ಬೆಳಗಾವಿ ಮತಗಟ್ಟೆ ಪೆಟ್ಟಿಗೆಯಲ್ಲಿ ಹೆಚ್ಚುವರಿ 5 ಮತ ಪತ್ರ ಪತ್ತೆ! ಕೌಂಟಿಂಗ್​ಗೆ ತಡೆಯೊಡ್ಡುವ ಬೆದರಿಕೆ ಹಾಕಿದ ಪಕ್ಷೇತರ ಅಭ್ಯರ್ಥಿ

| Updated By: sandhya thejappa

Updated on: Jun 15, 2022 | 12:17 PM

ಹೆಚ್ಚುವರಿ 5 ಮತ ಪತ್ರ ಬಂದಿದ್ದಕ್ಕೆ ಪಕ್ಷೇತರ ಅಭ್ಯರ್ಥಿ ಎನ್​ಬಿ ಬನ್ನೂರು ಆಕ್ರೋಶ ವ್ಯಕ್ತಪಡಿಸಿದ್ದು, ಗೊಂದಲ ನಿವಾರಿಸದಿದ್ದರೆ ಕೌಂಟಿಂಗ್​ಗೆ ನಾವು ತಡೆ ಒಡ್ಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಬೆಳಗಾವಿ ಮತಗಟ್ಟೆ ಪೆಟ್ಟಿಗೆಯಲ್ಲಿ ಹೆಚ್ಚುವರಿ 5 ಮತ ಪತ್ರ ಪತ್ತೆ! ಕೌಂಟಿಂಗ್​ಗೆ ತಡೆಯೊಡ್ಡುವ ಬೆದರಿಕೆ ಹಾಕಿದ ಪಕ್ಷೇತರ ಅಭ್ಯರ್ಥಿ
ಮತ ಎಣಿಕೆ ಕೇಂದ್ರದಲ್ಲಿ ಬಸವರಾಜ ಹೊರಟ್ಟಿ ಇದ್ದಾರೆ, ಪಕ್ಷೇತರ ಅಭ್ಯರ್ಥಿ ಎನ್​ಬಿ ಬನ್ನೂರು
Follow us on

ಬೆಳಗಾವಿ: ವಾಯವ್ಯ ಪದವೀಧರ ಮತಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ (Counting Centre) ಗೊಂದಲ ಮುಂದುವರಿದಿದೆ. ಬೆಳಗಾವಿಯ (Belagavi) ಜ್ಯೋತಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಮತಪೆಟ್ಟಿಗೆಯಲ್ಲಿ ಹೆಚ್ಚುವರಿ 5 ಮತ ಪತ್ರ ಪತ್ತೆಯಾಗಿದ್ದು, ಗೊಂದಲ ಸೃಷ್ಟಿಯಾಗಿದೆ. ಇಳಕಲ್ ಪಟ್ಟಣದ ಮತಗಟ್ಟೆ 101(ಎ) ಪೆಟ್ಟಿಗೆಯಲ್ಲಿ 171 ಮತ ಇರಬೇಕಿತ್ತು. ಆದರೆ 5 ಮತ ಪತ್ರ ಹೆಚ್ಚಿದೆ. ಹೆಚ್ಚುವರಿ 5 ಮತ ಪತ್ರ ಬಂದಿದ್ದಕ್ಕೆ ಪಕ್ಷೇತರ ಅಭ್ಯರ್ಥಿ ಎನ್​ಬಿ ಬನ್ನೂರು ಆಕ್ರೋಶ ವ್ಯಕ್ತಪಡಿಸಿದ್ದು, ಗೊಂದಲ ನಿವಾರಿಸದಿದ್ದರೆ ಕೌಂಟಿಂಗ್​ಗೆ ನಾವು ತಡೆ ಒಡ್ಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಇನ್ನು ನಿಪ್ಪಾಣಿ ನಗರದ ಮತಗಟ್ಟೆವೊಂದರಲ್ಲಿ ಮತದಾನ ಆಗಿದ್ದು 595. ಆದರೆ ಮತಗಳ ಕ್ರೂಢೀಕರಣ ವೇಳೆ 594 ಮತ ಪತ್ರಗಳು ಸಿಕ್ಕಿವೆ. ನಾಲ್ಕೈದು ಸಲ ಕೌಂಟಿಂಗ್ ಮಾಡಿದರೂ ಒಂದು ಮತ ವ್ಯತ್ಯಾಸವಾಗಿದೆ.

ಪಶ್ಚಿಮ ಶಿಕ್ಷಕರ ಕ್ಷೇತ್ರದ ಮೊದಲ ಹಂತದ ಮತ ಎಣಿಕೆ ಪೂರ್ಣವಾಗಿದೆ. ಮೊದಲ ಹಂತದ ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ಹೊರಟ್ಟಿ ಮುನ್ನಡೆ ಇದೆ. ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿಗೆ 3,048 ಮತಗಳು ಮುನ್ನಡೆಯಿದ್ದು, ಒಟ್ಟು 6250 ಮತ ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಪರ 2,700, ಪಕ್ಷೇತರ ಅಭ್ಯರ್ಥಿಗಳ ಪರ ಒಟ್ಟು 590 ಮತಗಳು ಚಲಾವಣೆಯಾಗಿವೆ. ಒಟ್ಟು ನಾಲ್ಕು ಸುತ್ತುಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.

