ಸಿಪಿಐ ವಿರುದ್ಧ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಮುಂದಾದ ಪೇದೆ: ರಕ್ಷಿಸಿದ ಗೆಳೆಯರು

| Updated By: ಗಂಗಾಧರ​ ಬ. ಸಾಬೋಜಿ

Updated on: Nov 28, 2024 | 9:13 PM

ಬೆಳಗಾವಿಯ ಉದ್ಯಮಬಾಗ ಠಾಣೆಯ ಸಿಪಿಐ ಧರೇಗೌಡ ಪಾಟೀಲ್ ಅವರ ಕಿರುಕುಳದಿಂದ ಬೇಸತ್ತು ಕಾನ್ಸ್ಟೇಬಲ್ ವಿಠ್ಠಲ್ ಮುನಿಹಾಳ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರು 15 ಪುಟಗಳ ಡೆತ್ ನೋಟ್ ಬರೆದು, ಸಿಪಿಐ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಸ್ನೇಹಿತರ ಸಕಾಲಿಕ ಹಸ್ತಕ್ಷೇಪದಿಂದ ವಿಠ್ಠಲ್ ಅವರನ್ನು ರಕ್ಷಿಸಲಾಗಿದೆ.

ಸಿಪಿಐ ವಿರುದ್ಧ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಮುಂದಾದ ಪೇದೆ: ರಕ್ಷಿಸಿದ ಗೆಳೆಯರು
ಸಿಪಿಐ ವಿರುದ್ಧ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಮುಂದಾದ ಪೇದೆ: ರಕ್ಷಿಸಿದ ಗೆಳೆಯರು
Follow us on

ಬೆಳಗಾವಿ, ನವೆಂಬರ್​ 28: ಸಿಪಿಐ ವಿರುದ್ಧ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಮುಂದಾಗಿದ್ದ ಕಾನ್ಸ್​​ಟೇಬಲ್ (Police Constable)​ ರಕ್ಷಣೆ ಮಾಡಿರುವಂತಹ ಘಟನೆ ನಡೆದಿದೆ. ಬೆಳಗಾವಿಯ ಉದ್ಯಮಬಾಗ ಠಾಣೆ ಸಿಪಿಐ ಧರೇಗೌಡ ಪಾಟೀಲ್ ​ವಿರುದ್ಧ ಕಾನ್ಸ್​​ಟೇಬಲ್ ವಿಠ್ಠಲ್ ಮುನಿಹಾಳ ಆತ್ಮಹತ್ಯೆಗೆ ಮುಂದಾಗಿದ್ದರು. ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್​ನೋಟ್ ಶೇರ್ ಮಾಡಿದ್ದ ವಿಠ್ಠಲ್​ರನ್ನು ಕೂಡಲೇ ಸ್ನೇಹಿತರು ಹುಡುಕಿ ರಕ್ಷಣೆ ಮಾಡಿದ್ದಾರೆ.

ಹಫ್ತಾ ವಸೂಲಿ ಮಾಡಿಕೊಡುವ ಸಿಬ್ಬಂದಿಗೆ ರಾತ್ರಿ ಕರ್ತವ್ಯಕ್ಕೆ ಹಾಕಲ್ಲ. ರಜೆ ವಿಚಾರದಲ್ಲಿ ಸಿಪಿಐ ಧರೇಗೌಡ ಸಾಕಷ್ಟು ಕಿರುಕುಳ ಕೊಡ್ತಿದ್ದಾರೆ. ರಜೆ ಪಡೆದು ಹಿಂದಿರುಗಿದಾಗ ಅವಾಚ್ಯವಾಗಿ ನಿಂದನೆ ಮಾಡಿದ್ದಾರೆ. ಸೋದರಿ ಮದುವೆಗೆ ರಜೆ ಪಡೆದಿದ್ದಕ್ಕೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಕರ್ತವ್ಯದಲ್ಲಿದ್ರೂ ಗೈರು ಅಂತಾ ಹೇಳಿ ಮೆಮೋ ಜಾರಿ ಮಾಡುತ್ತಾರೆ.

ಇದನ್ನೂ ಓದಿ: ಬೆಳಗಾವಿ: ಪ್ರೀತಿ ನಿರಾಕರಿಸಿದ್ದಕ್ಕೆ ನರ್ಸ್​ ಮೇಲೆ ಮಾರಣಾಂತಿಕ ಹಲ್ಲೆ, ಮನನೊಂದ ತಂದೆ ಸಾವು

ಮಾನಸಿಕವಾಗಿ ತೊಂದರೆ ಕೊಟ್ಟಿದ್ದಾರೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸಿಪಿಐ ಬಗ್ಗೆ ಇನ್ನೂ ಹಲವು ವಿಷಯಗಳು ನನ್ನ ಮೊಬೈಲ್​ನಲ್ಲಿ ಇದೆ. ಸಿಪಿಐ ಧರೇಗೌಡ ಪಾಟೀಲ್ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿ ಕಾನ್ಸ್​ಟೇಬಲ್​ ವಿಠ್ಠಲ್‌ 15 ಪುಟಗಳ ಡೆತ್​​ನೋಟ್​ ಬರೆದಿಟ್ಟಿದ್ದರು.

ಬೆಳಗಾವಿಯಲ್ಲಿ ಗುಂಡಿಗೆ ಯುವಕ ಸಾವು 

ಬೆಳಗಾವಿಯಲ್ಲಿ ತಡರಾತ್ರಿ ಗುಂಡಿನ ದಾಳಿಗೆ ಯುವಕನೊಬ್ಬ ಸಾವನ್ನಪ್ಪಿರುವಂತಹ ಘಟನೆ ಇತ್ತೀಚೆಗೆ ನಡೆದಿತ್ತು. ಕಾಡಂಚಿಗೆ ಹೊಂದಿಕೊಂಡ ಅದೊಂದು ಗ್ರಾಮದ ವಲಯದ ಬ್ರಿಡ್ಜ್ ಬಳಿಯಲ್ಲಿ ಕೃತ್ಯ ನಡೆದಿತ್ತು. ಘಟನೆಗೆ ಅಕ್ರಮ ಮರಳು ದಂಧೆ ಕಾರಣವಾಯಿತಾ ಅಥವಾ ರಾತ್ರಿ ಕಾಡು ಪ್ರಾಣಿಗಳ ಭೇಟೆ ಕಾರಣ ಎಂಬ ಬಗ್ಗೆ ಸಂಶಯ ವ್ಯಕ್ತವಾಗಿದ್ದವು.

ಇದನ್ನೂ ಓದಿ: ಸಾಲ ಪಡೆದಿದ್ದ ವ್ಯಕ್ತಿಗೆ ನಗ್ನ ಚಿತ್ರ ಹರಿಬಿಡುವ ಬೆದರಿಕೆ: ಕಿರುಕುಳಕ್ಕೆ ನೊಂದು ಕ್ಯಾಮರಾಮನ್‌ ಆತ್ಮಹತ್ಯೆ

ಗ್ರಾಮದ ಅಲ್ತಾಫ್ ಮಕಾಂದರ್(30) ವರ್ಷದ ಯುವಕನ ಎದೆಗೆ ಗುಂಡು ತಗುಲಿದ್ದು, ಸ್ಥಳದಲ್ಲಿಯೇ ಆತ ಮೃತಪಟ್ಟಿದ್ದಾನೆ. ಹಲಸಿಯಿಂದ ಬೀಡಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಹಳ್ಳಕ್ಕೆ ಅಡ್ಡಲಾಗಿ ಬ್ರಿಡ್ಜ್ ಕಟ್ಟಲಾಗಿದೆ. ಈ ಬ್ರಿಡ್ಜ್ ಮೇಲೆಯೇ ತಡರಾತ್ರಿ ರಕ್ತದ ಕೋಡಿ ಹರಿದಿದೆ. ರಾತ್ರಿ 12 ರಿಂದ 2 ಗಂಟೆ ಮಧ್ಯದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.