ರೈತನನ್ನು ಮದ್ವೆಯಾಗಲ್ಲ ಎಂದ ಯುವತಿ: ಟೊಮೆಟೊ ಮಾರಿದ ಹಣದಲ್ಲಿ ಕಾರು ಖರೀದಿಸಿ ಕನ್ಯೆ ನೋಡಲು ಹೋಗ್ತೇನೆ ಎಂದ ಯುವ ಕೃಷಿಕ
ರೈತನಿಗೆ ನಮ್ಮ ಮಗಳನ್ನು ಮದುವೆ ಮಾಡಿಕೊಡಲ್ಲ ಎಂಬ ಪೋಷಕರ ಮಾತುಗಳನ್ನೇ ಸವಾಲಾಗಿ ತೆಗೆದುಕೊಂಡ ಯುವ ಕೃಷಿಕ ತನ್ನ 12 ಎಕರೆ ಜಮೀನಿನಲ್ಲಿ ಕೆಂಪು ಬಂಗಾರ ಬೆಳೆದು ಕೋಟ್ಯಾಧಿಪತಿಯಾಗಿದ್ದಾನೆ.
ಚಾಮರಾಜನಗರ: ಇತ್ತೀಚಿನ ವರ್ಷಗಳಲ್ಲಿ ರೈತನಿಗೆ (Farmer) ನಮ್ಮ ಮಗಳನ್ನು ಮದುವೆ ಮಾಡಿಕೊಡುವುದಿಲ್ಲವೆಂದು ಪೋಷಕರು ಹೇಳುತ್ತಿದ್ದರೇ, ನಾವು ಕೃಷಿಕನನ್ನು ಮದುವೆಯಾಗುವುದಿಲ್ಲ (Marriage) ಸರ್ಕಾರಿ ಕೆಲಸ ಅಥವಾ ಐಟಿ-ಬಿಟಿ ಉದ್ಯೋಗಸ್ಥನೇ ಬೇಕು ಎಂದು ಹುಡುಗಿಯರು ಹೇಳುತ್ತಿದ್ದಾರೆ. ಇದೇರೀತಿಯಾದ ಅನುಭವಗಳು ಚಾಮರಾಜನಗರ ತಾಲೂಕಿನ ಲಕ್ಷ್ಮೀಪುರದ ಯುವ ರೈತ ರಾಜೇಂದ್ರ ಅವರಿಗೆ ಆಗಿದೆ. ಹೌದು ಯುವ ರೈತ ರಾಜೇಂದ್ರ ಈ ಹಿಂದೆ ಕನ್ಯೆ ನೋಡಲು ಹೋದಾಗ ರೈತನೆಂದು ಯುವತಿಯರು ಮದುವೆಯಾಗಲು ನಿರಾಕರಿಸಿದ್ದರು. ಸರ್ಕಾರಿ ಕೆಲಸ ಇದ್ದವರಿಗೆ ಮಾತ್ರ ನಮ್ಮ ಮಗಳನ್ನು ಕೊಡುವುದಾಗಿ ಪೋಷಕರು ಅವಮಾನಿಸಿದ್ದರು.
ಈ ಮಾತುಗಳನ್ನು ಕೇಳಿದ ಯುವ ರೈತ ರಾಜೇಂದ್ರ ನಾನು ಸರ್ಕಾರಿ ಉದ್ಯೋಗಿ ಮತ್ತು ಐಟಿ-ಬಿಟಿ ಉದ್ಯೋಗಸ್ಥರಿಗಿಂತ ಕೃಷಿಯಲ್ಲೇ ಹೆಚ್ಚು ಆದಾಯ ಗಳಿಸುತ್ತೇನೆಂದು ಪಣ ತೊಟ್ಟಿದ್ದರು. ಅದರಂತೆ ಲಕ್ಷ್ಮೀಪುರದಲ್ಲಿ ತನ್ನ 12 ಎಕರೆ ಜಮೀನಿನಲ್ಲಿ ಯುವ ರೈತ ರಾಜೇಂದ್ರ ಟೊಮೆಟೋ ಬೆಳೆ ಬೆಳೆದಿದ್ದಾರೆ. ಆರು ತಿಂಗಳಲ್ಲಿ ಫಸಲು ಬಂದಿದೆ. ಈಗ ಟೊಮೆಟೋ ದರ ಏರಿಕೆಯಾಗಿದ್ದು, ಒಳ್ಳೆ ಬೆಲೆಗೆ ಮಾರಾಟ ಮಾಡಿ ಕೋಟ್ಯಾಧಿಪತಿಯಾಗಿದ್ದಾರೆ.
ಇದನ್ನೂ ಓದಿ: ಚಿಕ್ಕೋಡಿ: ಲೀಸ್ ಪಡೆದ ಹೊಲದಲ್ಲಿ ಟೊಮೆಟೊ ಬೆಳೆದು ಕೋಟ್ಯಾಧೀಶನಾದ ರೈತ
ಈಗ ಟೊಮೆಟೋ ಬೆಳೆ ಕೈ ಹಿಡಿದ ಪರಿಣಾಮ ಹೊಸ ಮಹೇಂದ್ರ XUV 700 ಕಾರು ಖರೀದಿಸಿ ಅದರಲ್ಲೇ ಕನ್ಯಾ ನೋಡಲು ಹೋಗುತ್ತೇನೆಂದು ಯುವ ರೈತ ರಾಜೇಂದ್ರ ಹೇಳುತ್ತಿದ್ದಾರೆ.
ಟೊಮೆಟೋ ಜಮೀನುಗಳ ಸುತ್ತ ಪೊಲೀಸರ ಗಸ್ತು
ಇನ್ನು ಇದೇ ಜಿಲ್ಲೆಯ ಮೊತ್ತೊಂದು ಕಡೆ ಟೊಮೆಟೋ ಬೆಳೆ ಜಮೀನುಗಳ ಸತ್ತ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಹೌದು ಚಾಮರಾಜನಗರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಕೆಬ್ಬೇಪುರ ಗ್ರಾಮದ ರೈತ ಮಂಜುನಾಥ್ ಎಂಬುವ 1.5 ಎಕರೆ ಜಮೀನಲ್ಲಿ ಬೆಳೆದಿದ್ದ ಟೊಮೆಟೋ ಬೆಳೆಯನ್ನು ಕಿಡಿಗೇಡಿಗಳು ನಾಶ ಮಾಡಿದ್ದರು.
ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿಂದಂತೆ ಚಾಮರಾಜನಗರ ಪೊಲೀಸರು ಬೀಟ್ ಹೆಚ್ಚಿಸಿದ್ದಾರೆ. ಅಲ್ಲದೇ ಆಯಾ ಠಾಣಾ ವ್ಯಾಪ್ತಿಯ ಪೊಲೀಸರು ಟೊಮೆಟೋ ಜಮೀನಿನ ಸುತ್ತ ಗಸ್ತು ತಿರುಗಲು ಸೂಚನೆ ನೀಡಿದ್ದಾರೆ. ಈ ಹಿನ್ನಲೆ ಜಮೀನುಗಳ ಸುತ್ತ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:55 am, Mon, 7 August 23