ಇದನ್ನೂ ಓದಿ
Rahul Gandhi: ಅನುಮತಿ ಪಡೆಯದೆ ಲಂಡನ್​ಗೆ ಹೋದ ಸಂಸದ ರಾಹುಲ್ ಗಾಂಧಿ; ಪಕ್ಷದ ವತಿಯಿಂದ ಬಂತು ಪ್ರತಿಕ್ರಿಯೆ: ಏನದು? ಮತ್ತದೇ ಯಡವಟ್ಟು!
ರಸ್ತೆ ಬದಿಯ ಹೋಟೆಲ್​ನಲ್ಲಿ ಊಟ ಮಾಡಿದ ಈ ಸ್ಟಾರ್​ ನಟನನ್ನು ಗುರುತಿಸುತ್ತೀರಾ? ಇಲ್ಲಿದೆ ವೈರಲ್ ವಿಡಿಯೋ
ಸ್ಟೇಜ್​ ಮೇಲೆ ಕೆಜಿಎಫ್​2 ಡೈಲಾಗ್ ಹೊಡೆದ ಎಸ್.ಡಿ.ಪಿ.ಐ ಮುಖಂಡ
IPL 2022 Final Tickets: ಐಪಿಎಲ್ ಫೈನಲ್ ಮ್ಯಾಚ್ ಟಿಕೆಟ್ ಖರೀದಿಸುವುದು ಹೇಗೆ?

ಇದನ್ನೂ ಓದಿ: ಅಕ್ರಮವಾಗಿ ಗೋಮಾಂಸ ಮಾರುವ ಅಡ್ಡೆಗಳನ್ನು ನೆಲಸಮಗೊಳಿಸುವುದಾಗಿ ನೋಟೀಸ್ ಜಾರಿ ಮಾಡಿತು ಚಿಕ್ಕಮಗಳೂರು ನಗರಸಭೆ

ಹೊರಟ್ಟಿ ಫುಲ್ ಟೆನ್ಷನ್:
ಮತ ಏಣಿಕೆ ಆರಂಭಗೊಂಡ 10 ನಿಮಿಷದಲ್ಲಿ ಬಸವರಾಜ ಹೊರಟ್ಟಿ ಫುಲ್ ಟೆನ್ಷನ್ ಆಗಿದ್ದಾರೆ. ಮತ ಏಣಿಕೆ ಕೇಂದ್ರ ಬಿಟ್ಟು ಕಾರಿಡಾರ್​ನಲ್ಲಿ ಓಡಾಡುತ್ತಿದ್ದಾರೆ. ಕಾಲೇಜು ಕಾರಿಡಾರ್ ಬದಿಯಲ್ಲಿ ನಿಂತು ತಮ್ಮ ಆಪ್ತರ ಜೊತೆ ಮಾತನಾಡುತ್ತಿದ್ದಾರೆ.

ಚುನಾವಣಾಧಿಕಾರಿಗಳ ಮೇಲೆ ಏಜೆಂಟ್‌ರುಗಳ ಆಕ್ರೋಶ‌!

ಇನ್ನು ಚುನಾವಣಾಧಿಕಾರಿಗಳ ಮೇಲೆ ಏಜೆಂಟ್‌ರುಗಳ ಆಕ್ರೋಶಗೊಂಡಿದ್ದಾರೆ. ಟಿವಿ9ಗೆ ಕಾಂಗ್ರೆಸ್​​​​ ಏಜೆಂಟ್ ಶಬ್ಬೀರ್ ಜಮಾದಾರ್ ಮಾತನಾಡಿ, ಮತಪೆಟ್ಟಿಗೆಯ ಬಟ್ಟೆ ಬದಲಾಗಿದೆ, ಸೀಲ್ ಕೂಡ ಮಾಡಿಲ್ಲ. ನಾವು ಕೇಳಿದರೆ ಚುನಾವಣಾ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸರಿಯಾಗಿ ಸೀಲ್ ಹಾಕಿಲ್ಲ, ನಮ್ಮ ಮಾತು ಯಾರೂ ಕೇಳ್ತಿಲ್ಲ. ಸದಲಗಾ ಮತಕ್ಷೇತ್ರದಲ್ಲಿ ಮತಪೆಟ್ಟಿಗೆ ಮೇಲಿನ ಬಟ್ಟೆ ಬದಲಾಗಿದೆ. ಎರಡ್ಮೂರು ಬಾಕ್ಸ್​​ಗಳಲ್ಲಿ ಈ ರೀತಿ ಆಗಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:04 pm, Wed, 15 June 22