಾಟಿ ಮಾಡಿದ್ದರು. ನಿತ್ಯ ಎರಡೂವರೆ ಟನ್ ಟೊಮೆಟೊ ಕಟಾವು ಮಾಡುವ ರೈತ, ಸದ್ಯ ಮಾರುಕಟ್ಟೆಯಲ್ಲಿ 25 ಕೆಜಿ ಟೊಮೆಟೊ ಬಾಕ್ಸ್​ಗೆ ಸಾವಿರ ರೂಪಾಯಿ ಬೆಲೆಯಿದೆ. ರೈತ ಅಪ್ಪಾಸಾಹೇಬ್ ನಿತ್ಯ 250 ಟ್ರೇ ಟೊಮೆಟೊವನ್ನು ಬೆಳಗಾವಿಯ ಮಾರುಕಟ್ಟೆಗೆ ಸರಬರಾಜು ಮಾಡುತ್ತಾರೆ.

ಇದನ್ನೂ ಓದಿ:ರೈತನನ್ನು ಮದ್ವೆಯಾಗಲ್ಲ ಎಂದ ಯುವತಿ: ಟೊಮೆಟೊ ಮಾರಿದ ಹಣದಲ್ಲಿ ಕಾರು ಖರೀದಿಸಿ ಕನ್ಯೆ ನೋಡಲು ಹೋಗ್ತೇನೆ ಎಂದ ಯುವ ಕೃಷಿಕ

ಮೂರೇ ತಿಂಗಳಲ್ಲಿ 80 ಲಕ್ಷ ರೂಪಾಯಿ ಆದಾಯ ಗಳಿಸಿದ ರೈತ ಅಪ್ಪಾಸಾಹೇಬ್

ಮೇ ತಿಂಗಳಲ್ಲಿ ಟೊಮೆಟೊ ಸಸಿ ನಾಟಿ ಮಾಡಿದ್ದ ರೈತ ಅಪ್ಪಾಸಾಹೇಬ್ ಅವರು ಮೂರೇ ತಿಂಗಳಲ್ಲಿ 80 ಲಕ್ಷ ಆದಾಯ ಗಳಿಸಿದ್ದಾರೆ. ಮಾರುಕಟ್ಟೆಯಲ್ಲಿ ಇದೇ ದರ ಇದ್ದರೆ, ಇನ್ನೂ 20 ಲಕ್ಷ ರೂಪಾಯಿ ಆದಾಯ ಗಳಿಕೆ ಮಾಡುವ ನಿರೀಕ್ಷೆಯಿದೆಯಂತೆ.

ಊರಿನಲ್ಲಿ ಮನೆ ಕಟ್ಟೋ ಕನಸು ಸಾಕಾರ; ಅನ್ನದಾತ ಫುಲ್ ಖುಷ್!

ರೈತನೊಬ್ಬ ವರ್ಷ ಪೂರ್ತಿ ಎನ್ನದೆ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಹೊಲದಲ್ಲಿ ಕಷ್ಟಪಟ್ಟು ದುಡಿದರೂ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಕಂಗಾಲಾಗುತ್ತಿದ್ದರು. ಕೊನೆಯದಾಗಿ ಬೆಳೆ ಬೆಳೆಯಲು ಖರ್ಚು ಮಾಡಿದ ಹಣವೂ ವಾಪಾಸ್ಸ್​ ಬರುತ್ತಿರಲಿಲ್ಲ. ಇದೀಗ ಟೊಮೆಟೊಗೆ ಸಿಕ್ಕ ಬೆಲೆಯಿಂದ ಊರಿನಲ್ಲಿಯೇ ಮನೆ ಕಟ್ಟಬೇಕೆಂದುಕೊಂಡಿದ್ದ ರೈತನ ಕನಸು ಸಾಕಾರಗೊಂಡಿದೆ. ಹೌದು, ರುಪಿನಾಳ ಗ್ರಾಮದ ಮುಖ್ಯರಸ್ತೆಯಲ್ಲಿಯೇ ಎರಡಂತಸ್ತಿನ ಮನೆ ಕಟ್ಟಿಸುತ್ತಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು